8ನೇ ಸ್ಮರಣೋತ್ಸವ ಕಾರ್ಯಕ್ರಮ
ಇಂಡಿ :
ಗದುಗಿನ ಲಿಂಗೈಕ್ಯ ಜಗದ್ಗುರು ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಕೇವಲ ಧಾರ್ಮಿಕ ಮುಖಂಡರಾಗಿರದೆ ಪ್ರಗತಿಪರ ಚಿಂತಕರು, ಕನ್ನಡ ನಾಡು ನುಡಿ ಜಲ ಮತ್ತು ಜೈವಿಕ ವೈವಿದ್ಯತೆ ಸಂರಕ್ಷಣೆಗೆ ಹೋರಾಡಿದ ಮಹಾಮಾನವತಾವಾದಿಗಳಾಗಿದ್ದರು ಎಂದು ಸಾಲೋಟಗಿ ಸಿದ್ದೇಶ್ವರ ಆಶ್ರಮದ ಪೂಜ್ಯ ಸಂಗಮೇಶ್ವರ ಶ್ರೀಗಳು ಹೇಳಿದರು.

ನಗರದ ಬಸವರಾಜೇಂದ್ರ ದೇವಸ್ಥಾನದಲ್ಲಿ ಬಸವರಾಜೇಂದ್ರ ಸತ್ಸಂಗ ಸಮಿತಿ ಮತ್ತು ಶ್ರೀ ಗಜಾನನ ಯುವಕ ಮಂಡಳಿ ವತಿಯಿಂದ ಹುಣ್ಣಿಮೆ ಕಾರ್ಯಕ್ರಮದ ನಿಮಿತ್ಯ ಈಚೆಗೆ ನಡೆದ ಗದಗದ ಡಾ. ಸಿದ್ದಲಿಂಗ ಶ್ರೀಗಳ 8 ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗದಗ ಜಿಲ್ಲೆಯನ್ನು ಸಂರಕ್ಷಣೆ ಮಾಡಿ ಕಪ್ಪತಗುಡ್ಡವನ್ನು ಉಳಿಸಲು ದೊಡ್ಡಮಟ್ಟದ ಪರಿಸರ ಚಳುವಳಿಯನ್ನು ಮಾಡಿದರು. ಬಹುರಾಷ್ಟ್ರೀಯ ಕಂಪನಿಯಾದ ಪ್ರೋಸ್ಕೋ ಉಕ್ಕಿನ ಸ್ಥಾವರ ಕಂಪನಿ ಸ್ಥಾಪನೆಯ ವಿರುದ್ಧ ಹೋರಾಟ ನಡೆಸಿದವರು, ರೈತರನ್ನು ಒಗ್ಗೂಡಿಸಿ ಯಶಸ್ವಿಯಾದರು ಎಂದರು.

ಸನ್ಮಾನ ಸ್ವೀಕರಿಸಿ ಇಂಡಿಯ ಯುವಕ ಸಧ್ಯ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಪೋಲಿಸ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿರುವ ಮಂಜುನಾಥ ಮರಬದ ಮಾತನಾಡಿ, ಅಪರಾಧಗಳನ್ನು ಎಲ್ಲರೂ ಕೂಡಿ ತಡೆಯಬೇಕಾಗಿದೆ. ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಬೇಕಾಗಿದೆ ಎಂದರು.
ಕೇವಲ ಪೊಲೀಸ್ ಇಲಾಖೆ ಎಲ್ಲವನ್ನು ಮಾಡಲು ಸಾದ್ಯವಾಗುವದಿಲ್ಲ. ಅದಲ್ಲದೆ ಇಂದಿನ ಯುವಕರು ಶರಣು ಸಂಸ್ಕಾರ ಬೆಳೆಸಿಕೊಂಡು ಹಿರಿಯರ ಮಾರ್ಗದರ್ಶನದಲ್ಲಿ ಮುಂದುವರೆಯಬೇಕಾಗಿದೆ ಎಂದರು.

ಸತ್ಸಂಗ ಸಮಿತಿಯ ಕಾರ್ಯದರ್ಶಿ ಆರ್.ವಿ. ಪಾಟೀಲ, ಅರವಿಂದ ಗಾಳಿಮಠ, ಸದಾನಂದ ಈರನಕೇರಿ, ಎಚ್.ಎಸ್. ಎಳೆಗಾವಿ, ಬಿ.ಎಸ್. ಪಾಟೀಲ ಶಿಕ್ಷಕರು ಕಾರ್ಯಕ್ರಮ ಕುರಿತು ಮಾತನಾಡಿದರು.
ಸಮಾರಂಭದಲ್ಲಿ ನಿವೃತ್ತ ಪ್ರಾಚಾರ್ಯ ಎ.ಎಸ್. ಗಾಣಿಗೇರ, ನಿವೃತ್ತ ಪ್ರಾಧ್ಯಾಪಕ ನೀಲಪ್ಪ ಹಂಜಗಿ, ನಿವೃತ್ತ ಪ್ರಾಚಾರ್ಯ ಆಯ್.ಬಿ ಸುರಪುರ, ಎಸ್.ವಿ. ಹೂಗಾರ, ಕೆ.ಜಿ. ನಾಟಿಕಾರ, ಸಿ.ಎಂ. ಉಪ್ಪಿನ, ಬಿ.ಆರ್. ಬಿರಾದಾರ, ಎನ್.ಟಿ. ಸಂಗಾ, ಜಯಶ್ರೀ ಪತ್ತಾರ, ಸುಶೀಲಾ ಪಾಟೀಲ, ಮಹಾನಂದಾ ಮೈದರಗಿ, ವಿದ್ಯಾ ಪಾಟೀಲ ಮತ್ತಿತರರು ಇದ್ದರು.
ಇದೇ ವೇಳೆ ಪೋಲಿಸ ಇಲಾಖೆಗೆ ಆಯ್ಕೆಯಾದ ಪಿಎಸ್ ಐ ಕಾರ್ಯ ನಿರ್ವಹಿಸುತ್ತಿರುವ ಮಂಜುನಾಥ ಮರಬದ ಅವರನ್ನು ಸತ್ಕರಿಸಲಾಯಿತು.
