ಕನ್ನೇರಿ ಸ್ವಾಮಿ ಹೇಸಿಗೆಯಲ್ಲಿ ಕುಳಿತ ಜಂತು ಅಂತ ಲಿಂಗಾಯತರು ಸುಮ್ಮನಿದ್ದಾರೆ

ಬೀದರಿನ ಜನರು ನಿನಗೆ ಹೆದರಿ ಚಟಪಟ ಒದ್ದಾಡಲಿಕ್ಕೆ ಹೇಡಿಗಳಲ್ಲ

ಬೀದರ

ಬನಹಟ್ಟಿ ಪಟ್ಟಣದಲ್ಲಿ ಕಳೆದ ವಾರ ನಡೆದ ಹಿಂದೂ ಸಮಾವೇಶದಲ್ಲಿ ಕನ್ನೇರಿ ಸ್ವಾಮಿ ಮಾತನಾಡುತ್ತ, ಬಸವ ಭಕ್ತರು ಹಿಂದೂ ಧರ್ಮ ಟೀಕಿಸುತ್ತಾ, ಗುಡಿ ಕಟ್ಟಬೇಡಿ ಅಂತಾರೆ. ಆದರೆ ಬೇರೆ ಧರ್ಮಗಳಿಗೆ ದಾರಿ ಮಾಡಿಕೊಡುತ್ತಿದ್ದಾರೆ, ಎಂದು ಹೇಳಿದರು.

“ಬೀದರ್ ಜಿಲ್ಲೆದಾಗ್ ಇರುವಷ್ಟು ಚರ್ಚುಗಳು ರಾಜ್ಯದ ಬೇರೆ ಯಾವ ಜಿಲ್ಲೆಗಳಲ್ಲೂ ಇಲ್ಲ. ಓಣಿ ಓಣಿಗೊಂದು ಚರ್ಚುಗಳಾಗಿವೆ. ಯಾಕಂದ್ರ ಬೀದರ್ ಜಿಲ್ಲೆಯೊಳಗೆ ಬಸವತತ್ವ ಪ್ರಚಾರಕರು ಅತೀ ಹೆಚ್ಚಿದ್ದಾರೆ,” ಎಂದು ಹೇಳಿದರು.

ಸ್ವಾಮೀ ಗುಡಿಗಳನ್ನು ಕಟ್ಟಬೇಡಿ ಅಂತ ಹೇಳುವುದರಿಂದ ಚರ್ಚುಗಳು ಆಗಿಲ್ಲ. ದೀನರನ್ನು ದಲಿತರ ಪತೀತರನ್ನು ಹಿಂದು ಸಮಾಜ ವೀರಶೈವ ಸಮಾಜ ಇಲ್ಲಿಯವರೆಗೂ ಭೇದ ಮಾಡುತ್ತ, ತಾರತಮ್ಯ, ಮೇಲು-ಕೀಳು ಮಾಡುತ್ತ ಇಂಬಿಟ್ಟುಕೊಳ್ಳದೆ ದೂರ ಇಡುತ್ತ ಬಂದಿರುವುದರಿಂದ ಅವರೆಲ್ಲರನ್ನೂ ಇಂಬಿಟ್ಟುಕೊಳ್ಳಲು ಚರ್ಚುಗಳಾಗಿದ್ದವೇ. ನೀವೇ ಸರಿಯಾಗಿ ಇದ್ದಿದ್ದರೆ ಚರ್ಚುಗಳೇಕೆ ಆಗುತ್ತಿದ್ದವು?

ಲಿಂಗಾಯತರಲ್ಲಿಯೇ ಹುಟ್ಟಿ ಲಿಂಗಾಯತವನ್ನು ಮರೆತು ಲಿಂಗಾಯತವನ್ನೇ ತೆಗಳುವ ಲಿಂಗಾಯತ ಧರ್ಮವನ್ನು ಒಡೆಯುವ ನಿಮ್ಮಂತ ಅಜ್ಞಾನಿಗಳಿಂದ ಚರ್ಚುಗಳು ಪ್ರಾರಂಭವಾದವು.

ಸ್ವಾಮೀ ಇನ್ನೊಂದು ಮಾತು ಹೇಳಿದ್ದೀರಾ.

ನಾನು ಬೀದರಿಗೆ ಬರ್ತೀನಂತ ತಿಳಿದ ಕೂಡಲೇ ಬಸವಭಕ್ತರು ಬೆದರಿ “ ಚಟಪಟ ಚಟಪಟ ಒದ್ದಾಡಕ ಶುರು ಮಾಡ್ತಾವು, ” ಎಂದು.

ಬೀದರಿನ ಜನರು ನಿನಗೆ ಹೆದರಿ ಚಟಪಟ ಒದ್ದಾಡಲಿಕ್ಕೆ ಹೇಡಿಗಳಲ್ಲ. ಬೀದರಿನವರ ಕೈರುಚಿ ಏ ಸ್ವಾಮೀ ನಿನಗೆ ಇನ್ನು ಗೊತ್ತಿಲ್ಲ.

“ ಬಿಲದೊಳಗೆ ನೀರು ಬಿದ್ರೆ ಯಾವ ರೀತಿ ಇರವಿ, ಹಾವು ಚಟಪಟ ಒದ್ದಾಡಿಕೊಂಡು ಹೊರಗೆ ಬರುತ್ತವೆ, ಹಾಂಗ ಬಸವ ಕಾರ್ಯಕರ್ತರು ಒದ್ದಾಡುತ್ತಿದ್ದಾರೆ,” ಎಂದು ಹೇಳಿದ್ದೀರಾ.

ಸ್ವಾಮೀಯವರೇ ಇರುವೆ ಸಣ್ಣದಾದರೂ ಆನೆಯ ಮೂಗಿನಲ್ಲಿ ಹೋಗಿ ಆನೆಯನ್ನೇ ಸಾಯಿಸುವ ಶಕ್ತಿ ಇರುವೆಗೆ ಇದೆ ಅನ್ನುವುದು ನಿನಗೆ ಗೊತ್ತಿಲ್ಲ ಅನಿಸುತ್ತದೆ. ಬೀದರ್ ಬಂದು ನೋಡು ಗೊತ್ತಾಗುತ್ತದೆ.

ನೀನು ಇಷ್ಟೆಲ್ಲಾ ವದರಿದರೂ ಆದರೂ ಬೀದರಿನ ಜನ ಮತ್ತು ಲಿಂಗಾಯತ ಧರ್ಮಿಯರು ಯಾಕೆ ಸುಮ್ಮನಿದ್ದಾರೆ ಗೊತ್ತೆ?

ಒಂದು ಸಲ ನಾಗಪ್ಪ (ಹಾವು)ತನ್ನ ಪಾಡಿಗೆ ತಾನು ಹೊರಟಿತ್ತು. ಹೇಸಿಗೆಯಲ್ಲಿ ಕುಳಿತ ಜಂತು ನಾಗಪ್ಪನನ್ನು ನೋಡಿ ನಾಗ್ಯಾ ಗೂಗ್ಯಾ ಎಂದು ಬೈಯುತ್ತಿತ್ತು. ನಾಗಪ್ಪನಿಗೆ ಸಿಟ್ಟು ಬಂದು ಜಂತನ್ನು ಕಚ್ಚಲು ಹೋದಾಗ ಗೊತ್ತಾಯಿತು ಜಂತು ಹೇಸಿಗೆಯಲ್ಲಿದೆ ಎಂದು.

ಆಗ ನಾಗಪ್ಪ ಇದನ್ನು ನಾನು ಕಚ್ವಿದರೆ ನನ್ನ ಬಾಯಿ ಹೇಸಿಕೆ ಆಗುತ್ತದೆ ನಾನು ಕಚ್ಚುವುದು ಬೇಡ ಬಿಸಿಲು ಬಂದಾಗ ತಾನೇ ಕರಗಿ ಒಣಗಿ ಹೋಗುತ್ತದೆ ಎಂದು ಸುಮ್ಮನೆ ಹೋಯಿತು. ಆದರೆ ನನಗೆ ಹೆದರಿ ನಾಗಪ್ಪ ಹೋಯಿತು ಎಂದು ಜಂತು ತಿಳಿದುಕೊಂಡಿತು.

ಹಾಗೇ ಕನ್ನೇರಿ ಸ್ವಾಮಿ ಹೇಸಿಗೆಯಲ್ಲಿ ಕುಳಿತ ಜಂತು.

ಲಿಂಗಾಯತರು ಅದನ್ನು ಕಚ್ಚಿದರೆ ಹೇಸಿಕೆ ನಮ್ಮ ಬಾಯಿಗೆ ಹತ್ತುವುದು ಬೇಡ ಅದು ತಾನೇ ಕರಗಿ ಹೋಗುತ್ತದೆ ಎಂದು ಸುಮ್ಮನಿದ್ದಾರೆ. ಆದರೆ ಕನ್ನೇರಿ ಜಂತು ನನಗೆ ಹೆದರಿ ಲಿಂಗಾಯತರು ಸುಮ್ಮನಿದ್ದಾರೆ ಎಂದು ತಿಳಿದುಕೊಂಡಿದೆ.

“ನಾನು ಅವಕ್ಕ ಉತ್ತರ ಕೊಡೋದಿಲ್ಲ ಝಾಡಿಸಿ ಒಂದು ಒಗದೀರ್ತೀನಿ, ಮುಂದೆ ಒಂದು ತಿಂಗಳು ಅವು ವದರಾಡ್ತವ. ನಾನು ಮತ್ತೆ ಝಾಡಿಸಿ ಒಂದು ಒಗದೀರ್ತೀನಿ, ಹಂದಿಗಳು ಜೋರು ಒದರಾಕ ಹತ್ಯಾವು ಅಂತಂದ್ರ ಅವಕ್ಕ ಹೊಡೆತ ಬೇಶ್ ಬಿದ್ದಾವು ಅಂತ ತಿಳ್ಕೊಬೇಕು,” ಎಂದೂ ಹೇಳಿದ್ದೀರಿ.

ಕನ್ನೇರಿ ಸ್ವಾಮೀ, ಜೋರು ಹಂದಿಯಂಗ ಒದರ್ತಾ ಇರೋದು ನೀನಾ? ನಾವಾ? ಹಂದಿ ನೀನು ಸ್ವಾಮಿ, ಒದರ್ತಾ ಇದ್ದಿರುವುದು ನೀನು.

ನೀ ಒದರುವುದನ್ನು ನಿಲ್ಲಿಸು ಅಂತ ನಾನು ಹೇಳಲ್ಲ ಒದರು. ದೀಪ ಎಣ್ಣೆ ಇರುವವರೆಗೂ ಉರಿಯುತ್ತದೆ. ಆರುವಾಗ ಜೋರು ಉರಿದು ಶಾಂತವಾಗುತ್ತದೆ. ಅದಕ್ಕಾಗಿ ಒದರು ಪರವಾಗಿಲ್ಲ …

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ef59kmZXDgwBDbpNqmONQ3

Share This Article
5 Comments
  • ಇತ್ತೀಚಿನ ದಿನಗಳಲ್ಲಿ ಲಿಂಗಾಯತ ಉಪಪಂಗಡಗಳಲ್ಲಿ ಮೂಡುತ್ತಿರುವ ಬಸವ ಜಾಗೃತಿಯಿಂದ ಕಂಗೆಟ್ಟಿರುವ ನಾಗಪುರದ ಯುನಿವರ್ಸಿಟಿ ನೇರವಾಗಿ ಎದುರಿಸದೆ ಲಿಂಗಾಯತ ಸಂಬಂಧಿತ ರಾಜಕೀಯ ಅಧಿಕಾರದ ದುರಾಷೆಯಲ್ಲಿರುವ ಇಂಥವರನ್ನು ಬಲೆಗೆ ಹಾಕಿಕೊಂಡು ಅಸಭ್ಯ ಅಪಪ್ರಚಾರದ ಷಡ್ಯಂತ್ರ ನಡೆದಿದೆ, ವಚನ ಸಾಹಿತ್ಯದ ತಿರುಚುವಿಕೆ ಸಹ ಮಾಡಿದರು,, ಇವರಿಗೆ ತಕ್ಕ ಉತ್ತರವೆಂದರೆ ಗ್ರಾಮೀಣ ಮಟ್ಟದಲ್ಲಿ ಲಿಂಗಾಯತ ಉಪಪಂಗಡಗಳಲ್ಲಿ ಬಸವಾದಿ ಶರಣರ ಪ್ರಜ್ಞೆ ಮೂಡಿಸುವ ಕೆಲಸ ಆಗಬೇಕಾಗಿದೆ ಆಗ ಜನರೇ ಇವರ ಕಾವಿ ಬಿಚ್ಚುವರು,,

  • ಕನ್ನೇರಿ ಸ್ವಾಮಿ ನಿಜವಾಗಲು ಹೋಲ್ಸಿನ ಹುಳ ಸ್ವಾಮಿಗೇನು ಗೊತ್ತು ಲಿಂಗಾಯತ ಮಠಗಳು ನೀಡಿದ ಶಿಕ್ಷಣ ದಾಸುವ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದೆ

  • It is quite asthetic that this swamiji is functioning as if he alone know everything under the sun. He criticises. Shri Jamadar Sir without knowing the true spirit of the religion. Perhaps he doesn’t know that Kudalsangam and the garden is the creation of him.
    Before criticism he should thoroughly understand the circumstances. Lingayat community is susceptible to the cheap propoganda by swamiji like the one who is using ugly words to criticize others. He should look back as to who he was before meeting Shri Siddeshwar swamiji.
    Better he should concentrate on positive aspects of strengthening the community instead wasting his energy to mislead the innocent mass.

  • Sri Shashidhar. You are right. We Lingayats must understand that behind all this diabolical attack there is RSS and in RSS there are many Lingayat political leaders.They are under the grip of RSS. They are opening thrie mouth against onslaught. You who is that Lingayat leader who is a slave of RSS. We have teach them a lesson during election.political awareness is not their among many Lingayats.

Leave a Reply

Your email address will not be published. Required fields are marked *

ಪೂಜ್ಯ ಸದ್ಗುರು ಸತ್ಯದೇವಿ ಮಾತಾಜಿ, ಬಸವ ಮಂಟಪ, ಬೀದರ್