ಆಲಮೇಲ:
ಪಟ್ಟಣದ ನೂತನ ಪ್ರಜಾಸೌಧದ ಹತ್ತಿರ ನೂತನವಾಗಿ ನಿರ್ಮಿಸಲಾಗಿರುವ ಜಗಜ್ಯೋತಿ ಬಸವೇಶ್ವರ ವೃತ್ತಕ್ಕೆ ಶುಕ್ರವಾರ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ವಿರಕ್ತಮಠದ ಪೂಜ್ಯ ಜಗದೇಕ ಮಲ್ಲಿಬೊಮ್ಮಯ್ಯ ಸ್ವಾಮೀಜಿ ಅವರು, “ಬಸವಣ್ಣನವರ ತತ್ವ ಆದರ್ಶಗಳು ಸಾರ್ವಕಾಲಿಕ ಪ್ರಸ್ತುತವಾಗಿವೆ. ಅವರ ಹೆಸರಿನಲ್ಲಿ ಸ್ಥಾಪಿತವಾಗಿರುವ ಈ ನೂತನ ವೃತ್ತವು ಪಟ್ಟಣದ ಸೌಂದರ್ಯವನ್ನು ಹೆಚ್ಚಿಸುವುದರೊಂದಿಗೆ, ಸಮಾಜಕ್ಕೆ ಸದಾ ಸನ್ಮಾರ್ಗದ ಪ್ರೇರಣೆ ನೀಡಲಿ” ಎಂದು ಆಶೀರ್ವದಿಸಿದರು.
ಇದೇ ಸಂದರ್ಭದಲ್ಲಿ ಅಳ್ಳೊಳ್ಳಿ ಮಠದ ಶ್ರೀಶೈಲಯ್ಯ ಸ್ವಾಮಿಗಳು ಸಮ್ಮುಖ ವಹಿಸಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಸಿಂದಗಿಯ ಗೊಲ್ಲಾಳಪ್ಪಗೌಡ ಮಾಗಣಗೇರಿ ಹಾಗೂ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಅಶೋಕಗೌಡ ಕೋಳಾರಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸವರಾಜ ತೆಲ್ಲೂರ, ಪ್ರಭು ವಾಲಿಕಾರ, ಶಿವಾನಂದ ಜಗತಿ, ಗುಂಡು ಮೇಲಿನಮನಿ, ಸಂಜು ಎಂಟಮಾನ, ಶಶಿ ಗಣಿಹಾರ, ದಾದಾ ಎಲಗಾರ, ಪ್ರಶಾಂತ ನಾಶಿ, ಮಲ್ಲು ಅಚಲೇರಿ, ಸಂತೋಷ ಲ್ಯಾವಟೆ, ಯಲ್ಲಪ್ಪ ಬುರುಡ, ಸೈಫನ್ ಮುಲ್ಲಾ, ದಾವೂದ ಬೆಣ್ಣೆಶಿರೂರ, ಮಹೇಶ ತೆಲ್ಲೂರ, ವಿಶ್ವನಾಥ ಅಮರಗೊಂಡ, ರಾಜು ಮೇತ್ರಿ ಸೇರಿದಂತೆ ಬಸವ ಸಮಿತಿಯ ಪದಾಧಿಕಾರಿಗಳು ಹಾಗೂ ಸರ್ವ ಕಾರ್ಯಕರ್ತರು ಉಪಸ್ಥಿತರಿದ್ದರು.
