ತಾವರಗೇರಾ
ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಕೊಪ್ಪಳ ಜಿಲ್ಲೆಯಲ್ಲಿ ಶನಿವಾರ ಶುರುವಾಯಿತು.
ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ ವ್ಯಕ್ತಿಗಳಿಂದ ಲಿಂಗಾಯತ ಸಮಾಜ, ಧರ್ಮದ ಮುಂದಿರುವ ಸವಾಲುಗಳ ಹಾಗೂ ಬಸವ ಸಂಘಟನೆಗಳ ರಾಜಕೀಯ ಪ್ರಭಾವ ಹಾಗು ಪ್ರಜ್ಞೆಯ ಬಗ್ಗೆ ಎರಡು ದಿನಗಳ ಗಂಭೀರ ಚರ್ಚೆ ನಡೆಯಲಿದೆ.


































