ತೋಂಟದಾರ್ಯ ಮಠದಲ್ಲಿ ಕಿತ್ತೂರು ಚೆನ್ನಮ್ಮ, ಮಹರ್ಷಿ ವಾಲ್ಮೀಕಿ ಜಯಂತಿ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ :

ಕ್ಷಾತ್ರತೇಜದ ವೀರರಾಣಿ ಕಿತ್ತೂರು ಚನ್ನಮ್ಮನವರ ಧೈರ್ಯ, ಸಾಹಸ ಅಪಾರವಾದುದು. ಬ್ರಿಟಿಷರ ವಿರುದ್ಧ ಸ್ವಾತಂತ್ರ‍್ಯ ಸಂಗ್ರಾಮಕ್ಕಿಂತ ಮೊದಲೇ ಹೋರಾಡಿದ ವೀರಮಹಿಳೆ. ಬ್ರಿಟಿಷರ ವಿರುದ್ಧ ಹೋರಾಡಿದ ಸ್ಮರಣಾರ್ಥ ಕಿತ್ತೂರು ವಿಜಯೋತ್ಸವ ಆಚರಿಸಲಾಗುತ್ತಿದೆ ಎಂದು ಡಾ. ತೋಂಟದ ಸಿದ್ಧರಾಮ ಮಾಹಾಸ್ವಾಮಿಗಳು ನುಡಿದರು.

ಲಿಂಗಾಯತ ಪ್ರಗತಿಶೀಲ ಸಂಘದ ೨೮೨೧ನೆಯ ಶಿವಾನುಭವದಲ್ಲಿ ಮಾತನಾಡಿದ ಶ್ರೀಗಳು, ಅನೇಕ ಕಠಿಣ ಸಂದರ್ಭಗಳನ್ನು ದಿಟ್ಟವಾಗಿ ಎದುರಿಸಿದ ವೀರಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. ಹೋರಾಟದ ಎರಡನೆಯ ಬಾರಿ ಬ್ರಿಟಿಷರು ಆಕ್ರಮಣ ಮಾಡಿ ಬಂಧಿಸಿದರು. ಜೈಲು ಸೇರಿದಾಗಲೂ ಲಿಂಗಪೂಜೆ, ಆಚಾರ, ವಿಚಾರ ಬಿಡದೆ ಪಾಲಿಸಿದ ಸಂಸ್ಕಾರವಂತೆ ಎಂದರು.

ಜಗತ್ಪ್ರಸಿದ್ಧವಾದ ರಾಮಾಯಣ ಮಹಾಕಾವ್ಯ ರಚಿಸಿದ ಶ್ರೀ ವಾಲ್ಮೀಕಿ ಅವರು ಭಾರತೀಯ ಸಂಸ್ಕೃತಿ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮಹಾಕಾವ್ಯದ ಮೂಲಕ ಧರ್ಮ, ಸತ್ಯ, ನ್ಯಾಯ, ಕರ್ತವ್ಯನಿಷ್ಠತೆ, ಆದರ್ಶ ಜೀವನದ ಮೌಲ್ಯಗಳನ್ನು ಜಗತ್ತಿಗೆ ಪರಿಚಯಿಸಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ಮೈತ್ರೇಯಿಣಿ ಗದಿಗೆಪ್ಪಗೌಡ ಅವರು ಮಾತನಾಡುತ್ತಾ, ಮಹರ್ಷಿ ಶ್ರೀ ವಾಲ್ಮೀಕಿ ಅವರ ರಾಮಾಯಣ ಮಹಾಕಾವ್ಯದ ಸಂದೇಶಗಳು ಆದರ್ಶವಾದವುಗಳು. ಮನುಷ್ಯ ಜೀವನದಲ್ಲಿ ಹೇಗೆ ಬದುಕಬೇಕು, ಜೀವನದಲ್ಲಿ ಬರುವ ಅಗ್ನಿಪರೀಕ್ಷೆಗಳನ್ನು ಹೇಗೆ ಎದುರಿಸಬೇಕು ಎಂದು ತಿಳಿಸಿಕೊಡುತ್ತವೆ ಎಂದರು.

ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ. ಪ್ರಭಾ ದೇಸಾಯಿ, ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಂಗಳಾ ಕೆ. ನೀಲಗುಂದ, ಕಾನೂನು ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಜಯಲಕ್ಷ್ಮಿ ಅಂಗಡಿ, ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಮಾಡಿದ ಶಿವಲೀಲಾ ಅಕ್ಕಿ ಅವರಿಗೆ ಗೌರವ ಸನ್ಮಾನ ಮಾಡಲಾಯಿತು.

ಪ್ರತೀಕ್ಷಾ ಗುಮ್ಮಗೋಳ ಧರ್ಮಗ್ರಂಥ ಪಠಣ, ಅಮೃತ ಅಳಗುಂಡಗಿ ಅವರಿಂದ ವಚನ ಚಿಂತನ ಜರುಗಿತು. ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ಅವರಿಂದ ವಚನ ಸಂಗೀತ ಜರುಗಿತು. ದಾಸೋಹ ಸೇವೆಯನ್ನು ಲತಾ ಬಾಲಚಂದ್ರ ಬರಮಗೌಡ ವಹಿಸಿದ್ದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಡಾ. ಉಮೇಶ ಪುರದ ಅವರು ಸ್ವಾಗತ ಕೋರಿದರು. ಪ್ರತಿಭಾ ಬಡ್ನಿ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.

ದಾನಯ್ಯ ಗಣಾಚಾರಿ, ಬಾಲಚಂದ್ರ ಬರಮಗೌಡ, ಚನ್ನವೀರ ಹುಣಸಿಕಟ್ಟಿ, ಹುಚ್ಚಣ್ಣ ಶಹಪುರ, ರಾಚಪ್ಪ ಮಿಣಜಿಜಗಿ, ಪ್ರಕಾಶ ಅಸುಂಡಿ, ಡಾ. ರಮೇಶ ಕಲ್ಲನಗೌಡ, ಡಾ. ಪ್ರಭು ಗಂಜಿಹಾಳ, ಡಾ. ಆದೇಶ ಅಂಗಡಿ, ಎಸ್. ಐ. ಪಟ್ಟೇದ, ಸೋಮು ಪುರಾಣಿಕ, ಸುನಂದ ಪಿಳ್ಳೆ, ವೀರಣ್ಣ ಗೋಟಡಕಿ ಮುಂತಾದವರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *