ಶ್ರಾವಣಮಾಸ: ಮುರುಘಾ ಪರಂಪರೆಯ ಶಿರಹಟ್ಟಿ ಸಿದ್ಧಲಿಂಗ ಸ್ವಾಮಿಗಳ ಸ್ಮರಣೆ

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ:

ಇಲ್ಲಿನ ಕರ್ತೃ ಮುರಿಗೆ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಸನ್ನಿಧಿಯಲ್ಲಿ ಶ್ರಾವಣ ಮಾಸದ ಪ್ರಯುಕ್ತ ವಚನಾಭಿಷೇಕ, ವಚನ ಪಠಣ ಸೇರಿದಂತೆ ಗೌರವ ಸಮರ್ಪಣೆ ಈಚೆಗೆ ನಡೆಯಿತು.

ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಮುರುಘಾ ಪರಂಪರೆಯ ೪ನೇ ಪೀಠಾಧಿಪತಿಗಳಾದ ಶಿರಹಟ್ಟಿ ಸಿದ್ಧಲಿಂಗ ಸ್ವಾಮಿಗಳವರ ಸ್ಮರಣೆ ಹಾಗೂ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸೇವಾಕರ್ತರುಗಳಾದ ಎನ್.ಆರ್. ಪುರ ಅನುಭವ ಮಂಟಪದ  ಪದಾಧಿಕಾರಿಗಳು, ಸೊಂಡೇಕೊಳದ ಶ್ರೀಮತಿ ಕವಿತ ಮತ್ತು ಶ್ರೀನಿವಾಸ, ರೂಪ ಮತ್ತು ಡಾ. ಸಿ.ಟಿ. ಜಯಣ್ಣ ಕುಟುಂಬ ಹಾಗೂ ಪ್ರೊ. ಗಿರಿಜಮ್ಮ ಮತ್ತು ಪ್ರೊ. ಸಿ.ಎಂ. ಧರ್ಮಪ್ಪ ಹಾಗೂ ವಾಗೀಶ್ ಡಿ. ಅವರುಗಳು ವಹಿಸಿಕೊಂಡಿದ್ದು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *