ಅನುಭವ ಮಂಟಪದ ಸೇವೆ, ಸಂರಕ್ಷಣೆಗೆ ರಾಷ್ಟ್ರೀಯ ಬಸವ ದಳ ಸದಾ ಸಿದ್ಧ

‘ಈ ಐತಿಹಾಸಿಕ ಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ರಾಷ್ಟ್ರೀಯ ಬಸವ ದಳ ಹೆಮ್ಮೆಯಿಂದ ನಿರ್ಧರಿಸಿದೆ.’

ಬೆಂಗಳೂರು:

​ಇಡೀ ಜಗತ್ತಿನಲ್ಲೇ ಮೊಟ್ಟಮೊದಲ ಬಾರಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಚರ್ಚಿಸಿ, ಅನುಷ್ಠಾನಗೊಳಿಸಿದ ಕೀರ್ತಿ ವಿಶ್ವಗುರು ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣಕ್ಕೆ ಸಲ್ಲುತ್ತದೆ.

​ಅಂತಹ ಪವಿತ್ರ ಬಸವಕಲ್ಯಾಣದಲ್ಲಿ, ಗುರು ಬಸವಣ್ಣನವರ ಸಮಾನತೆಯ ತತ್ವಗಳನ್ನು 21ನೇ ಶತಮಾನದಲ್ಲಿ ಮರುಸ್ಥಾಪಿಸುವ ಪ್ರಯತ್ನವಾಗಿ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಭವ್ಯ ‘ಅನುಭವ ಮಂಟಪ’ ನಿರ್ಮಾಣಗೊಳ್ಳುತ್ತಿದೆ.

ಮುಂಬರುವ 2027ನೇ ವರ್ಷದಲ್ಲಿ ಇದನ್ನು ವಿದ್ಯುಕ್ತವಾಗಿ ಉದ್ಘಾಟಿಸಲು ಸರ್ಕಾರ ನಿರ್ಧರಿಸಿದೆ.

​ಇಂತಹ ದಿವ್ಯವಾದ, ಭವ್ಯವಾದ ಅನುಭವ ಮಂಟಪದ ನಿರ್ವಹಣೆಗಾಗಿ, ಬಸವತತ್ವದ ಅನುಯಾಯಿಗಳು ಸಹಸ್ರಾರು ಸಂಖ್ಯೆಯಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುವುದು ಆದ್ಯ ಕರ್ತವ್ಯವಾಗಿದೆ.

ಬಸವತತ್ವದ ಅನುಯಾಯಿಗಳು ಸಹಸ್ರಾರು ಸಂಖ್ಯೆಯಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುವುದು ಆದ್ಯ ಕರ್ತವ್ಯವಾಗಿದೆ.

ಈ ನಿಟ್ಟಿನಲ್ಲಿ, ನಮ್ಮೆಲ್ಲ ಬಸವಪರ ಸಂಘಟನೆಗಳ ಹಿರಿಯರು, ಮುಖಂಡರು, ಚಿಂತಕರು ಮತ್ತು ‘ಬಸವ ಮೀಡಿಯಾ’ ಒಟ್ಟಾಗಿ ನೀಡಿರುವ ಮಹತ್ವದ ಕರೆಗೆ ರಾಷ್ಟ್ರೀಯ ಬಸವ ದಳವು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ. ಅಷ್ಟೇ ಅಲ್ಲದೆ, ರಾಷ್ಟ್ರೀಯ ಬಸವ ದಳವು ಈ ಐತಿಹಾಸಿಕ ಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಹೆಮ್ಮೆಯಿಂದ ನಿರ್ಧರಿಸಿದೆ.

​ಬನ್ನಿ, ಎಲ್ಲರೂ ಕೈಜೋಡಿಸೋಣ. 12ನೇ ಶತಮಾನದ ಸಮಾನತೆಯ ಸಂಕೇತವಾದ ಷಟಸ್ಥಲ ಧ್ವಜವನ್ನು 21ನೇ ಶತಮಾನದಲ್ಲಿ ಮತ್ತೆ ಎತ್ತಿಹಿಡಿಯೋಣ. ದೇಶದ ಏಳಿಗೆಗಾಗಿ ಹಾಗೂ ಪ್ರಜೆಗಳ ಐಕ್ಯತೆಗಾಗಿ ನಾವೆಲ್ಲರೂ ಒಂದಾಗಿ ಸೇವೆ ಸಲ್ಲಿಸೋಣ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
2 Comments
  • ನಮನ್ನು ನಾವು ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಹೇಗೆ

    • ಅನುಭವ ಮಂಟಪ ಉದ್ಘಾಟನೆ ಯಾಗುವುದರೊಳಗೆ ಅನುಭವ ಮಂಟಪದಲ್ಲಿ ಯಾವ ರೀತಿಯ ಸೇವೆ ಸಲ್ಲಿಸಬಹುದು ಮತ್ತು ಅಲ್ಲಿ ಏನೆಲ್ಲಾ ವ್ಯವಸ್ಥೆಗಳನ್ನ ಮಾಡಬೇಕಾಗುತ್ತದೆ ಎನ್ನುವುದರ ಬಗ್ಗೆ ಚರ್ಚೆಗಳಾಗಬೇಕು. ವ್ಯವಸ್ಥೆಯ ನಿರ್ವಹಣೆಗೆ ಸ್ವಧರ್ಮೀಯರ ಮತ್ತು ನಿಸ್ವಾರ್ಥ ಸೇವೆ ಮಾಡುವವರ ಒಂದು ಸಮಿತಿ ರಚನೆಯಾಗಬೇಕು. ಆ ಸಮಿತಿ ಅಲ್ಲಿನ ವ್ಯವಸ್ಥೆಯ ರೂಪರೇಷೆಗಳ ಬಗ್ಗೆ ಚಿಂತಿಸಿ ಯೋಜನೆಗಳನ್ನ ಹಾಕಿಕೊಂಡು ಪೂರ್ವ ಸಿದ್ಧತೆಯನ್ನ ಮಾಡಿಕೊಳ್ಳಬೇಕು. ಆನಂತರ ಕಾರ್ಯಕರ್ತರನ್ನ ನಿಸ್ವಾರ್ಥ ಸೇವಕರನ್ನ ನೇಮಿಸಿಕೊಳ್ಳಬೇಕು. ಅವರವರ ಕೆಲಸಗಳನ್ನು ಹಂಚಬೇಕು

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿಗಳು, ಕೇಂದ್ರ ಸಮಿತಿ, ರಾಷ್ಟ್ರೀಯ ಬಸವ ದಳ