ಡಾ ರಾಜ್ಕುಮಾರ್ ವೀರಪ್ಪನಿಗೆ ವಚನ ಪಾಠ ಮಾಡುವ ಹಳೇ ವಿಡಿಯೋ ಮತ್ತೆ ವೈರಲ್ ಆಗಿದೆ.
ಸುಮಾರು 25 ವರ್ಷಗಳಷ್ಟು ಹಳೆಯ ವಿಡಿಯೋ ಆದರೂ, ಅದನ್ನು ನೋಡುವ ಜನರ ಸಂಖ್ಯೆ ಕಡಿಮೆಯಾಗಿಲ್ಲ.
2000ನೇ ಇಸವಿಯ ಜುಲೈ 30ರಂದು ರಾಜ್ಕುಮಾರ್ ಅವರನ್ನು ವೀರಪ್ಪನ್ ಅಪಹರಣ ಮಾಡಿದ. ವೀರಪ್ಪನ್ ಜೊತೆ 108 ದಿನಗಳನ್ನು ಅಣ್ಣಾವ್ರು ಕಳೆದರು.
ಆ ಸಂದರ್ಭದಲ್ಲಿ ರಾಜ್ಕುಮಾರ್ ‘ನೂರನೋದಿ ನೂರ ಕೇಳಿದರೇನು? ಆಸೆ ಹರಿಯದು, ರೋಷ ಬಿಡದು. ಮಜ್ಜನಕ್ಕೆರೆದು ಫಲವೇನು? ಮಾತಿನಂತೆ ಮನವಿಲ್ಲದ ಜಾತಿಡೊಂಬರ ನೋಡಿ ನಗುವ ನಮ್ಮ ಕೂಡಲಸಂಗಮದೇವ’ ವಚನವನ್ನು ವೀರಪ್ಪನ ಮತ್ತು ಸಹಚರರಿಗೆ ವಿವರಿಸಿ ಹೇಳಿದ್ದರು.
ಈ ಸಾಲುಗಳನ್ನು ತಮಿಳಿಗೂ ಭಾಷಾಂತರ ಮಾಡಿ ವಿವರಿಸಿದ್ದರು. ಅಣ್ಣಾವ್ರಿಗೆ ಬಸವಣ್ಣನ ವಚನಗಳು ಎಷ್ಟು ಕಂಠಪಾಠ ಆಗಿದ್ದವು ಎಂದು ವಿಡಿಯೋ ನೋಡಿದರೆ ಗೊತ್ತಾಗುತ್ತದೆ.