ಧಾರವಾಡ
ಕರ್ನಾಟಕ ವಿಶ್ವ ವಿದ್ಯಾಲಯದ ಬಸವೇಶ್ವರ ಪೀಠದ ಬಸವಶ್ರೀ ಪ್ರಶಸ್ತಿಗೆ ಎಂ.ಎಂ.ಕಲಬುರ್ಗಿ ಟ್ರಸ್ಟ್ ಅಧ್ಯಕ್ಷ ಪ‍್ರೊ.ವೀರಣ್ಣ ರಾಜೂರ ಆಯ್ಕೆ ಆಗಿದ್ದಾರೆ. ಪ್ರಶಸ್ತಿಯು ₹ 25 ಸಾವಿರ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ.
ಮೇ 9ರಂದು ಕರ್ನಾಟಕ ವಿವಿಯಲ್ಲಿ ನಡೆಯುವ ಬಸವ ಜಯಂತ್ಯುತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪೀಠದ ಸಂಯೋಜಕ ಪ್ರೊ.ನಿಜಲಿಂಗಪ್ಪ ಮಟ್ಟಿಹಾಳ ತಿಳಿಸಿದ್ದಾರೆ.
