ನಿತ್ಯ ಲಿಂಗಪೂಜೆ ಮಾಡುತ್ತಿದ್ದ ರಾಣಿ ಚನ್ನಮ್ಮ ಅಪ್ಪಟ್ಟ ಶಿವಯೋಗ ಭಕ್ತೆ: ಸಿದ್ದು ಯಾಪಲಪರವಿ

ಬಸವ ಮೀಡಿಯಾ
ಬಸವ ಮೀಡಿಯಾ

ಕಿತ್ತೂರಿನ ವೀರರಾಣಿ ಚೆನ್ನಮ್ಮ ಜಯಂತ್ಯೋತ್ಸವ

ಬಸವಕಲ್ಯಾಣ

ಜಗತ್ತಿನ ಇತಿಹಾಸದಲ್ಲಿ ಬ್ರಿಟೀಷರ್ ವಿರುದ್ಧ ಮೊದಲಬಾರಿಗೆ ಧ್ವನಿ ಎತ್ತಿದ್ದ ಕಿತ್ತೂರು ರಾಣಿ ಚೆನ್ನಮ್ಮರ ಹೋರಾಟ, ಮನೋಭಾವ, ಆತ್ಮ ವಿಶ್ವಾಸ, ಪರಾಕ್ರಮಗಳು ಮಾದರಿಯಾಗಿವೆ ಎಂದು ಬರಹಗಾರರು ಹಾಗೂ ಚಿಂತಕರಾದ ಡಾ. ಸಿದ್ದು ಯಾಪಲಪರವಿ ಹೇಳಿದರು

ನಗರದ ಹರಳಯ್ಯನವರ ಗವಿಯಲ್ಲಿ ಅಂತರರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಸಂಯುಕ್ತಾಶ್ರಯದಲ್ಲಿ ನಡೆದ ಶರಣು ಶರಣಾರ್ಥಿ ಸಮಾವೇಶ, ಕಿತ್ತೂರಿನ ವೀರರಾಣಿ ಚೆನ್ನಮ್ಮನ ಜಯಂತ್ಯೋತ್ಸವದಲ್ಲಿ ಅನುಭಾವ ನೀಡಿದ ಅವರು ಕಿತ್ತೂರು ಸಣ್ಣ ಸಂಸ್ಥಾನವಾದರೂ ದೊಡ್ಡದಾದ ಬ್ರಿಟಿಷರ ವಿರುದ್ಧ ವೀರಾವೇಷದಿಂದ ಹೋರಾಡಿತ್ತು, ಸಮಸ್ಯೆ ದೊಡ್ಡದಾದರೂ ಎಂದೆಗುಂದಬಾರದು ಎಂಬುದು ಚನ್ನಮ್ಮನ ಹೋರಾಟದ ಬದುಕು ತಿಳಿಸುತ್ತದೆ.

ರಾಣಿ ಚನ್ನಮ್ಮ ಅಪ್ಪಟ್ಟ ಶಿವಯೋಗ ಭಕ್ತೆ, ನಿತ್ಯ ಲಿಂಗಪೂಜೆ ಮಾಡಿ ಅಂಗೈಯಲ್ಲಿನ ಲಿಂಗದಲ್ಲಿ ಪರಮಾತ್ಮನನ್ನು ಕಾಣುತ್ತಿದ್ದಳು. ಖಡ್ಗಕ್ಕೆ ಹೆದರದ ಥ್ಯಾಕರೆ ಶಿವಯೋಗಕ್ಕೆ ಹೆದರಿದ. ಜೀವನದುದ್ದಕ್ಕೂ ವಿಭೂತಿ ಧರಿಸಿ ನಮ್ಮೆಲ್ಲರಿಗೂ ಮಾದರಿಯಾಗಿ, ಲಿಂಗಾಯತ ಧರ್ಮದ ಭಾಗವಾದ ಗಣಾಚಾರ ತತ್ವವನ್ನು ೧೨ನೇ ಶತಮಾನದ ನಂತರ ೨೧ನೇ ಸಾಲಿನಲ್ಲಿ ಬಳಸಿದವರು ಚೆನ್ನಮ್ಮಾ. ಅವರ ಲಿಂಗಾಯತ ಧರ್ಮದ ತತ್ವನಿಷ್ಠೆ, ಆತ್ಮ ವಿಶ್ವಾಸ, ಇಷ್ಟಲಿಂಗಯೋಗವನ್ನು ಯಾರು ಮರೆಯಬಾರದು. ನಮ್ಮನ್ನೆಲ್ಲಾ ಜಾಗೃತಗೊಳಿಸಿದ ಮಹಿಳೆಯರ ಇತಿಹಾಸ ಮಕ್ಕಳಿಗೆ ಹೇಳಿಕೊಡಬೇಕು ಎಂದರು.

ದಿವ್ಯ ನೇತೃತ್ವ ವಹಿಸಿದ ಅಕ್ಕಮಹಾದೇವಿ ಗವಿಯ ಪೂಜ್ಯ ಸತ್ಯಕ್ಕತಾಯಿ ಮಾತನಾಡಿ, ವಚನ ಸಾಹಿತ್ಯದ ಸಂರಕ್ಷಣೆಗಾಗಿ ಅನೇಕ ಶರಣರು ಪ್ರಾಣ ಬಲಿದಾನ ನೀಡಿದ್ದಾರೆ. ದೇಶದ ಸ್ವತಂತ್ಯಕ್ಕಾಗಿಯೂ ಅನೇಕರು ಪ್ರಾಣ ತ್ಯಾಗ ಮಾಡಿದ್ದಾರೆ. ಕೇಲವರು ಬದುಕಿ ಅಗಲಿರುತ್ತಾರೆ. ಕೆಲವರು ಅಗಲಿ ಬದುಕುತ್ತಾರೆ. ಅಗಲಿ ಸಹ ನಮ್ಮೋಡನೆ ಅವರ ಆದರ್ಶ ಮಾರ್ಗದರ್ಶನಗಳೊಂದಿಗೆ ಬದುಕಿರುವ ಬಸವಣ್ಣ, ಅಕ್ಕಮಹಾದೇವಿ, ರಾಣಿ ಚೆನ್ನಮ್ಮ, ಅಂಬೇಡ್ಕರ, ಒಬ್ಬವ್ವ ಅಂತಹ ಹಲವಾರು ಮಹಾನ್ ವ್ಯಕ್ತಿಗಳ ಒಳ್ಳೆಯತನ ಮೈಗೂಡಿಸಿಕೊಳ್ಳಬೇಕು. ಅವರು ಬಿಟ್ಟು ಹೋಗಿರುವಂತಹ ಆದರ್ಶ, ಸಂದೇಶಗಳನ್ನು ಅನುಕರಣೆ ಮಾಡಬೇಕು ಎಂದು ನುಡಿದರು.

ಮಂಡಿ ಆಸ್ಪತ್ರೆಯ ವೈದ್ಯ ಡಾ. ವಿಶ್ವನಾಥಯ್ಯ ಮಂಡಿ ಉದ್ಘಾಟಿಸಿದರು. ಶ್ರೀ ಬಸವೇಶ್ವರ ದೇವಸ್ಥಾನ ಪಂಚಕಮಿಟಿ ನಿರ್ದೇಶಕ ಜಗನ್ನಾಥ ಖೂಬಾ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಸಾಸ್ತೂರನ ಯಶ್ವಂತ ಗಣೇಶಕರ್, ಶಿಕ್ಷಕ ಶಿವಕುಮಾರ ಬಿರಾದಾರ ಮಾತನಾಡಿದರು. ಶಿವಾನಂದ ಜಂಗೆ, ಶೋಭಾವತಿ ನಿಣ್ಣೆ, ವಿಜಯಲಕ್ಷ್ಮಿ ಮಡಿವಾಳ ಉಪಸ್ಥಿತರಿದ್ದರು. ಹರಳಯ್ಯ ಸಮಾಜದ ಉಪಾಧ್ಯಕ್ಷ ಗೌತಮ ಜಾಧವ ಧ್ವಜಾರೋಹಣಗೈದರು. ಗಾಣದ ಕಣ್ಣಪ್ಪ ಮಹಾಶಕ್ತಿಕೂಟದ ಶರಣೆಯರು ವಚನ ಪ್ರಾರ್ಥನೆ ನಡೆಸಿಕೊಟ್ಟರೆ, ಮಕ್ಕಳ ಕೂಟದ ಮಕ್ಕಳು ಗುರುಪೂಜೆ ಮಾಡಿದರು. ಕು. ಶ್ರೀಶೈಲಾ ವೀರಭದ್ರಪ್ಪಾ ವಡ್ಡೆ ರಾಣಿ ಚೆನ್ನಮ್ಮನ ಕುರಿತು ಏಕಾಭಿನಯ ಪಾತ್ರ ಮಾಡಿದಳು. ರಂಜನಾ ಭೂಶೆಟ್ಟಿ ಮತ್ತು ಮಂಜುನಾಥ ವಚನ ಸಂಗೀತ ನಡೆಸಿಕೊಟ್ಟರು. ಶಿವರಾಜ ನೀಲಕಂಠೆ ಸ್ವಾಗತಿಸಿದರೆ, ಸಂಗಮೇಶ ತೋಗರಖೇಡೆ ನಿರೂಪಿಸಿದರು. ಕಾವೇರಿ ರೇವಣಸಿದ್ಧ ಮಠಪತಿ ಭಕ್ತಿ ದಾಸೋಹಗೈದರು.

Share This Article
1 Comment
  • ಈಗಿನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ರಾಣಿ ಚನ್ನಮ್ಮನ ಆಡಳಿತಕ್ಕೆ ಒಳಪತ್ತಿದ್ದವು. ಅಲ್ಲಿ ಆಯಾ ಕಾಲದಲ್ಲಿ ಸ್ಥಾಪಿಸಿದ್ದ ಲಿಂಗಾಯತ ಮಠಗಳು ಈಗಲೂ ಇವೆ. ಆದರೆ, ಸರಿಯಾದ ಉಸ್ತುವಾರಿ ಇಲ್ಲದೆ ಎಲ್ಲವೂ ಹಾಳುಬಿದ್ದಿವೆ ಮತ್ತು ಅವುಗಳ ಆಸ್ತಿ ಯಾರ್ಯಾರದೋ ಪಾಲಾಗಿದೆ. ಅಲ್ಲಿನ ಯಾವ ಮಠಗಳಲ್ಲಿಯೂ ಲಿಂಗಾಯತ ಧರ್ಮದ ಪ್ರಚಾರ ಮತ್ತು ಆಚರಣೆಗಳು ನಡೆಯುತ್ತಿಲ್ಲ.

Leave a Reply

Your email address will not be published. Required fields are marked *