ನಂಜನಗೂಡು :
ವಿಶ್ವಗುರು, ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರನ್ನು ಕಳ್ಳ, ಕೊಲೆಗಾರ ಎಂದು ಅವಮಾನಿಸಿದ ರವಿ ಹಂಜ್ ಅವರ ಅಭಿಪ್ರಾಯ ಖಂಡನಾರ್ಹವಾದುದು.
ಹಂಜ್ ಅವರ ಕೃತಿಯಾದ ಬಸವ ಮಂಟಪವನ್ನು ಸರ್ಕಾರ ಮುಟ್ಟುಗೊಲು ಹಾಕಿಕೊಂಡಿರುವುದು ಸ್ವಾಗತರ್ಹ ಎಂದು ಸೋಮನಹಳ್ಳಿ ಗಂಗಾಧರೇಶ್ವರ ಮಠದ ನಿಯೋಜಿತ ಪೂಜ್ಯ ಬಸವಯೋಗಿ ಪ್ರಭುಗಳು ಹೇಳಿದ್ದಾರೆ.
ರವಿ ಹಂಜನ ಲೇಖನಗಳನ್ನು ಪ್ರಕಟಿಸುತ್ತಿರುವ ವಿಶ್ವವಾಣಿ ಪತ್ರಿಕೆಯನ್ನು ಸರ್ಕಾರ ಬ್ಯಾನ್ ಮಾಡಬೇಕು. ಸುಳ್ಳಿನಿಂದ ಕೂಡಿದ ಇಂತಹ ಪುಸ್ತಕದ ಬಿಡುಗಡೆ ಮಾಡಿದ ನಿವೃತ್ತ ಅಧಿಕಾರಿ ಶಂಕರ್ ಬಿದರಿ ಮತ್ತು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಮನು ಬಳಿಗಾರ ಅವರ ನಿಲುವು ಖಂಡನಾರ್ಹ.
ಲಿಂಗಾಯತರನ್ನು ಲಿಂಗಹತಿ ಮತ್ತು ಲಿಂಗಹತರು ಎಂದು ಕರೆದು ಅವಮಾನಿಸಿರುವ ರವಿ ಹಂಜನನ್ನು ಶಿಕ್ಷಿಸಬೇಕು. ಅವನನ್ನು ಕರ್ನಾಟಕದಿಂದ ಗಡಿಪಾರು ಮಾಡಬೇಕೆಂದು ಸ್ವಾಮೀಜಿ ಆಗ್ರಹಿಸಿದ್ದಾರೆ.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LKx5yQpivBVC6opWuKbovh
