ವಚನಗಳು ರಚಿಸಲು ಪ್ರೇರಣೆ ನೀಡಿದ ಬಸವಣ್ಣ: ಡಾ. ಶೈಲೇಂದ್ರ ಬೆಲ್ದಾಳೆ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ :

೧೨ನೇ ಶತಮಾನದಲ್ಲಿಯೇ ಎಲ್ಲರಿಗೂ ಕನ್ನಡ ಕಲಿಸಿ, ಭಾಷೆ ಬಾಂಧವ್ಯ ಬೆಸೆಯುವುದರೊಂದಿಗೆ ಕ್ರಾಂತಿಕಾರಿ ವಚನಗಳು ರಚಿಸಲು ಪ್ರೇರಣೆ ನೀಡಿದ ಬಸವಣ್ಣ ಪ್ರಜಾಪ್ರಭುತ್ವದ ಹರಿಕಾರರು ಎಂದು ದಕ್ಷಿಣ ಮತಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಬಸವೇಶ್ವರ ಮೂರ್ತಿಗೆ ಪೂಜೆ ನೆರವೇರಿಸಿ ಬಸವ ಜಯಂತಿ ಆಚರಣೆಯಲ್ಲಿ ಮಾತನಾಡಿದರು.

ಅಂದು ಅಪಘಾನಿಸ್ತಾನ, ಜಮ್ಮು ಕಾಶ್ಮೀರ, ಓರಿಸ್ಸಾ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದ ಬಂದರೂ ಅವರಿಗೆ ಕನ್ನಡ ಕಲಿಸಿ, ಅನುಭಾವಿಗಳನ್ನಾಗಿಸಿ ಸಾಹಿತ್ಯ ರಚನೆ ಮಾಡಿಸಿದ ಬಸವಣ್ಣ ಕಾಯಕ ದಾಸೋಹ ತತ್ತ್ವದ ಹರಿಕಾರರು.

ಅವರ ಕನ್ನಡತ್ವದ ಕಾಳಜಿ ನಮ್ಮೆಲ್ಲರಲ್ಲಿ ಅಳವಟ್ಟಾಗ ಕನ್ನಡ ಕಂಪು ಎಲ್ಲೆಡೆ ಪಸರಿಸಲು ಇದು ಪರಿಣಾಮಕಾರಿ ಯಾಗಬಲ್ಲದು ಎಂದು ಕನ್ನಡ ಭವನದಲ್ಲಿ ನುಡಿದರು.

ಎನ್.ಎಸ್.ಎಸ್.ಕೆ. ಅಧ್ಯಕ್ಷರಾದ ಸೂರ್ಯಕಾಂತ ನಾಗಮಾರಪಳ್ಳಿ ಮುಖ್ಯಅತಿಥಿಗಳಾಗಿ ಬಸವಣ್ಣ ನಿಜವಾಗಿ ಕನ್ನಡಪ್ರಜ್ಞೆಯೊಂದಿಗೆ ಸರ್ವರ ಬಾಳಿಗೆ ಬೆಳಕನ್ನು ನೀಡಿದ ಮಹಿಮಾ ಪುರುಷರು. ವೈಚಾರಿಕ ವೈಜ್ಞಾನಿಕ ನೆಲೆಗಟ್ಟಿನ ತತ್ತ್ವ ಇಂದು ಪ್ರಚಾರ ಮಾಡುವುದು ನಮ್ಮ ಧರ್ಮವಾಗಿದೆ ಎಂದರು.

ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷರಾದ ಡಾ. ರಜನೀಶ ವಾಲಿ, ಪ್ರಧಾನ ಕಾರ್ಯದರ್ಶಿ ಶಶಿಧರ ಹೊಸಳ್ಳಿ, ಕೋಶಾಧ್ಯಕ್ಷರಾದ ಸಿದ್ರಾಮಯ್ಯಸ್ವಾಮಿ, ದೀಪಕ ವಾಲಿ, ಶಿವಶರಣಪ್ಪ ವಾಲಿ, ಆದೀಶ ವಾಲಿ, ಬಸವರಾಜ ಧನ್ನೂರ, ಸೋಮಶೇಖರ ಪಾಟೀಲ, ಬಾಬು ವಾಲಿ, ಗುರುನಾಥ ಕೊಳ್ಳುರು, ಸಚಿನ್ ಕೊಳ್ಳುರು, ಧನರಾಜ ಹಂಗರಗಿ, ವೀರುಪಾಕ್ಷ ಗಾದಗಿ, ಸಿರಿಗೆರೆ ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ ಕಸಾಪ. ಜಿಲ್ಲಾಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ಇಂದು ಕನ್ನಡಕ್ಕೆ ಬಹುದೊಡ್ಡ ಗೌರವ ತಂದು ಕೊಟ್ಟವರು ಬಸವಾದಿ ಶರಣರು. ವಚನಗಳು ಅಚ್ಚಕನ್ನಡದಲ್ಲಿರುವುದೇ ನಮ್ಮೆಲ್ಲರ ಭಾಗ್ಯ. ಇಂದು ಸಾಂಸ್ಕೃತಿಕ ನಾಯಕ ಬಸವ ಜಯಂತಿ ಸಾರ್ವಜನಿಕವಾಗಿ ಆಚರಿಸುವುದರ ಜೊತೆಗೆ ಕಡ್ಡಾಯವಾಗಿ ಬಸವ ಭಾವಚಿತ್ರ ಎಲ್ಲ ಕಚೇರಿಗಳಲ್ಲಿ ಅಳವಡಿಸಲು ಆದೇಶ ಹೊರಡಿಸಿರುವುದು ಸಂತಸವಾಗಿದೆ ಎಂದರು.

ಮೊದಲಿಗೆ ಕಸಾಪ. ಕೋಶಾಧ್ಯಕ್ಷರಾದ ಡಾ. ಶಿವಶಂಕರ ಟೋಕರೆ ಸರ್ವರನ್ನು ಸ್ವಾಗತಿಸಿದರು.  ಭಾಲ್ಕೆ ಸಿದ್ಧಾರೂಢ ನಿರೂಪಣೆ ಮಾಡಿದರೆ, ಬಾಬು ದಾನಿ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *