ಭಾಲ್ಕಿ :
ಪಟ್ಟಣದ ಚನ್ನಬಸವಾಶ್ರಮದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ, ವಚನ ಜಾತ್ರೆ, ಡಾ. ಚನ್ನಬಸವ ಪಟ್ಟದೇವರ 27ನೇ ಸ್ಮರಣೋತ್ಸವ ಹಾಗೂ ಡಾ. ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವದ ಅಂಗವಾಗಿ ಭವ್ಯವಾದ ಬೈಕ್ ಮತ್ತು ಕಾರು ರ್ಯಾಲಿ ನಡೆಯಿತು.
ರ್ಯಾಲಿಗೆ ಗುರುಬಸವ ಪಟ್ಟದ್ದೇವರ ಸಾನಿಧ್ಯದಲ್ಲಿ ಯುವ ಮುಖಂಡ ಪ್ರಸನ್ನ ಖಂಡ್ರೆ ಬಸವ ಧ್ವಜ ಹಾರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ರ್ಯಾಲಿಯಲ್ಲಿ ಅಸಂಖ್ಯಾತ ಮಹಿಳೆಯರು ಮತ್ತು ಪುರುಷರು ಸ್ವಯಂಪ್ರೇರಣೆಯಿಂದ ಉತ್ಸಾಹದಿಂದ ಭಾಗವಹಿಸಿರುವುದು ಸಂತಸದ ಸಂಗತಿ ಎಂದರು. ಇದೇ ಮೊದಲ ಬಾರಿಗೆ ಇಷ್ಟೊಂದು ಸಂಖ್ಯೆಯಲ್ಲಿ ಕಾರುಗಳು ಮತ್ತು ಬೈಕ್ಗಳು ಭಾಗವಹಿಸಿರುವುದು ಎಂದರು.

ಏಪ್ರಿಲ್ 20, 21 ಮತ್ತು 22ರಂದು ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಬೈಕ್ ಮತ್ತು ಕಾರುಗಳ ರ್ಯಾಲಿಯು ಚನ್ನಬಸವಾಶ್ರಮದಿಂದ ಆರಂಭಗೊಂಡು ಡಾ. ಡಾ. ಬಿ.ಆರ್.ಅಂಬೇಡ್ಕರ್ ವೃತ್ತ, ಬೊಮ್ಮಗೊಂಡೇಶ್ವರ ವೃತ್ತ, ಹಿರೇಮಠಗಲ್ಲಿ ಚೌವಡಿ, ಗಡಿ ಮಾರ್ಗ, ಲೆಕ್ಚರ್ ಕಾಲೋನಿ, ಭೀಮನಗರ, ಸುಭಾಷ ವೃತ್ತ, ಸರಾಫ್ ಬಜಾರ್, ಗಾಂಧಿ ವೃತ್ತ, ಬಸವೇಶ್ವರ ವೃತ್ತ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ ಮತ್ತೆ ಚನ್ನಬಸವಾಶ್ರಮದಲ್ಲಿ ಸಮಾವೇಶಗೊಂಡಿತು.

ಮೆರವಣಿಗೆಯುದ್ದಕ್ಕೂ ಯುವಕರು ಹಾಗೂ ಯುವತಿಯರು ಸ್ವತಃ ಬೈಕ್ ಮತ್ತು ಕಾರುಗಳನ್ನು ಚಲಾಯಿಸಿ ರ್ಯಾಲಿಗೆ ಮತ್ತಷ್ಟು ಹುರುಪು ನೀಡಿದರು. ಸುಮಾರು 105 ಕಾರುಗಳು ಹಾಗೂ 205 ಬೈಕ್ಗಳು ಭಾಗವಹಿಸಿದ್ದು ವಿಶೇಷ ಆಕರ್ಷಣೆಯಾಯಿತು.

ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷ ಯೋಗೇಶ್ ಅಷ್ಟೂರೆ, ಚನ್ನಬಸವಣ್ಣ ಬಳತೆ, ಶಿವು ಲೋಖಂಡೆ, ವಿಲಾಸ ಬಕ್ಕಾ, ಜಗದೀಶ ಖಂಡ್ರೆ, ಜೈರಾಜ ಪಾತ್ರೆ, ಪ್ರಕಾಶ ಮಾಶಟ್ಟೆ, ಡಾ. ಅಮೀತ ಅಷ್ಟೂರೆ, ಚಂದ್ರಶೇಖರ ವಂಕೆ, ಉಮಾಕಾಂತ ವಾರದ, ಚಂದ್ರಶೇಖರ ಎಮ್ಮೆ, ಚಂದ್ರಕಾಂತ ಬಿರಾದಾರ, ಕಿರಣಕುಮಾರ ಖಂಡ್ರೆ, ಓಂಕಾರ ಕನಶೆಟ್ಟೆ, ಕಪಿಲ ಕಲ್ಯಾಣೆ, ಸಂಗಮೇಶ ವಾಲೆ, ಡಾ. ಶಶಿಕಾಂತ ಭೂರೆ, ಡಾ. ಸಜ್ಜಲ ಬಳತೆ, ಅಮರ ಜಲ್ದೆ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಈ ರ್ಯಾಲಿ ಬಸವ ಜಯಂತಿ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M
