ನಮ್ಮ ದೇಶ, ನಾವೆಲ್ಲರೂ ಒಂದೆಂಬ ಭಾವ ಬೆಳೆಯಬೇಕು : ಡಾ. ಸಿದ್ಧರಾಮ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ :

ಅನೇಕ ಮಹಾತ್ಮರ ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ೮೦ ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶಾದ್ಯಂತ ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದೆವೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರಲ್ಲಿಯೂ ನಮ್ಮ ದೇಶ, ನಾವೆಲ್ಲರೂ ಒಂದು ಎಂಬ ಭಾವ ಬೆಳೆಯಬೇಕು ಎಂದರು.

ಜಗದ್ಗುರು ತೋಂಟದಾರ್ಯ ಮಠದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.

ಮನುಷ್ಯನ ದುರಾಸೆಯಿಂದ ಸುತ್ತಮುತ್ತಲಿನ ಪರಿಸರ ಪ್ರಾಣಿ, ಪಕ್ಷಿ, ಸಂಪನ್ಮೂಲಗಳ ನಾಶ ಹೆಚ್ಚಾಗುತ್ತಿದೆ. ಗಿಡಮರ, ಪ್ರಾಣಿ, ಪಕ್ಷಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು ಎಂದು ಶ್ರೀಗಳು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಅಣ್ಣಿಗೇರಿಯ ಶಿವಯೋಗಿ ಹುಬ್ಬಳ್ಳಿ, ಶರಣಪ್ಪ ಸವಡಿ ಪಾಲ್ಗೊಂಡಿದ್ದರು. ಡಾ. ಜಿ.ಬಿ. ಪಾಟೀಲ, ಅಶೋಕ ಬರಗುಂಡಿ, ದಾನಯ್ಯ ಗಣಾಚಾರಿ, ವಿ.ಕೆ. ಕರೇಗೌಡ್ರ, ವಿಜಯಕುಮಾರ ಮಾಲಗಿತ್ತಿ ಮುಂತಾದವರು ವೇದಿಕೆ ಮೇಲೆ ಉಪಸ್ಥಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ಸ್ವಾಗತ ಮಾಡಿದರು. ಶ್ರೀಮತಿ ಹಾಸಿಲಕರ ಕಾರ್ಯಕ್ರಮ ನಿರೂಪಣೆ ಮಾಡಿದರು. ಗುರುಬಸವ ಸಿ.ಬಿ.ಎಸ್.ಇ. ಶಾಲಾ ಮಕ್ಕಳಿಂದ ರಾಷ್ಟ್ರಭಕ್ತಿಯ ವಿವಿಧ ಕಾರ್ಯಕ್ರಮಗಳು ಜರುಗಿದವು.

ಬಾಲಚಂದ್ರ ಭರಮಗೌಡರ, ವಿರೂಪಾಕ್ಷಪ್ಪ ಬಳ್ಳೊಳ್ಳಿ, ರಾಜಪ್ಪ ಮೆಣಜಿಗಿ, ಚನ್ನಯ್ಯ ಹಿರೇಮಠ, ವೀರಣ್ಣ ಗೋಟಡಕಿ, ಗಿರಿಜಕ್ಕ ಧರ್ಮರೆಡ್ಡಿ, ಪ್ರಕಾಶ ಅಶುಂಡಿ, ಸೋಮು ಪುರಾಣಿಕ ಸೇರಿದಂತೆ ಶ್ರೀಮಠದ ಭಕ್ತರು, ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *