ಬಸವಾಧಿ ಶರಣರನ್ನು ಹಿಂದೂ ಧರ್ಮದಲ್ಲಿ ಸೇರಿಸುವ ಹುನ್ನಾರ
ಶಹಾಬಾದ
ಸೆಪ್ಟೆಂಬರ್ ೨೭ರಂದು ಕಲಬುರಗಿಯಲ್ಲಿ ಆಯೋಜಿಸಲಾಗಿರುವ ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ವಿರೋಧ ವ್ಯಕ್ತಪಡಿಸಿ ಬಸವತತ್ವ ಹಾಗೂ ಸಂವಿಧಾನ ಸಂರಕ್ಷಣೆ ಹೋರಾಟ ಸಮಿತಿ, ಸೆಪ್ಟೆಂಬರ್ ೨೫ರಂದು ಕಲಬುರಗಿ ನಗರದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ಹಾಗೂ ವಿಚಾರ ಸಂಕಿರಣ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಹಾಗೂ ಹೋರಾಟ ಸಮಿತಿಯ ಮುಖಂಡರಾದ ಮರಿಯಪ್ಪ ಹಳ್ಳಿ ತಿಳಿಸಿದರು.
ರವಿವಾರ ನಗರದ ಅರಿವಿನ ಮನೆಯಲ್ಲಿ ಹೋರಾಟದ ರೂಪರೇಷೆಯ ಕುರಿತು ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದೇ ಸೆ. ೨೫ರಂದು ಬೆಳಿಗ್ಗೆ ೧೧ ಗಂಟೆಗೆ ಕನ್ನಡ ಭವನದಿಂದ ಜಗತ್ ವೃತ್ತದವರೆಗೆ ಬೃಹತ್ ರ‍್ಯಾಲಿ ನಡೆಯಲಿದೆ ಎಂದರಲ್ಲದೇ ವೈದಿಕ ತತ್ವ ಹಾಗೂ ವರ್ಣಾಶ್ರಮ ವ್ಯವಸ್ಥೆಯನ್ನು ವಿರೋಧಿಸಿ ಬಸವಣ್ಣನವರು ೧೨ನೇ ಶತಮಾನದದಲ್ಲಿ ವೈದಿಕಕತೆಯ ಬದಲಾಗಿ ಲಿಂಗಾಯತ ಧರ್ಮವನ್ನು ಕೊಟ್ಟಿದ್ದಾರೆ.

ಹಿಂದೂ ಧರ್ಮದಲ್ಲಿನ ಮೂಢಾಚರಣೆಗಳ ವಿರುದ್ಧವೇ ಬಸವಾಧಿ ಶರಣರು ದೊಡ್ಡ ಕ್ರಾಂತಿಯನ್ನೇ ಮಾಡಿ ಹೋಗಿದ್ದಾರೆ.
ಆದರೆ ಇಂದು ಬಸವಾಧಿ ಶರಣರನ್ನು ಮತ್ತೆ ವೈದಿಕ ಹಾಗೂ ಹಿಂದೂ ಧರ್ಮದಲ್ಲಿ ಸೇರಿಸುವ ಹುನ್ನಾರ ನಡೆಯುತ್ತಿದೆ. ಬಸವ ಪರಂಪರೆಯನ್ನು ಹಾಗೂ ಸಂವಿಧಾನ ರಕ್ಷಣೆ ಮಾಡುವದು ನಮ್ಮೆಲ್ಲರ ಕರ್ತವ್ಯವಾಗಿದೆ. ನಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳದೇ ಹೋದರೆ ಮುಂದೆ ಮತ್ತೆ ನಮ್ಮನ್ನು ಗುಲಾಗಿರಿಯಲ್ಲೇ ಬದುಕುವ ವಾತಾವರಣ ಸೃಷ್ಠಿಯಾಗುತ್ತದೆ.ಆದ್ದರಿಂದ ಎಲ್ಲರೂ ಒಟ್ಟಾಗಿ ಸೇರಿಕೊಂಡು ಸೆಪ್ಟೆಂಬರ್ ೨೫ ರಂದು ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನೆ ಮಾಡುವ ಮೂಲಕ ಎಚ್ಚರಿಕೆ ನೀಡಲಾಗುತ್ತದೆ ಎಂದರು.
ಮುಖಂಡರಾದ ರವಿ ಸಜ್ಜನ, ಶಿವಕುಮಾರ ಬಿದ್ರೆ ಹಾಗೂ ಧನರಾಜ ತಾಂಬೋಳೆ ಮಾತನಾಡಿ, ಹನ್ನೆರಡನೆಯ ಶತಮಾನದ ಶರಣ ಚಳವಳಿಯ ಮೂಲ ಪಾಠಗಳನ್ನೇ ಬುಡಮೇಲು ಮಾಡುವ, ಐತಿಹಾಸಿಕ ಸತ್ಯಗಳನ್ನು ಸಂಪೂರ್ಣವಾಗಿ ತಿರುಚುವ ಇಂತಹ ವ್ಯವಸ್ಥಿತ ಪ್ರಯತ್ನಗಳನ್ನು ನಾನು ಬಲವಾಗಿ ವಿರೋಧಿಸುತ್ತೇವೆ.
ಕನ್ನೇರಿ ಮಠದ ಸ್ವಾಮಿ ಶರಣ ತತ್ವದ ಪ್ರಸಾರ ಮಾಡಬೇಕಾದ ಜವಾಬ್ದಾರಿ ಹೊತ್ತಿರುವ ಮಠದ ಪೀಠಾಧಿಪತಿಯಾಗಿ ಇಂದು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ವೈದಿಕ ಬಲಪಂಥೀಯ ರಾಜಕೀಯ ಅಜೆಂಡಾಗಳ ಜೊತೆ ಗುರುತಿಸಿಕೊಳ್ಳುತ್ತಿರುವುದು ಅತ್ಯಂತ ವಿಷಾದನೀಯ. ಶರಣರ ಅಸ್ಮಿತೆಯನ್ನು ಅಳಿಸಿಹಾಕುವ ಇಂತಹ ಗೊಂದಲದ ವಾತಾವರಣವನ್ನು ಸೃಷ್ಟಿಸುತ್ತಿರುವ ಮಠಾಧೀಶರ ನಡೆಯನ್ನು ಲಿಂಗಾಯತ ಸಮುದಾಯ ಕಣ್ಣುಮುಚ್ಚಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ವೈದಿಕರ ಮತ್ತು ಆರ್‌ಎಸ್‌ಎಸ್ ಕೈಗೊಂಬೆಯಾಗಿರುವ ಕನ್ನೇರಿ ಸ್ವಾಮಿ ಇಂದು ಲಿಂಗಾಯತ ವಿರೋಧಿ ಕಾರ್ಯ ನಡೆಸುತ್ತಿದ್ದಾನೆ. ಇದರ ವಿರುದ್ಧ ಹೋರಾಟ ಅನಿವಾರ್ಯ ಎಂದರು.
ಶರಣಗೌಡ ಪಾಟೀಲ, ಶಿವಮೂತಿ ಪಟ್ಟೇದಾರ, ಸುಭಾಷ ಸಾಕ್ರೆ, ಶರಣು ಪಗಲಾಪೂರ, ಪೂಜಪ್ಪ ಮೇತ್ರೆ, ಮರೆಪ್ಪ ಮೇತ್ರೆ, ದೇವೆಂದ್ರ ಕಾರೊಳ್ಳಿ, ಶಿವಲಿಂಗಪ್ಪ ಹೆಬ್ಬಾಳಕರ್, ಮಲ್ಕಪ್ಪ ಮುದ್ದಾ, ಮಲ್ಲಿಕಾರ್ಜುನ ಕಟ್ಟಿ, ಸ್ನೇಹಲ್ ಜಾಯಿ, ನರಸಿಂಹಲು ರಾಯಚೂರಕರ, ಸುನೀಲ ಮೆಂಗನ್, ಶರಣಗೌಡ ಪಾಟೀಲ, ಪ್ರವೀಣ ರಾಜನ್, ಮಲ್ಲಿಕಾರ್ಜುನಗೌಡ, ಕುಪೇಂದ್ರ ತುಪ್ಪದ, ರಮೇಶ ಜೋಗದನಕರ್, ಶ್ರವಣಕುಮಾರ, ಪಿಂಟು ಕುಂಬಾರ ಸೇರಿದಂತೆ ಅನೇಕರು ಸಭೆಯಲ್ಲಿ ಭಾಗವಹಿಸಿದ್ದರು.
