ಫೆಬ್ರವರಿ 28 ಬನಹಟ್ಟಿಯಲ್ಲಿ ಬಸವಣ್ಣನವರ ಹೆಸರಿನ ಹಿಂದೂ ಸಮಾವೇಶ
ಜಮಖಂಡಿ:
ಫೆಬ್ರವರಿ 28 ಬನಹಟ್ಟಿಯಲ್ಲಿ ನಡೆಯುತ್ತಿರುವ ಬಸವಣ್ಣನವರ ಹೆಸರಿನ ಹಿಂದೂ ಸಮಾವೇಶದಲ್ಲಿ ಭಾಗವಹಿಸಲು ಬರುತ್ತಿರುವ ಕನ್ನೇರಿ ಸ್ವಾಮಿಯ ವಿರುದ್ಧ ಪಟ್ಟಣದಲ್ಲಿ ಲಿಂಗಾಯತ, ದಲಿತ ಸಂಘಟನೆಗಳ ಮುಖಂಡರು ಪ್ರತಿಭಟಿಸಿದರು.
ತಹಿಶೀಲ್ದಾರ ಅನಿಲ ಬಡಿಗೇರ ಅವರನ್ನು ಭೇಟಿ ಮಾಡಿ ಬಸವ ತತ್ವದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ಕನ್ನೇರಿ ಸ್ವಾಮಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.

ಬಸವ ಸಂಸ್ಕೃತಿ ಅಭಿಯಾನ ಹಾಗೂ ಲಿಂಗಾಯತ ಮಠಾಧೀಶರ ಕುರಿತು ಅಪಮಾನಕಾರಿ ಹೇಳಿಕೆಗಳನ್ನು ನೀಡಿದ ಹಿನ್ನಲೆಯಲ್ಲಿ ಕನೇರಿ ಸ್ವಾಮಿಗೆ ನ್ಯಾಯಾಲಯವು ಧಾರ್ಮಿಕ ಕಲಹ ಪ್ರಚೋದಿಸುವಂತೆ ಮಾತನಾಡಿದ್ದಿರಿ. ಆದ್ದರಿಂದ ನೀವು ಮಠದಲ್ಲಿಯೇ ಇದ್ದು ಪೂಜೆ, ಮಾಡಿಕೊಂಡಿರಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ಹೋಗುವ ಅಗತ್ಯವಿಲ್ಲ ಎಂದು ಆದೇಶಿಸಿದೆ.
ಆದರೂ ಲೆಕ್ಕಿಸದೆ ಕನ್ನೇರಿ ಸ್ವಾಮಿ ಬನಹಟ್ಟಿಯ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದಾರೆ. ಇದರಿಂದ ಲಿಂಗಾಯತ ಸಮಾಜದ ಧಾರ್ಮಿಕ ಭಾವನೆಗಳಿಗೆ ನೋವುಂಟಾಗಿದೆ. ಹೀಗಾಗಿ ಕನ್ನೇರಿ ಸ್ವಾಮಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸರ್ಕಾರಕ್ಕೆ ಆದೇಶಿಸಬೇಕೆಂದು ವಿನಂತಿದರು.

ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಹಾಗೂ ಧಾರ್ಮಿಕ ಭಾವನೆಗಳಿಗೆ ಮಾನ್ಯತೆ ನೀಡುವ ಉದ್ದೇಶದಿಂದ, ಮನವಿ ನೀಡಲಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಈ ಸಂದರ್ಭದಲ್ಲಿ ಬಸವ ಕೇಂದ್ರದ ಅಧ್ಯಕ್ಷ ರವಿ ಯಡಹಳ್ಳಿ, ಪ್ರಧಾನ ಕಾರ್ಯದರ್ಶಿ ಮಹಾಂತೇಶ ಅಂಗಡಿ, ಅಣ್ಣಾಸಾಬ ಜಗದೇವ, ಬಸವ ದಳದ ಮುಖಂಡರಾದ ಶಂಕರ ಸಾವಳಗಿ, ಉಟಗಿ ಸರ್, ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಸಿ.ಎಸ್. ಬಾಂಗಿ, ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ಕೋಟಿ, ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಪರಶುರಾಮ ಕಾಂಬ್ಳೆ, ಬಸವಂತ ಕಾಂಬ್ಳೆ ಪ್ರತಿಭಟನಾ ಧರಣಿಯಲ್ಲಿ ಮಾತನಾಡಿದರು.
ಮರೆಗುದ್ದಿ ಮಹಾಂತಮಠದ ಪೂಜ್ಯ ಗುರುಮಹಾಂತ ಸ್ವಾಮೀಜಿ, ರಾವಸಾಬ ಜಕ್ಕಪ್ಪನವರ, ರಮೇಶ ವಾಜಂತ್ರಿ, ದೀಪಾ ಯಡಹಳ್ಳಿ, ರಾಜಶ್ರೀ ಜಗದೇವ, ಪಾರ್ವತಿ ಅಂಗಡಿ, ಸುವರ್ಣ ಸಬರದ, ಗಂಗೂತಾಯಿ ಮುಧೋಳ, ಮಹಾದೇವಿ ಜಕ್ಕಪ್ಪನವರ, ಎಂ.ಬಿ. ಕೊಪ್ಪರದ, ಪಿ.ಬಿ. ನೇಮಗೌಡ, ಎಸ್.ಜಿ. ತೇಲಿ, ಸಿ.ಆರ್. ಹಾದಿಮನಿ, ಆರ್.ಎ. ಜಗದೇವ, ಜಿ.ಎಚ್. ಮುಧೋಳ, ಡಿ.ಆರ್. ಯಡಹಳ್ಳಿ, ಎಂ.ಡಿ. ಸಂಖ, ಬಿ.ಎಸ್. ನಾಗನೂರ, ಟಿ.ಬಿ. ಖೋತ ಸೇರಿದಂತೆ ಬಸವಕೇಂದ್ರ, ಜೆ.ಎಲ್.ಎಂ, ಬಸವದಳ, ದಸಂಸ ಸಂಘಟನೆಗಳ ಪ್ರಮುಖರು, ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


ದಲಿತ ಸಂಘಟನೆಗಳಿಗೂ ಲಿಂಗಾಯತರಿಗೂ ಏನು ಸಂಬಂಧ ಸರ್
ಉದ್ದೇಶ ಒಂದೇ. ಸಮಾನ ಮನಸ್ಕರು .
ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು,ಪ್ರತಿಭಟನೆ ಸಭೆಯಲ್ಲಿ ಕನ್ನೇರಿ ಸ್ವಾಮಿಗಳಿಗೆ ಉಗ್ರವಾದ ಎಚ್ಚರಿಕೆ ನೀಡಿದರು. ಇನ್ನಾದರೂ ಕನ್ನೇರಿ ಸ್ವಾಮಿಗಳು ಲಿಂಗಾಯತ ಧರ್ಮಿಯರ ಹಾಗೂ ಸ್ವಾಮಿಗಳ ಕುರಿತು ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕೆಂದು ಎಚ್ಚರಿಸಿದ್ದು ಸಮಂಜಸವಾಗಿದೆ.ಶರಣುಶರಣಾರ್ಥಿಗಳು
ಈ ಸಂಘಟನೆಯನ್ನು ಎರಪಡಿಸಿದ ಆ ಲಜ್ಜೆಗೆಟ್ಟ ನೀಚರಿಗೆ ಪಠಕಲಿಸಬೇಕು ಅವರಿಗೆ ಎಚ್ಚರಿಕೆ ನೀಡಬೇಕು