ಮೂರು ದಿನಗಳ ವರೆಗೆ ಬಸವಕಲ್ಯಾಣದ ಬಸವ ಮಹಾಮನೆಯ ಆವರಣದಲ್ಲಿ ನಡೆದ ಕಲ್ಯಾಣ ಪರ್ವದ ಸಮಾರೋಪ ಸಮಾರಂಭ ಭಾನುವಾರ ಜರುಗಿತು.
ನಗರದ ಕೊಟೆಯಿಂದ ಬಸವ ಮಹಾಮನೆಯವರೆಗೂ 23ನೇ ಕಲ್ಯಾಣ ಪರ್ವದ ಭವ್ಯ ಮೆರವಣಿಗೆ ನಡೆಯಿತು. ಈ ಮೆರವಣಿಗೆಗೆ ಕೋಟೆ ಬಳಿ ಹುಲಸೂರ ತಹಸಿಲ್ದಾರ್ ಶಿವಾನಂದ ಮೇತ್ರೆ ಹಾಗೂ ಸಿ.ಪಿ.ಐ ಅಲಿಸಾಬ ಅವರು ವಚನ ಪಠಣ ಮಾಡುವ ಮೂಲಕ ಚಾಲನೆ ನೀಡಿದರು.