ಕನ್ನಡ ಮತ್ತು ಬೆಳಗಾವಿಗಾಗಿ ಪ್ರಾಣತ್ಯಾಗಕ್ಕೂ ಸಿದ್ಧ: ಡಾ. ಅಲ್ಲಮಪ್ರಭು ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಳಗಾವಿ

ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರ ನಿರ್ಣಯ ಅಂಗೀಕರಿಸಬೇಕು ಎಂದು ಒತ್ತಾಯಿಸಿ ಕನ್ನಡ ಹೋರಾಟಗಾರರು ನಡೆಸುತ್ತಿರುವ ಹೋರಾಟ ದಿನೇದಿನೆ ಕಾವು ಪಡೆದುಕೊಳ್ಳುತ್ತಿದೆ.

ಬೆಳಗಾವಿ ಎಂದೆಂದಿಗೂ ಕರ್ನಾಟಕದ ಅವಿಭಾಜ್ಯ ಅಂಗ ಹಾಗೂ ಗಡಿ ವಿವಾದದಲ್ಲಿ ಮಹಾಜನ್ ವರದಿಯೇ ಅಂತಿಮ ಎಂಬ ನಿರ್ಣಯವನ್ನು ಮಹಾನಗರ ಪಾಲಿಕೆಯಲ್ಲಿ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಹೋರಾಡುತ್ತಿವೆ. ಈ ವಿಷಯದ ಕುರಿತು ನಾಗನೂರು ರುದ್ರಾಕ್ಷಿಮಠದ ಪೀಠಾಧಿಕಾರಿ ಪೂಜ್ಯ ಅಲ್ಲಮಪ್ರಭು ಸ್ವಾಮೀಜಿ ಅವರನ್ನು ಸೋಮವಾರ ಭೇಟಿಯಾಗಿ ಬೆಂಬಲ ಕೋರಿದವು.

ಕನ್ನಡ ಹಾಗೂ ಬೆಳಗಾವಿಗಾಗಿ ಎಂತಹ ಹೋರಾಟಕ್ಕೂ ಸಿದ್ದ ಅಷ್ಟೇ ಅಲ್ಲ ಪ್ರಾಣತ್ಯಾಗಕ್ಕೂ ತಾವು ಸಿದ್ಧವಿರುವುದಾಗಿ ಸಭೆಯಲ್ಲಿ ಡಾ. ಅಲ್ಲಮಪ್ರಭು ಸ್ವಾಮೀಜಿ ಘೋಷಿಸಿದರು.

‘ಗಡಿಯಲ್ಲಿ ನಾಡು–ನುಡಿ ಹಿತಾಸಕ್ತಿಗೆ ಧಕ್ಕೆ ಬಂದಾಗಲೆಲ್ಲ, ನಮ್ಮ ಮಠ ಹೋರಾಡುತ್ತಲೇ ಬಂದಿದೆ. ಈಗ ಪಾಲಿಕೆಯಲ್ಲಿ ರಾಜ್ಯದ ಪರ ನಿರ್ಣಯ ಅಂಗೀಕಾರಕ್ಕಾಗಿ ಎಂಥದ್ದೇ ಹೋರಾಟಕ್ಕೂ ಸಿದ್ಧವಿದ್ದೇವೆ’ ಎಂದು ಹೇಳಿದರು.

“ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದನ್ನು ಸೂರ್ಯ ಚಂದ್ರರು ಇರುವವರೆಗೂ ಯಾರು ಅಲ್ಲಗಳೆಯರಾಗದು. ಆದರೆ, ಬೆಳಗಾವಿ ನಮ್ಮದು ಎಂದು ಸಾಬೀತುಪಡಿಸುವ ಪರಿಸ್ಥಿತಿ ಎದುರಾಗಿದ್ದು ದುರದೃಷ್ಟಕರ.

ಪಾಲಿಕೆಯಲ್ಲಿ ಕನ್ನಡಿಗರೇ ಮೇಯರ್‌ ಮತ್ತು ಉಪಮೇಯರ್‌ ಇದ್ದರೂ, ನಿರ್ಣಯ ಅಂಗೀಕಾರ ಮಾಡಲು ಹಿಂದೇಟು ಹಾಕುತ್ತಿರುವುದು ಏಕೆ ಎಂದು ತಿಳಿಯುತ್ತಿಲ್ಲ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕಾಗಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಾ ಇರುವ ಹೋರಾಟಕ್ಕೆ ಶ್ರೀಮಠದ ಸಂಪೂರ್ಣ ಬೆಂಬಲವಿದೆ ಎಂದರು.

“ರಾಜಕೀಯ ಸ್ವಾರ್ಥಕ್ಕಾಗಿ ಪಾಲಿಕೆಯಲ್ಲಿ ಈ ನಿರ್ಣಯ ಅಂಗೀಕಾರಕ್ಕೆ ಯಾರೂ ಮೀನಮೇಷ ಎಣಿಸಬಾರದು. ಸುಪ್ರೀಂಕೋರ್ಟ್‌ ನೆಪ ಹೇಳುವುದು ಬೇಡ. ತಕ್ಷಣವೇ ಬೇಡಿಕೆ ಈಡೇರಿಸಬೇಕು. ಈ ಕುರಿತು ಮೇಯರ್‌ ಪ್ರೀತಿ ಕಾಮಕರ, ಉಪಮೇಯರ್‌ ಹನುಮಂತ ಕೊಂಗಾಲಿ ಅವರೊಂದಿಗೆ ಚರ್ಚಿಸುತ್ತೇನೆ,” ಎಂದು ತಿಳಿಸಿದರು.

‘ಇಂದು ಬೆಳಗಾವಿ ಕರ್ನಾಟಕದಲ್ಲಿ ಉಳಿದಿದೆ ಎಂದರೆ, ಅದಕ್ಕೆ ನಾಗನೂರು ರುದ್ರಾಕ್ಷಿಮಠದ ಲಿಂ.ಶಿವಬಸವ ಸ್ವಾಮೀಜಿ ಕೊಡುಗೆಯೂ ಇದೆ. ಮರಾಠಿ ಭಾಷಿಕ ಗೂಂಡಾಗಳಿಂದ ಸಾಕಷ್ಟು ನೋವುಂಡು, ಬೆಳಗಾವಿಯನ್ನು ಕರ್ನಾಟಕದಲ್ಲೇ ಉಳಿಸಲು ಅವರು ಪ್ರಯತ್ನಿಸಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿದ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಅವರು, ಕನ್ನಡದ ಪರವಾಗಿ ನಡೆದ ಹೋರಾಟಗಳು ಮತ್ತು ಮಹಾನಗರ ಪಾಲಿಕೆಯಲ್ಲಿ ಈ ಸಂಬಂಧ ಕೈಗೊಳ್ಳಲಾದ ನಡಾವಳಿಗಳ ಕುರಿತು ಮತ್ತು ಪ್ರಸ್ತುತ ಮಹಾನಗರ ಪಾಲಿಕೆ ನಡೆದುಕೊಳ್ಳುತ್ತಿರುವ ವಿರೋಧಿ ನಿಲುವನ್ನು ತೀವ್ರವಾಗಿ ಖಂಡಿಸಿದರು.

ಕನ್ನಡದ ಪರವಾಗಿ ಗೊತ್ತುವಳಿ ಕೈಗೊಳ್ಳುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು.

ಕನ್ನಡ ಹೋರಾಟಗಾರರಾದ ಮಹಾದೇವ ತಳವಾರ, ಶ್ರೀನಿವಾಸ ತಾಳೂಕರ, ಬಲರಾಮ್ ಮಾಸೇನಟ್ಟಿ, ವಾಜೀದ್ ಹಿರೇಕೋಡಿ, ಮಹಾನಗರ ಪಾಲಿಕೆ ಸದಸ್ಯರಾದ ರಮೇಶ ಸೊಂಟಕ್ಕಿ, ದಿನೇಶ ನಾಶಿಪುಡಿ, ಸಾಹಿತಿ ನೀಲಗಂಗಾ ಚರಂತಿಮಠ ಸೇರಿದಂತೆ 20 ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
1 Comment
  • ಓಂಶ್ರೀಗುರುಬಸವಲಿಂಗಾಯನಮಃ
    ಅಸೂಟಿಶ್ರೀಫಲಹಾರ ಶಿವಯೋಗಿಗಳವರ ಜನ್ಮ ತಪೋಭೂಮಿಹೊಸಕೇರಿಬಸವನಗರ ಅಂಚೆ.ಮು ತಿಮ್ಮಾಪೂರ ತಾ.ರಾಮದುರ್ಗ ಜಿ.ಬೆಳಗಾವಿ ಶ್ರೀ ಮ.ನಿ.ಪ್ರ.ಸ್ವ.ಜ. ಮುರುಘರಾಜೇಂದ್ರ ಮಹಾಸ್ವಾಮಿಗಳು ಶ್ರೀಜಗದ್ಗುರುಮುರುಘರಾಜೇಂದ್ರಕೋರಣೇಶ್ವರವಿರಕ್ತಮಠ ಅಸೂಟಿ ಅರಹಟ್ಟಿ ಮೆಣಸಗಿ ಖಜೂರಿ

    ವಿಷಯ. ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಅಸೂಟಿಶ್ರೀಫಲಹಾರ ಶಿವಯೋಗಿಗಳವರ ಜನ್ಮ ಭೂಮಿಯಲ್ಲಿ 1984 ಚಿತ್ರದುರ್ಗ ಜಗದ್ಗುರುಮುರುಘರಾಜೇಂದ್ರಬೃಹನ್ಮಠ ಡಾ.ಶಿವಮುರ್ತಿಮುರುಘಾಶರಣರ ದಿವ್ಯಪ್ರಕಾಶ ಅನುಗ್ರಹ ಮೂಲಕ ಶ್ರೀ ಜಗದ್ಗುರುಮುರುಘರಾಜೇಂದ್ರ ವಿದ್ಯಾಪೀಠ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ ದಿವ್ಯಪ್ರಕಾಶ ದಿವ್ಯ ಪಥ ಲೋಕಹಿತ ಹಳ್ಳಿಯಿಂದ ನವದೆಹಲಿಯ ಅಕ್ಷರ ದಾಸೋಹ ಜ್ಞಾನ ದಾಸೋಹ ಮಹಿಳಾ ಅಕ್ಷರ ದಾಸೋಹ ಕಲಿಸಲು ,ಶ್ರೀ ಫಲಹಾರೇಶ್ವರ ಪ್ರೌಢಶಾಲೆಯ ಆರಂಭ ಸರ್ಕಾರ ನಿವೃತ್ತ ಶಿಕ್ಷಕ ನೇಮಕಾತಿ ಮಾಡಲು ಪರವಾಣಿಗೆ ಕೊಡುವ ಮೂಲಕ ಶಿಕ್ಷಕ ಸಿಬ್ಬಂದಿಯ ವೇತನ ಸಹಿತ ನೇಮಕಾತಿ ಮಾಡಬೇಕು.
    ಅಭಿವೃದ್ಧಿಯ ದೃಷ್ಟಿಯಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮನೋಭಾವ ಅಗತ್ಯ ಆದರ್ಶ ಆಟ ಪಾಠ ಜರುಗಲು. ನೇರ ನೇಮಕಾತಿ
    ಮಾಡಲು ಚಿತ್ರದುರ್ಗ ಜಗದ್ಗುರುಮುರುಘರಾಜೇಂದ್ರಬೃಹನ್ಮಠ ವಿದ್ಯಾಪೀಠಕ್ಕೆ
    ಮುಖ್ಯಮಂತ್ರಿಗಳು
    ಕರ್ನಾಟಕ ಸರಕಾರ ಬೆಂಗಳೂರ
    ಮುಖ್ಯಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ ಸೂಕ್ತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು
    ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ. ಬೆಂಗಳೂರ
    ಕಾಲಿ ಹುದ್ದೆಯ ನೇಮಕಾತಿ ಅನುದಾನಿತ ಶ್ರೀಫಲಹಾರೇಶ್ವರ ಪ್ರೌಢಶಾಲೆ ಶಿಕ್ಷಕ ಸಿಬ್ಬಂದಿಯ ನೇಮಕಾತಿ ಮಾಡಲು ಅನುಮತಿ ನೀಡುವ ಮೂಲಕ ಶಿಕ್ಷಕ ಸಿಬ್ಬಂದಿಯ ಬದುಕಿನ ಅವಿಭಾಜ್ಯ ಅಂಗ ವಿದ್ಯಾರ್ಥಿಗಳ ಸಮಗ್ರ ಅಧ್ಯಯನ ವಿಸ್ತಾರ ಮಾಡಲು ಪ್ರಯತ್ನ ಮಾಡಲು ಹೃದಯ ಪೂರ್ವಕ ಮನವಿ ಶರಣು ಶರಣಾರ್ಥಿಗಳು
    1,ಗ್ರಾಮೀಣ ಭಾಗದ ಬಡ ಕುಟುಂಬದ ಮಕ್ಕಳ ಶಿಕ್ಷಣ ಉನ್ನತ ಮಟ್ಟದ ಶಿಕ್ಷಣ ಪ್ರಸಾರ ಮಾಡಲು ಖಾಲಿ ಹುದ್ದೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕ ಸರಕಾರ ನೇರ ನೇಮಕಾತಿ ಮಾಡಲು ಆದೇಶ ಕೊಡಬೇಕು,
    2, ಮುಖ್ಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆಯವರು ಗದಗ
    3,ಗೌರವ ಶಿಕ್ಷಕರ ನೇಮಕಾತಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಕ್ತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು.
    ಶ್ರೀ ಜಗದ್ಗುರುಮುರುಘರಾಜೇಂದ್ರಬೃಹನ್ಮಠವಿದ್ಯಾಪೀಠದವರು ಚಿತ್ರದುರ್ಗ ನೇರ ನೇಮಕ ಮಾಡಲು ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಆಯುಕ್ತರು,ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಅನುಮೋದಿಸಿದ ಕರ್ನಾಟಕ ಸರಕಾರ.ಮುಖ್ಯ ಕಾರ್ಯದರ್ಶಿಗಳು ಸೂಕ್ತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲು ಮನವಿ.ಶ್ರೀಜಗದ್ಗುರುಮುರುಘರಾಜೇಂದ್ರಕೋರಣೇಶ್ವರವಿರಕ್ತಮಠ ಅಸೂಟಿ 582203 ತಾ,ರೋಣ,ಜಿ,ಗದಗ

Leave a Reply

Your email address will not be published. Required fields are marked *