‘ಈ ಐತಿಹಾಸಿಕ ಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ರಾಷ್ಟ್ರೀಯ ಬಸವ ದಳ ಹೆಮ್ಮೆಯಿಂದ ನಿರ್ಧರಿಸಿದೆ.’
ಬೆಂಗಳೂರು:
ಇಡೀ ಜಗತ್ತಿನಲ್ಲೇ ಮೊಟ್ಟಮೊದಲ ಬಾರಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಚರ್ಚಿಸಿ, ಅನುಷ್ಠಾನಗೊಳಿಸಿದ ಕೀರ್ತಿ ವಿಶ್ವಗುರು ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣಕ್ಕೆ ಸಲ್ಲುತ್ತದೆ.
ಅಂತಹ ಪವಿತ್ರ ಬಸವಕಲ್ಯಾಣದಲ್ಲಿ, ಗುರು ಬಸವಣ್ಣನವರ ಸಮಾನತೆಯ ತತ್ವಗಳನ್ನು 21ನೇ ಶತಮಾನದಲ್ಲಿ ಮರುಸ್ಥಾಪಿಸುವ ಪ್ರಯತ್ನವಾಗಿ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಭವ್ಯ ‘ಅನುಭವ ಮಂಟಪ’ ನಿರ್ಮಾಣಗೊಳ್ಳುತ್ತಿದೆ.
ಮುಂಬರುವ 2027ನೇ ವರ್ಷದಲ್ಲಿ ಇದನ್ನು ವಿದ್ಯುಕ್ತವಾಗಿ ಉದ್ಘಾಟಿಸಲು ಸರ್ಕಾರ ನಿರ್ಧರಿಸಿದೆ.
ಇಂತಹ ದಿವ್ಯವಾದ, ಭವ್ಯವಾದ ಅನುಭವ ಮಂಟಪದ ನಿರ್ವಹಣೆಗಾಗಿ, ಬಸವತತ್ವದ ಅನುಯಾಯಿಗಳು ಸಹಸ್ರಾರು ಸಂಖ್ಯೆಯಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುವುದು ಆದ್ಯ ಕರ್ತವ್ಯವಾಗಿದೆ.
ಬಸವತತ್ವದ ಅನುಯಾಯಿಗಳು ಸಹಸ್ರಾರು ಸಂಖ್ಯೆಯಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುವುದು ಆದ್ಯ ಕರ್ತವ್ಯವಾಗಿದೆ.
ಈ ನಿಟ್ಟಿನಲ್ಲಿ, ನಮ್ಮೆಲ್ಲ ಬಸವಪರ ಸಂಘಟನೆಗಳ ಹಿರಿಯರು, ಮುಖಂಡರು, ಚಿಂತಕರು ಮತ್ತು ‘ಬಸವ ಮೀಡಿಯಾ’ ಒಟ್ಟಾಗಿ ನೀಡಿರುವ ಮಹತ್ವದ ಕರೆಗೆ ರಾಷ್ಟ್ರೀಯ ಬಸವ ದಳವು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ. ಅಷ್ಟೇ ಅಲ್ಲದೆ, ರಾಷ್ಟ್ರೀಯ ಬಸವ ದಳವು ಈ ಐತಿಹಾಸಿಕ ಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಹೆಮ್ಮೆಯಿಂದ ನಿರ್ಧರಿಸಿದೆ.
ಬನ್ನಿ, ಎಲ್ಲರೂ ಕೈಜೋಡಿಸೋಣ. 12ನೇ ಶತಮಾನದ ಸಮಾನತೆಯ ಸಂಕೇತವಾದ ಷಟಸ್ಥಲ ಧ್ವಜವನ್ನು 21ನೇ ಶತಮಾನದಲ್ಲಿ ಮತ್ತೆ ಎತ್ತಿಹಿಡಿಯೋಣ. ದೇಶದ ಏಳಿಗೆಗಾಗಿ ಹಾಗೂ ಪ್ರಜೆಗಳ ಐಕ್ಯತೆಗಾಗಿ ನಾವೆಲ್ಲರೂ ಒಂದಾಗಿ ಸೇವೆ ಸಲ್ಲಿಸೋಣ.

ನಮನ್ನು ನಾವು ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಹೇಗೆ
ಅನುಭವ ಮಂಟಪ ಉದ್ಘಾಟನೆ ಯಾಗುವುದರೊಳಗೆ ಅನುಭವ ಮಂಟಪದಲ್ಲಿ ಯಾವ ರೀತಿಯ ಸೇವೆ ಸಲ್ಲಿಸಬಹುದು ಮತ್ತು ಅಲ್ಲಿ ಏನೆಲ್ಲಾ ವ್ಯವಸ್ಥೆಗಳನ್ನ ಮಾಡಬೇಕಾಗುತ್ತದೆ ಎನ್ನುವುದರ ಬಗ್ಗೆ ಚರ್ಚೆಗಳಾಗಬೇಕು. ವ್ಯವಸ್ಥೆಯ ನಿರ್ವಹಣೆಗೆ ಸ್ವಧರ್ಮೀಯರ ಮತ್ತು ನಿಸ್ವಾರ್ಥ ಸೇವೆ ಮಾಡುವವರ ಒಂದು ಸಮಿತಿ ರಚನೆಯಾಗಬೇಕು. ಆ ಸಮಿತಿ ಅಲ್ಲಿನ ವ್ಯವಸ್ಥೆಯ ರೂಪರೇಷೆಗಳ ಬಗ್ಗೆ ಚಿಂತಿಸಿ ಯೋಜನೆಗಳನ್ನ ಹಾಕಿಕೊಂಡು ಪೂರ್ವ ಸಿದ್ಧತೆಯನ್ನ ಮಾಡಿಕೊಳ್ಳಬೇಕು. ಆನಂತರ ಕಾರ್ಯಕರ್ತರನ್ನ ನಿಸ್ವಾರ್ಥ ಸೇವಕರನ್ನ ನೇಮಿಸಿಕೊಳ್ಳಬೇಕು. ಅವರವರ ಕೆಲಸಗಳನ್ನು ಹಂಚಬೇಕು
ನಾನು ಸಂಗನಗೌಡ ಗುರುಪಾದಗೌಡ ಪಾಟೀಲ ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವ ದಳ, ಬಸವ ಪರ ಸಂಘಟನೆಗಳ ಎಲ್ಲ ಹಿರಿಯ ಪ್ರಮುಖರಲ್ಲಿ ಶರಣಾರ್ಥಿಗಳೊಂದಿಗೆ ವಿಜ್ಞಾಪನೆಗಳು.
ಯಾರು ಸಂಬಳವಿಲ್ಲದೆ ನಿಸ್ವಾರ್ಥ ಸೇವೆ ಮಾಡಲು, ಸ್ವಯಂ ಪ್ರೇರಿತರಾಗಿ ಮನೆ ಮಾರು ತೊರೆದು ಬರುತ್ತಾರೆಯೋ ಅಂಥವರನ್ನು ಸಂದರ್ಶನದ ಮೂಲಕ ಕೆಲಸಗಳಿಗೆ ತಕ್ಕಂತೆ ನಿಯಮಿಸಿಕೊಳ್ಳಬೇಕು.
ನಾನು ಶರಣರ ತೊತ್ತಿನ ಬಳಗದೊತ್ತಾಗಿ ಕಕ್ಕಸ ಸ್ವಚ್ಛಗೊಳಿಸುವದರಿಂದ ಹಿಡಿದು ಬಸವಾದಿ ಶರಣರ ತತ್ವ ಸಿದ್ಧಾಂತಗಳನ್ನು ಪ್ರಚಾರ, ಪ್ರಸಾರ ಮಾಡುವ ವರೆಗೆ ಸೇವೆ ಮಾಡಲು ಸಿದ್ಧನಿದ್ದೇನೆ. ಆಯ್ಕೆ ಮತ್ತು ಆಜ್ಞೆ ನಿಮಗೆ ಬಿಟ್ಟದ್ದು. ಜೈ ಗುರುಬಸವ, ಜೈ ಲಿಂಗಾಯತ ಧರ್ಮ 🌹🙏🙏