ಬೆಂಗಳೂರು :
ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರನ್ನು ಅವಹೇಳನ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಸವಪರ ಸಂಘಟನೆಗಳು ರವಿವಾರ ರಾಜಾಜಿನಗರದ ಬಸವ ವೃತ್ತದಲ್ಲಿ ಪ್ರತಿಭಟನೆ ನಡೆಸಿದವು.
ಅನಿವಾಸಿ ಭಾರತೀಯನಾದ ರವಿ ಹಂಜ (ರವಿ ಹಂಜಗಿಮಠ) ಎಂಬ ವ್ಯಕ್ತಿಯು ಇತ್ತೀಚೆಗೆ “ವಿಶ್ವವಾಣಿ” (TV, YOU TUBE) ಯ್ಯುಟ್ಯೂಬ್ ವಾಹಿನಿಯ ಮೂಲಕ ಸಂದರ್ಶನವನ್ನು ನೀಡಿ ಬಸವಣ್ಣನವರ ಬಗ್ಗೆ ಅತ್ಯಂತ ಕೀಳು ಭಾಷೆಯನ್ನು ಬಳಸಿ ಕಳ್ಳ, ಸುಳ್ಳ, ಕೊಲೆಗಾರ ಎಂದು ಏಕವಚನದಲ್ಲಿ ನಿಂದಿಸಿರುತ್ತಾರೆ. ಸಮಸ್ತ ಲಿಂಗಾಯತರನ್ನು “ಲಿಂಗಾ ಹತರು” ಎಂದು ಜರೆದಿದ್ದಾನೆ. 12ನೇ ಶತಮಾನದ ಎಲ್ಲ ಶರಣರು ಬರೆದ ವಚನಗಳ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ ಇದು ಖಂಡನಾರ್ಹ.
‘ಬಸವ ಮಂಟಪ’ ಎಂಬ ಪುಸ್ತಕವನ್ನು ಮುದ್ರಿಸಿ ಅಲ್ಲಿಯೂ ಕೂಡ ಬಸವಾದಿ ಶರಣರ ಬಗ್ಗೆ ವಚನ ಸಾಹಿತ್ಯದ ಬಗ್ಗೆ ಲಿಂಗಾಯತರ ಬಗ್ಗೆ ಆಧಾರ ರಹಿತವಾಗಿ ಅವಹೇಳನ ಮಾಡಿದ್ದಾನೆ. ವಿಶ್ವವಾಣಿ ಟಿ ವಿ ಯೂಟ್ಯೂಬ್ ವಾಹಿನಿಯಲ್ಲಿ ಸಂಪಾದಕನಾದ ವಿಶ್ವೇಶ್ವರಭಟ್ಟ ಅವರು ರವಿ ಹಂಜ್ ಮಾಡಿರುವ ಆಧಾರರಹಿತ ಅವಹೇಳನಕಾರಿ ಸಂದರ್ಶನವನ್ನು ಪ್ರಚಾರ ಪ್ರಸಾರ ಮಾಡಿ ಈ ಕೃತ್ಯಕ್ಕೆ ಕೈ ಜೋಡಿಸಿದ್ದಾರೆ.

ಬಸವಣ್ಣನವರನ್ನು “ಕರ್ನಾಟಕದ ಸಾಂಸ್ಕೃತಿಕ ನಾಯಕ” ಎಂದು ಘೋಷಿಸಿರುವ ಕರ್ನಾಟಕ ಸರಕಾರಕ್ಕೆ ಮಾಡಿರುವ ಘೋರ ಅಪಮಾನ ಇದಾಗಿದೆ. ಈ ಮೂಲಕ ನಾಡಿನ ಅಸ್ಮಿತೆಯನ್ನು ಅವರು ಕೆಣಕಿದ್ದಾರೆ. ಇದರಿಂದ ಮನನೊಂದ ಸಮಸ್ತ ಬಸವಾಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿ “ಬಸವ ಮಂಟಪ” ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಹಾಗೂ ವಿಶ್ವವಾಣಿ ಪತ್ರಿಕೆಯ ಬಸವಮಂಟಪ ಅಂಕಣದ Digital content ಅನ್ನು ಶಾಶ್ವತವಾಗಿ ತೆಗೆಯಬೇಕು ಎಂದು ಆಗ್ರಹ ಮಾಡಲಾಯಿತು.
ಕರ್ನಾಟಕ ಘನ ಸರ್ಕಾರ “ಬಸವ ಮಂಟಪ” ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಲು ಹಾಗೂ ರವಿ ಹಂಜ ಮತ್ತು ವಿಶ್ವೇಶ್ವರ ಭಟ್ ಇವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲು ನಿರ್ಣಯ ಕೈಕೊಂಡಿದ್ದಕ್ಕಾಗಿ ಕರ್ನಾಟಕ ಸರ್ಕಾರವನ್ನು ಅಭಿನಂದಿಸುತ್ತೇವೆ ಎಂದರು.
ರವಿ ಹಂಜ್ ಹಾಗೂ ವಿಶ್ವೇಶ್ವರ ಭಟ್ಟ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಿಶ್ವವಾಣಿ ಪತ್ರಿಕೆಯಲ್ಲಿ ನಿರಂತರವಾಗಿ ವಿಶ್ವಗುರು ಬಸವಣ್ಣನವರನ್ನು ಶಿವಶರಣರನ್ನು ಲಿಂಗಾಯತ ಮಠಾಧೀಶರನ್ನು, ಲಿಂಗಾಯತ ಮುಖಂಡರನ್ನು, ಲಿಂಗಾಯತ ಹೋರಾಟಗಾರರನ್ನು ನಿರಂತರವಾಗಿ ಟೀಕೀಸುತ್ತಾ ಅವರ ತೆಜೋವಧೆ ಮಾಡುತ್ತಿದ್ದಾರೆ. ಇವರ ಹಿಂದೆ ಕೆಲವು ಕಾಣದ ಶಕ್ತಿಗಳು ಲಿಂಗಾಯತರ ವಿರುದ್ಧ ಷಡ್ಯಂತ್ರ ಮಾಡಿ ಅಸ್ಮಿತೆಗೆ ಕೈಹಾಕಿವೆ. ಈ ವ್ಯವಸ್ಥಿತ ಹುನ್ನಾರವನ್ನು ಈ ಕೂಡಲೆ ನಿಲ್ಲಿಸಬೇಕು ಹಾಗೂ ಕ್ಷಮೆ ಕೇಳಬೇಕು ಎಂದು ರಾಷ್ಟ್ರೀಯ ಬಸವ ದಳ, ಸಿದ್ಧಗಂಗಾ ಚಾರಿಟೇಬಲ್ ಟ್ರಸ್ಟ್, ಲಿಂಗಾಯತ ಅಧ್ಯಯನ ಕೇಂದ್ರ ಹಾಗೂ ಎಲ್ಲಾ ಬಸವಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಆಗ್ರಹಿಸಿದವು.
ಪ್ರತಿಭಟನೆಯಲ್ಲಿ ಪೂಜ್ಯ ಜ್ಞಾನೇಶ್ವರಿ ಮಾತಾಜಿ, ಪೂಜ್ಯ ಅನಿಮಿಷಾನಂದ ಸ್ವಾಮೀಜಿ, ಪೂಜ್ಯ ದಯಾನಂದ ಸ್ವಾಮೀಜಿ, ಪೂಜ್ಯ ಅಕ್ಕ ನಾಗಲಾಂಬಿಕ ಮಾತಾಜಿ, ಪೂಜ್ಯ ಬಸವಪ್ರಕಾಶ ಅವರು, ಚಂದ್ರಮೌಳಿ ಎನ್. ಲಿಂಗಾಯತ, ಪ್ರಧಾನ ಕಾರ್ಯದರ್ಶಿ ರಾಷ್ಟ್ರೀಯ ಬಸವದಳ ಕೇಂದ್ರ ಸಮಿತಿ, ಚಂದ್ರಶೇಖರ ಟಿ.ಎಮ್. ಸಿದ್ಧಗಂಗಾ ಚಾರಿಟಬಲ್ ಟ್ರಸ್ಟ್, ಲಿಂಗಾಯತ ಅಧ್ಯಯನ ಕೇಂದ್ರದ ಶ್ರೀಶೈಲ ಮಸೂತೆ ಮತ್ತಿತರರು ಭಾಗವಹಿಸಿದ್ದರು.

ಬಹಳ ಒಳ್ಳೆಯ ಕಾರ್ಯಕ್ರಮವಾಗಿದೆ ಒಳ್ಳೆಯ ಸಂದೇಶ ರವಾನಿಸಿದ್ದಿರಿ.ರವಿ ಹಂಜ ಮತ್ತು ವಿಶ್ವೇಶ್ವರ ಭಟ್ ವಿರುದ್ಧ ಎಫ ಐ ಆರ್ ದಾಖಲಿಸಲು ಸರ್ಕಾರ ಮುಂದಾಗಬೇಕು.ಜೈಬಸವ