ದಾವಣಗೆರೆ :
ವಚನಾಮೃತ ಬಳಗದಿಂದ ಕರ್ನಾಟಕದ ಸಾಂಸ್ಕೃತಿಕ ನಾಯಕ, ಜಗಜ್ಯೋತಿ, ಬಸವಣ್ಣನವರ ಜಯಂತ್ಯುತ್ಸವ ಇತ್ತೀಚೆಗೆ ನಡೆಯಿತು.
ಬಳಗದ ಸದಸ್ಯರಿಗೆ ವಚನ ಹಾಗೂ ವಚನ ಭಾವಾರ್ಥವನ್ನು ವಿವರಿಸುವ ಸ್ಪರ್ಧೆಯನ್ನು ಜಯಂತಿ ಅಂಗವಾಗಿ ಏರ್ಪಡಿಸಲಾಗಿತ್ತು.

ಸ್ಪರ್ಧೆಯಲ್ಲಿ ಭಾಗವಹಿಸಿದವರು ಶರಣ, ಶರಣೆಯರ ವಚನಗಳನ್ನು ಆಯ್ದುಕೊಂಡು ಹೇಳಿ ಅರ್ಥ ವಿವರಿಸಿದರು. ಜೀವನದಲ್ಲಿ ವಚನಗಳ ಪ್ರಾಮುಖ್ಯತೆಗಳ ಬಗ್ಗೆ ಅವರವರ ಅನುಭವಗಳನ್ನು ವ್ಯಕ್ತಪಡಿಸಿದರು.
ಸ್ಪರ್ಧೆಯ ತೀರ್ಪುಗಾರರಾಗಿ ಮಮತಾ ನಾಗರಾಜ ಕಾರ್ಯ ನಿರ್ವಹಿಸಿ, ಶರಣರು ನಡೆದು ಬಂದ ಹಾದಿ, ಕಾಯಕ ಶ್ರದ್ಧೆ, ಅವರ ಜೀವನದ ಬಗ್ಗೆ ಮಾತನಾಡಿದರು.

ವಚನಾಮೃತ ಬಳಗದ ಅಧ್ಯಕ್ಷರಾದ ಸೌಮ್ಯ ಸತೀಶ ಅವರ ನೇತೃತ್ವದಲ್ಲಿ ನಾಲ್ಕು ವರ್ಷಗಳನ್ನು ಪೂರೈಸಿದ ಬಳಗ, ಅದರ ಸದಸ್ಯರು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕತ್ಯಾಯಿನಿ, ಸುಮ, ರಾಜೇಶ್ವರಿ, ಭಾರತಿ, ದೀಪ, ಕವಿತಾ, ಸರೋಜ, ವಿಜಯಾ, ರಾಜಶ್ರೀ, ಸುರೇಖಾ, ರೇಖಾ, ರೂಪ ಮತ್ತಿತರರು ಭಾಗವಹಿಸಿದ್ದರು.

ಸ್ಪರ್ಧಾ ವಿಜೇತರ ಬಹುಮಾನದ ದಾಸೋಹ ಸೇವೆ ಸೌಮ್ಯ ಸತೀಶ ಅವರದಾಗಿತ್ತು.
