ದೇವಲೋಕ ಮರ್ತ್ಯಲೋಕ ಎಂಬ ಎರಡು ಲೋಕಗಳಿಲ್ಲ, ಇರುವುದು ಒಂದೇ.
ನಾವು ಸರಿಯಾಗಿ ಹೋದರೆ ಅದೇ ದೇವಲೋಕ. ದಾರಿ ತಪ್ಪಿದರೆ, ಅದೇ ಮರ್ತ್ಯಲೋಕ.
ಸರಿಯಾಗಿ ಹೋದರೆ ಶಾಂತಿ, ಸಮಾಧಾನ. ಆಗದಿದ್ದರೆ ಜೀವನ ವಿನಾಶ.
ಸಿದ್ದೇಶ್ವರ ಶ್ರೀಗಳ ಮಧುರ ನುಡಿಗಳಲ್ಲಿ ಬಸವಣ್ಣನವರ ಪ್ರಸಿದ್ಧ ವಚನ ಕೇಳಿ.
ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿರೋ!
ಸತ್ಯವ ನುಡಿವುದೇ ದೇವಲೋಕ!
ಮಿಥ್ಯವ ನುಡಿವುದೇ ಮರ್ತ್ಯಲೋಕ!
ಆಚಾರವೇ ಸ್ವರ್ಗ! ಅನಾಚಾರವೇ ನರಕ!
ನೀವೇ ಪ್ರಮಾಣ ಕೂಡಲಸಂಗಮದೇವ.