ನರಗುಂದ:
ವೈದ್ಯಲೋಕದ ಸಂತ, ಧಾರವಾಡದ ಖ್ಯಾತ ಮನೋರೋಗ ತಜ್ಞರಾಗಿದ್ದ ಡಾ.ಆನಂದ ಪಾಂಡುರಂಗಿ ಅವರು ಗದುಗಿನ ಜಗದ್ಗುರು ತೋಂಟದಾರ್ಯ ಜಾತ್ರಾಮಹೋತ್ಸವದಲ್ಲಿ ಪ್ರತಿವರ್ಷ ಸಾವಿರಾರು ಜನರಿಗೆ ಉಚಿತವಾಗಿ ಚಿಕಿತ್ಸೆ ಮತ್ತು ಔಷದವನ್ನು ನೀಡುತ್ತಿದ್ದರು. ಅವರ ಸಮಾಜಪರ ಕಾಳಜಿ ಅಮೋಘವಾಗಿತ್ತು ಎಂದು ಭೈರನಹಟ್ಟಿ-ಶಿರೋಳ ಮಠದ ಪೀಠಾಧಿಪತಿ ಪೂಜ್ಯ ಶಾಂತಲಿಂಗ ಶ್ರೀಗಳು ಬಣ್ಣಿಸಿದರು.
ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಲಿಂಗೈಕ್ಯ ಡಾ. ಆನಂದ ಪಾಂಡುರಂಗಿಯವರಿಗೆ ನುಡಿನಮನ ಸಮಾರಂಭದಲ್ಲಿ ಮಾತನಾಡಿದರು.
ಬಡವರ ಆಧಾರಿಯಾಗಿದ್ದ ಶ್ರೀಯುತರು ಎಷ್ಟೋ ಬಾರಿ ಆಸ್ಪತ್ರೆಗೆ ಬಂದ ಬಡ ರೋಗಿಗಿಳಿಗೆ ಸ್ವತಃ ತಾವೇ ಹಣವನ್ನು ನೀಡಿದ ಕರುಣಾಮಯಿಗಳು. ಸಾಹಿತ್ಯದ ಮೇಲೆ ಅಪಾರ ಒಲವನ್ನು ಹೊಂದಿದ್ದ ಪಾಂಡುರಂಗಿ ಅವರು ತಮ್ಮ ಒತ್ತಡದ ಜೀವನದಲ್ಲಿಯೂ ದಿನಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತಿದ್ದರು. ತೋಂಟದಾರ್ಯ ವಿದ್ಯಾಪೀಠದ ಸದಸ್ಯರಾಗಿ ಸೇವೆಯನ್ನು ಸಲ್ಲಿಸುತ್ತಿದ್ದರು. ಅವರ ಅಗಲಿಗೆ ಈ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ಆರ್. ವಾಯ್. ಮುಳಗುಂದ ಮಾತನಾಡಿ, ಡಾ. ಪಾಂಡುರಂಗಿಯವರ ಸೇವೆ ಸದಾ ಸ್ಮರಣೀಯ ಎಂದು ಹೇಳಿದರು.
ಈ ಸಂರ್ಭದಲ್ಲಿ ಡಾ. ಆನಂದ ಪಾಂಡುರಂಗಿ ಅವರ ಭಾವಚಿತ್ರಕ್ಕೆ ಪುಷ್ಪ ವೃಷ್ಠಿಯ ಮೂಲಕ ನಮನ ಸಲ್ಲಿಸಲಾಯಿತು. ವೇದಿಕೆ ಮೇಲೆ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ನಿಡಗುಂದಿ, ಪ್ರೊ. ಆರ್ ಹೆಚ್. ತಿಗಡಿ, ಶಿಕ್ಷಕ ಅಮರೇಶ ತೆಗ್ಗಿನಮನಿ, ಹನಮಂತ ನರಗುಂದ, ನಿವೃತ್ತ ಶಿಕ್ಷಕ ಆರ್.ಪಿ. ಪಟ್ಟಣಶೆಟ್ಟಿ, ನಾಗಪ್ಪ ಮಣ್ಣೇರಿ ಪ್ರಮುಖರು ಉಪಸ್ಥಿತರಿದ್ದರು.
ಪ್ರೊ. ಆರ್. ಕೆ. ಐನಾಪೂರ ಕಾರ್ಯಕ್ರಮ ನಿರ್ವಹಿಸಿದರು. ಮಹಾಂತೇಶ ಹಿರೇಮಠ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6
