ಪಾಂಡೋಮಟ್ಟಿ:
ಯಾವುದೇ ವ್ತಕ್ತಿ ಒಂದು ಧರ್ಮದ ತತ್ವ, ಸಿದ್ಧಾಂತಗಳನ್ನು ಅಳವಡಿಸಿ ಕೊಂಡರೆ ಬಹುದೇವೋಪಾಸಕ ಆಗಿರಲು ಸಾದ್ಯವಿಲ್ಲ ಎಂದು ಪಾಂಡೋಮಟ್ಟಿ ವಿರಕ್ತಮಠದ ಪೂಜ್ಯ ಡಾ. ಗುರುಬಸವ ಸ್ವಾಮಿಜಿ ಹೇಳಿದರು.
ಚನ್ನಗಿರಿ ತಾಲ್ಲೂಕ ಪಾಂಡೋಮಟ್ಟಿ ವಿರಕ್ತ ಮಠದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ 887ನೇ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ ಶರಣ ಮಡಿವಾಳ ಮಾಚಿದೇವರ ಸ್ಮರಣೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಯಾವುದೇ ವ್ಯಕ್ತಿಯು ಧರ್ಮದ ತಳಹದಿ ತಿಳಿಯದೇ ಅತಂತ್ರವಾಗಬಾರದು. ವೀರ ಶರಣ ಮಡಿವಾಳ ಮಾಚಿದೇವರು ೬೪ ವಿದ್ಯೆ ಒಳಗೊಂಡಿರುವ ವಚನಗಳು ರಚಿಸಿದ್ದಾರೆ. ಜೀವನದಲ್ಲಿ ಯಾವರೀತಿಯ ಸಂಸ್ಕಾರ ಅನುಸರಿಸಬೇಕು ಎಂಬುದನ್ನು ಅವರು ತಿಳಿಸಿಕೊಟ್ಟಿದ್ದಾರೆ.
ಸರ್ಪ ಬಲ್ಲದು ವಾಯು ಗುಣವ, ಇರುವೆ ಬಲ್ಲದು ಮದುರದ ಗುಣವ, ಕೊಳಿ ಬಲ್ಲದು ವೇಳೆಯ ಗುಣವ, ಕಾಗೆ ಬಲ್ಲದು ಗೋತ್ರದ ಗುಣವ, ಮಾನವನಾಗಿ ಹುಟ್ಟಿದ ಬಳಿಕ ಶಿವತತ್ವ ಜ್ಞಾನ ತಿಳಿಯದಿದ್ದರೆ ಪ್ರಾಣಿ-ಪಕ್ಷಿಗಳಿಗಿಂತ ಕರ-ಕಷ್ಟನೋಡ ಎಂಬುದು ಶರಣರ ತತ್ವಾದರ್ಶ ಇಂದಿಗೂ ಸತ್ಯವಾಗಿದೆ ಎಂದು ಮಾಚಿದೇವ ವಚನವೊಂದರಲ್ಲಿ ತಿಳಿಸಿದ್ದಾರೆ ಎಂದು ಹೇಳಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಚ್.ಕೆ. ಲಿಂಗರಾಜು ಮಾತನಾಡಿ, ಮಾಚಿದೇವ ಶರಣರು ನೇರ, ನಿಷ್ಠುರ ಚಿಂತನೆಗಳನ್ನು ಅಳವಡಿಸಿಕೊಂಡಿದ್ದರು. ಬಸವಾದಿ ಶರಣರು ಕನ್ನಡ ನಾಡಿನಲ್ಲಿ ವಚನ ಪರಂಪರೆ ನೀಡಿದ್ದು, ಸತ್ತು ಬದುಕಿದ ನಿದರ್ಶನಕ್ಕೆ ಮಾದರಿಯಾಗಿದ್ದಾರೆ.
ಶರ-ಬಾಣ, ಣು-ಬಾಗು ಎಂದರೆ ಶಿವನಿಗೆ ಬಾಗು ಎಂದಾಗಿದೆ. ಮಾತಿನಲ್ಲಿ ಮಾತೃಕೆ, ಉದಾರತೆ, ಸಂಯತೆ, ಸತ್ಯ, ಮಾಣಿಕ್ಯದಂತೆ ಇರಬೇಕು ಎಂಬುದು ಮಾಚಿದೇವರ ಉದ್ದೇಶವಾಗಿತ್ತು, ಶ್ರೇಷ್ಠ ಶರಣರ ಮತ್ತು ಏಕದೇವ ನಿಷ್ಠೆ ಹೊಂದಿದವರ ಬಟ್ಟೆಗಳನ್ನು ಸ್ವಚ್ಚಗೋಳಿಸುವುದರ ಜೊತೆಗೆ ಅಂತರಂಗ, ಬಹಿರಂಗ ಹಾಗೂ ಮನುಷ್ಯನ ಮನದ ಮಲಿನತೆ ಸ್ವಚ್ಚಗೊಳಿಸುವುದು ಎಂದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಾಲ್ಕುವರೆ ವರ್ಷದ ಬೇಬಿ ಬಸವಪೂರ್ವ 24 ವಚನಗಳನ್ನು ಪಠಿಸಿದ್ದು ಎಲ್ಲ ಭಕ್ತರ ಗಮನ ಸೆಳೆಯಿತು. ರಾಷ್ಟ್ರೀಯ ಬಸವದಳದ ಜ್ಯೋತಿ ಸದಾನಂದ ಅನುಭಾವ ನೀಡಿದರು.
ದ್ರುವ ಶಿಕ್ಷಣ ಸಂಸ್ಥೆಯ ಅದ್ಯಕ್ಷ ಪ್ರಶಾಂತ, ಶಿಕಾರಿಪುರ ಉದ್ಯಮಿ ಎನ್.ವಿ. ಈರೇಶ, ಕಲಾವಿದ ಜಗನಾಥ, ಜೆ.ಬಿ. ಕವಿತಾ ಚಂದ್ರಪ್ಪ, ಸುಮ ಯತೀಶ, ಜ್ಯೋತೆಮ್ಮ ಶಿವಲಿಂಗಯ್ಯ, ಸುವರ್ಣಮ್ಮ ದೇಶಾಣಿ, ಶಿವಮೂರ್ತಪ್ಪ, ಚನ್ನಬಸಪ್ಪ, ಎಂ.ಬಿ. ನಾಗರಾಜ ಕಾಕನೂರ ಮತ್ತಿತರರು ಇದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6
