ಪ್ರವಚನ: ಮುಕ್ತಾಯಿಗೆ ಮುಕ್ತಿ ಮಾರ್ಗ ತೋರಿದ ಅಲ್ಲಮ

ಬಸವ ಮೀಡಿಯಾ
ಬಸವ ಮೀಡಿಯಾ

ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 18

ಕಲಬುರಗಿ:

ಭಕ್ತಿಯನು ಮುಕ್ತಾಯಿಗರುಹಿಸಿ

ಮುಕ್ತನಾದ ಅಜಗಣ್ಣನಿರವನು

ಅವ್ಯಕ್ತದಲಿ ವಿರಚಿಸಿದೆಮ್ಮಯ ಗುರು

ಗುಹೇಶ್ವರನು ಅಲ್ಲಮಪ್ರಭುರಾಯನ

ನತರೆಲ್ಲರನು ಸಂಸಾರನಿರವ ಕಲ್ಲ ಕಾಡುವ ಕೋಟೆಯ ಮಾಣಿಸಿ

ಸಲ್ಲಲಿತ ಲಿಂಗಾನುಭಾವದ ಬೆಲ್ಲವನು ಮೆಲುಕಿಸಿ

ನಿಜಸುಖದಲಿ ನಿಲಿಪೆನೆನುತ ಬರುತಿರ್ದನ್ ವಿನೋದದಲಿ

ಚಾಮರಸ ಕವಿಯ ಪ್ರಭುಲಿಂಗಲೀಲೆಯ ಈ ಸಾಲುಗಳು ಭಕ್ತಿ ಶ್ರೇಷ್ಠರಾಗಿದ್ದ ಅಜಗಣ್ಣ ಮುಕ್ತಾಯಕ್ಕರ ಸಾರ್ಥಕ ಮತ್ತು ಮೌಲಿಕ ಜೀವನವನ್ನು ವಿಸ್ತರಿಸುತ್ತದೆ. ಬದುಕಿನ ಐಕ್ಯಸ್ಥಲ ಮೆಟ್ಟಿದ, ಬದುಕಿನ ಕೊನೆಯ ಅವಸ್ಥೆ ಅನುಭವಿಸಿದ ಪರಮ ಲಿಂಗಾಂಗಯೋಗಿ ಅಜಗಣ್ಣ.

ಲಕ್ಕುಂಡಿಯಲ್ಲಿ ತನ್ನ ತಂಗಿಯೊಂದಿಗೆ ವಾಸವಿದ್ದ ಅಜಗಣ್ಣ, ಮಸರಕಲ್ ನ ಮಲ್ಲಿಕಾರ್ಜುನನೊಂದಿಗೆ ಮದುವೆ ಮಾಡಿಕೊಡಲಾಗುತ್ತದೆ. ಗಂಡನ ಮನೆಗೆ ಹೋಗುವಾಗ ಉಭಯ ಮನೆಯ ಕುಲದೀಪ ಆಗು ಎಂದು ಹಾರೈಸಿ ಕಳಿಸುತ್ತಾನೆ.

ಹೀಗಿರುವಾಗ ಒಮ್ಮೆ ತನ್ನ ಮನೆಯ ಬಾಗಿಲು ಬಡಿದು ಅಜ್ಜಗಣ್ಣ ಸಾವನ್ನಪ್ಪಲು, ತಂಗಿ ಬಂದು ಅಣ್ಣನ ಶವವನ್ನು ತನ್ನ ತೊಡೆಯ ಮೇಲಿಟ್ಟುಕೊಂಡು ದುಃಖಿಸುತ್ತಿದ್ದಳು. ಲೋಕ‌ ಸಂಚಾರಿಯಾಗಿ ಹೊರಟಿದ್ದ ಚರ ಜಂಗಮರಾದ ಅಲ್ಲಮ ನೋಡುತ್ತಾನೆ.

ಜೀವಾತ್ಮ ಬಯಲು ತತ್ವವಾಗಿ ಬೆಳಕಾಗಿ ಗುಹೇಶ್ವರನಲ್ಲಿ ಒಂದಾಗುತ್ತದೆ. ಹುಟ್ಟಿನ ಜೊತೆಗೆ ಸಾವು ಬೆನ್ನಟ್ಟಿ ಬರುತ್ತದೆ. ತನು ಉಂಟೆಂದಡೆ ಪಾಶಬದ್ಧ. ಜೀವಾತ್ಮ-ಪರಮಾತ್ಮರ ಒಂದಾಗಿರುವಿಕೆಯನ್ನು ಮತ್ತು ಶರೀರ-ಮನಸ್ಸಿನ ಭ್ರಮೆಯನ್ನು ಆತ್ಮಾವಲೋಕನದ ಮೂಲಕ ವಿವರಿಸುತ್ತಾರೆ.  ಕೂಡುವ ಮತ್ತು ಅಗಲುವ ಪ್ರಕ್ರಿಯೆ ನಿಂತರವಾದುದು. ಎಮ್ಮವರಿಗೆ ಸಾವಿಲ್ಲ; ಎಮ್ಮವರು ಸಾವನರಿಯರು.‌ ಸಾವೆಂಬುದು ಸಯವಲ್ಲ ಎಂದು ಸಮಾಧಾನ ಹೇಳುತ್ತಾರೆ.

ಮೇಲಾಗಿ ನಿಮ್ಮ ಶರಣ ಅಜಗಣ್ಣಗೆ ಶರಣೆಂದು ಬದುಕುವೆ ಗುಹೇಶ್ವರ ಎಂದು ಅಜಗಣ್ಣನ ವ್ಯಕ್ತಿತ್ವವನ್ನು ವರ್ಣಿಸುತ್ತಾರೆ. ನಿನ್ನಣ್ಣ ಅಜಗಣ್ಣ ಸತ್ಯೋನ್ಮುಕ್ತ. ಈ ಲೌಕಿಕ ಪ್ರಪಂಚದ ಅಂತ್ಯಕ್ರಿಯೆ ಮುಗಿಸಿ ಕಲ್ಯಾಣದಲ್ಲಿ ಅಣ್ಣ ಬಸವಣ್ಣ ಕಟ್ಟಿದ ಕಲ್ಯಾಣದೆಡೆಗೆ ಸಾಗು ಎಂದು ಅಪ್ಪಣೆ ಕೊಡಿಸುತ್ತಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *