‘ನೂತನ ಅನುಭವ ಮಂಟಪ’ ಕಿರುಪುಸ್ತಕ ಬಿಡುಗಡೆ

ಬಸವ ಮೀಡಿಯಾ
ಬಸವ ಮೀಡಿಯಾ

ರಚನೆ ಎಸ್ ಎಂ ಜಾಮದಾರ್, ಪ್ರಸ್ತಾವನೆ ಗೊ ರು ಚನ್ನಬಸಪ್ಪ

ಹೊಸಪೇಟೆ

ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್ ಎಂ ಜಾಮದಾರ್ ಬರೆದಿರುವ ‘ನೂತನ ಅನುಭವ ಮಂಟಪ – ಸ್ಥಾವರವಾಗದೆ ಜಂಗಮವಾಗಲಿ’ ಕಿರುಪುಸ್ತಕ ಹೊಸಪೇಟೆಯಲ್ಲಿ ನಡೆದ ಬಸವ ಶಕ್ತಿ ಶಿಬಿರದಲ್ಲಿ ಬಿಡುಗಡೆಯಾಯಿತು.

ಬಸವ ಮೀಡಿಯಾ ಪ್ರಕಾಶನ ಪ್ರಕಟಿಸಿರುವ ಪುಸ್ತಕಕ್ಕೆ ಗೊರುಚ ಪ್ರಸ್ತಾವನೆ ಬರೆದಿದ್ದಾರೆ.

ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಸವ ಮೀಡಿಯಾ ಟ್ರಸ್ಟಿನ ಛೇರ್ಮನ್ ಟಿ ಆರ್ ಚಂದ್ರಶೇಖರ್ ಮುಂದಿನ ವರ್ಷ ಲೋಕಾರ್ಪಣೆಯಾಗಲಿರುವ ನೂತನ ಅನುಭವ ಮಂಟಪದ ನಿರ್ವಹಣೆ ಹಾಗೂ ಸಂರಕ್ಷಣೆಯ ಜವಾಬ್ದಾರಿಯ ಬಗ್ಗೆ ಜಾಗೃತಿ ಮೂಡಿಸುವ ಕೃತಿಯಿದು. ಎಲ್ಲಾ ಬಸವಾಭಿಮಾನಿಗಳು ಇದನ್ನು ಓದಿ ಅದರಲ್ಲಿರುವ ಸೂಚನೆಗಳನ್ನು ಕಾರ್ಯಾಚರಣೆಗೆ ಇಳಿಸಬೇಕೆಂದು, ಹೇಳಿದರು.

ಜಾಮದಾರ್ ಅವರು ಬಸವ ಮೀಡಿಯಾಕ್ಕೆ ಬರೆದಿದ್ದ ಲೇಖನಗಳ ಸರಣಿಯನ್ನು ಪುಸ್ತಕ ರೂಪಕ್ಕೆ ತರಲಾಗಿದೆ.

ಪುಸ್ತಕದಲ್ಲಿ ವಿವರವಾಗಿ ಚರ್ಚೆಯಾಗಿರುವ ಮುಖ್ಯ ವಿಷಯಗಳು:

  • ಕೂಡಲಸಂಗಮದ ಬಸವ ಅಂತರಾಷ್ಟ್ರೀಯ ಕೇಂದ್ರದ ರೀತಿ ನೂತನ ಅನುಭವ ಮಂಟಪ ಖಾಲಿ ಬೀಳದಿರಲಿ.
  • ಮೂಲ ಆಶಯಗಳಿಗೆ ಜೀವ ತುಂಬುವಂತಹ ಕಾರ್ಯಕ್ರಮಗಳು ನೂತನ ಅನುಭವ ಮಂಟಪದಲ್ಲಿ ನಿರಂತರವಾಗಿ ನಡೆಯಬೇಕು.
  • ಅದರ ನಿರ್ವಹಣೆಯ ಜವಾಬ್ದಾರಿಯನ್ನು ಸರಕಾರದ ಮೇಲೆ ಬಿಡಲಾಗದು. ಸಿಖ್ಖರು ಸುವರ್ಣ ಮಂದಿರ ಸಿಖ್ಖರ ಸುವರ್ಣ ಮಂದಿವನ್ನು ನಿರ್ವಹಿಸುತ್ತಿರುವ ರೀತಿಯಲ್ಲಿ ಅನುಭವ ಮಂಟಪದ ನಿರ್ವಹಣೆಯಾಗಬೇಕು.
  • ಅನುಭವ ಮಂಟಪ ನಿರ್ವಹಣೆಯಲ್ಲಿ ವಿರಕ್ತ ಮಠಗಳ ಪಾತ್ರ.
  • ಸಂವಿಧಾನದ ಸಂರಕ್ಷಣೆಯಲ್ಲಿ ಅನುಭವ ಮಂಟಪದ ಪಾತ್ರ.
  • ಮುಖ್ಯವಾಗಿ ಜಾಮದಾರ್ ಅವರು ಅನುಭವ ಮಂಟಪದ ಮೇಲೆ ಬಸವ ವಿರೋಧಿಗಳ ಕೆಂಗಣ್ಣಿದೆ, ಹಿಂದುತ್ವ ಬೆಳೆಸಲು ಅನುಭವ ಮಂಟಪ ಬಳಕೆಯಾಗುವ ಅಪಾಯವಿದೆ, ಎಂಬ ಎಚ್ಚರಿಕೆ ಪುಸ್ತಕದಲ್ಲಿ ನೀಡಿದ್ದಾರೆ.

ಕಟ್ಟಡದ ನಿರ್ವಹಣೆಗೆ, ಸದ್ಬಳಕೆ ಹಾಗೂ ಅದರ ಸೈದ್ಧಾಂತಿಕ ಸಂರಕ್ಷಣೆಗೆ ಬಸವಾಭಿಮಾನಗಳು ಸ್ವಯಂಸೇವಕರ ಪಡೆ ರಚಿಸಿಕೊಂಡು ಅನುಭವ ಮಂಟಪಕ್ಕೆ ಹೋಗಿ ಶ್ರಮದಾನ ಮಾಡಬೇಕೆಂದು ಕರೆ ನೀಡಿದ್ದಾರೆ.

ಸ್ವಯಂಸೇವಕರ ನೋಂದಣಿಗೆ ಆನ್ಲೈನ್ ಫಾರಂ ಬಸವ ಮೀಡಿಯಾ ವೆಬ್ಸೈಟಿನಲ್ಲಿ ಲಭ್ಯವಿದೆ.

ಪುಸ್ತಕದ ಪ್ರಸ್ತಾವನೆ ಬರೆದಿರುವ ಗೊರುಚ ನೂತನ ಅನುಭವ ರೂಪುಗೊಂಡ ಮಂಟಪದ ಹಿನ್ನಲೆ, ತಮ್ಮ ನೇತೃತ್ವದ ಸಮಿತಿ ಮಾಡಿದ ಕಾರ್ಯವನ್ನು ಪರಿಚಯಮಾಡಿಕೊಟ್ಟು ಜಾಮದಾರ್ ಅವರ ಎಲ್ಲಾ ಸಲಹೆಗಳನ್ನು ಅನುಮೋಧಿಸಿದ್ದಾರೆ.

(ಪುಸ್ತಕದ ಬೆಲೆ 50 ರೂಪಾಯಿ. ಬಸವ ಶಕ್ತಿ ಶಿಬಿರಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಸದ್ಯದಲ್ಲೇ ಆನ್ಲೈನ್ ಮತ್ತು ಪುಸ್ತಕದ ಮಳಿಗೆಗಳ ಮೂಲಕವೂ ಓದುಗರಿಗೆ ತಲುಪಿಸಲಾಗುವುದು.)

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
3 Comments
  • ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪುಸ್ತಕ ದೊರೆಯಲಿ

  • ಧನ್ಯವಾದಗಳು 🙏🙏 ಶರಣು ಶರಣಾರ್ಥಿಗಳು,💐💐💐

Leave a Reply

Your email address will not be published. Required fields are marked *