ಬೀದರಿನಲ್ಲಿ ವಚನ ಪಿತಾಮಹ ಫ.ಗು. ಹಳಕಟ್ಟಿ ಸ್ಮರಣೋತ್ಸವ

ರವಿ ಪಾಪಡೆ
ರವಿ ಪಾಪಡೆ

ಬೀದರ:

ಡಾ. ಮಾತೆ ಮಹಾದೇವಿ ಬಸವ ಬಳಗ ಹಾಗೂ ಯುವ ರಾಷ್ಟ್ರೀಯ ಬಸವ ದಳದ ವತಿಯಿಂದ ವಚನ ಪಿತಾಮಹ, ಶರಣ ಫ.ಗು. ಹಳಕಟ್ಟಿ ಅವರ ಸ್ಮರಣೋತ್ಸವವನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಬಸವರಾಜ ಹುಗ್ಗಿ ಪಾಟೀಲ ಅವರು ವಚನ ಪಿತಾಮಹ ಹಳಕಟ್ಟಿ ಅವರ ಜೀವನ ಚರಿತ್ರೆ, ಸಾಹಿತ್ಯ ಸೇವೆ ಹಾಗೂ ವಚನಗಳನ್ನು ಸಂಗ್ರಹಿಸಿ ಉಳಿಸಿದ ಅವರ ಅಪಾರ ಕೊಡುಗೆಯ ಕುರಿತು ಮಾತನಾಡಿದರು.

ಹಳಕಟ್ಟಿ ಅವರ ಆದರ್ಶಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿದ್ದು, ಪ್ರತಿಯೊಬ್ಬರೂ ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ರವಿ ಪಾಪಡೆ ಅವರು ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಸಿದ್ದು ಶಟ್ಕಾರ್, ರಾಜಕುಮಾರ ಪಾಟೀಲ, ಅರವಿಂದ ದುಮ್ಮನ್ಸೂರೆ, ಗಣೇಶ ಬಿರಾದರ ಸೇರಿದಂತೆ ಹಲವಾರು ಬಸವಾಭಿಮಾನಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP?s=sh&p=a&ilr=4&amv=1

Share This Article
Leave a comment

Leave a Reply

Your email address will not be published. Required fields are marked *

ರಾಜ್ಯ ಸಂಘಟನಾ ಕಾರ್ಯದರ್ಶಿ, ರಾಷ್ಟ್ರೀಯ ಬಸವ ದಳ