ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಿಂದ ಅನಾವರಣಗೊಂಡ ‘ಬಸವ ಆರ್ಕೇಡ್’

ಬಸವ ಮೀಡಿಯಾ
ಬಸವ ಮೀಡಿಯಾ

ಹಾವೇರಿ :

ಇಲ್ಲಿನ ಬಸವ ಬಳಗದ ಹಿರಿಯ ಸದಸ್ಯರಾದ ಉಳಿವೆಪ್ಪ ಪಂಪಣ್ಣವರ ಅವರು ನೂತನವಾಗಿ ನಿರ್ಮಿಸಿದ “ಬಸವ ಆರ್ಕೇಡ್” ಉದ್ಘಾಟನೆಯು ಬಸವತತ್ವದಂತೆ ನಡೆಯಿತು.

ಬಸವ ಬಳಗದವರಿಂದ ಬಸವಾದಿ ಶಿವಶರಣರ ತತ್ವಗಳನ್ನು ಮನೆ-ಮನಕ್ಕೆ ಮುಟ್ಟಿಸುವ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮ ಇದೇ ಸಂದರ್ಭದಲ್ಲಿ ಜರುಗಿತು.

ಬಳಗದ ಅಧ್ಯಕ್ಷ ವಿ.ಜಿ ಯಳಗೇರಿ, ಶಿವಬಸಪ್ಪ ಮುದ್ದಿ, ಪವನ ಪಂಪಣ್ಣವರ ಮತ್ತು ಜಗದೀಶ ಹತ್ತಿಕೋಟಿ ಅವರುಗಳು ಬಸವಾದಿ ಶರಣರ ವಚನ ಸಾಹಿತ್ಯ ಮತ್ತು ಶರಣರ ತತ್ವಗಳಲ್ಲಿರುವ ವೈಚಾರಿಕ ಅಂಶಗಳ ಕುರಿತಾಗಿ ಅನುಭಾವ ನೀಡಿದರು.

ಪುಟ್ಟ ಮಕ್ಕಳಾದ ಮಾನ್ಯಾ ಪಂಪಣ್ಣವರ, ಸಿದ್ದಲಿಂಗೇಶ ಮಾಸೂರ ವಚನಗಳನ್ನು ಹೇಳಿದರು. ಕಾವ್ಯಾ ಅಂಗಡಿ ವಚನ ಪ್ರಾರ್ಥನೆ ಮಾಡಿದರು.

ಉಳಿವೆಪ್ಪ ಪಂಪಣ್ಣವರ ಸ್ವಾಗತಿಸಿದರು. ಬಳಗದ ಉಪಾಧ್ಯಕ್ಷ ಮಲ್ಲಿಕಾರ್ಜುನ ಹಿಂಚಿಗೇರಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಮುರಿಗೆಪ್ಪ ಕಡೇಕೊಪ್ಪ, ಶಾಂತಪ್ಪ ಪಂಪಣ್ಣವರ, ಎನ್.ಬಿ ಕಾಳೆ, ಮಾಲತೇಶ ಕರೆಮಣ್ಣವರ, ಶಿವಯೋಗಿ ಬೆನ್ನೂರ, ಶಿವಬಸಪ್ಪ ಪಟ್ಟಣಶೆಟ್ಟಿ, ಶಿವಾಜಿ ಅಂಗಡಿ, ಗಂಗಾಧರ ಮಾಸೂರ, ಕೆ.ಎಂ. ಬಿಜಾಪುರ, ಮಠಪತಿ, ಶಿವಾನಂದ ಹೊಸಮನಿ, ಹನುಮಂತಪ್ಪ ಮಡಿವಾಳರ, ಪುಟ್ಟಪ್ಪ ಮಲಕಣ್ಣನವರ, ಶೋಭಾ ಪಂಪಣ್ಣನವರ, ನಿಶಾ ಪಂಪಣ್ಣನವರ, ಬಂಧುಗಳು-ಮಿತ್ರರು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಪ್ರಸಾದ ದಾಸೋಹ ಏರ್ಪಡಿಸಲಾಗಿತ್ತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *