ಮೈಸೂರಿನಲ್ಲಿ ಸಾಮೂಹಿಕ ಇಷ್ಟಲಿಂಗ ಯೋಗ, 770 ಅಮರಗಣಂಗಳ ಸ್ಮರಣೆ

ಬಿ. ಚನ್ನಪ್ಪ
ಬಿ. ಚನ್ನಪ್ಪ

ಮೈಸೂರು :

ನಗರದ ಸಿ.ಎಫ್.ಟಿ.ಆರ್.ಐ. ಲೇಔಟ್ ಭೋಗಾದಿಯಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ 770 ಅಮರಗಣoಗಳ ಸ್ಮರಣ ಕಾರ್ಯಕ್ರಮವನ್ನು ರಾಷ್ಟ್ರೀಯ ಬಸವಳದಳದ ಮುಖಂಡರಾದ ರತ್ನಮ್ಮ ಮತ್ತು ಜಯಣ್ಣ ದಂಪತಿಗಳ ಮನೆಯಲ್ಲಿ  ಏರ್ಪಡಿಸಲಾಗಿತ್ತು.

ಮೊದಲಿಗೆ ಷಟಸ್ಥಲ ದ್ವಜಾರೋಹಣ ನೆರವೇರಿಸಲಾಯಿತು. ನಂತರ ಧ್ವಜಗೀತೆ ಹಾಗೂ  ಕಲ್ಯಾಣ ಕ್ರಾಂತಿ ಶರಣ ಗೀತೆಯನ್ನು ಕುಮಾರಿ ಚೂಡಾಮಣಿ ಅವರು ಹಾಡಿದರು.

ನಂತರ ಕನ್ನಡ ಬಾವುಟವನ್ನು ಹಾರಿಸಿ ಕನ್ನಡ ರಾಜ್ಯೋತ್ಸವವನ್ನು ಕೂಡಾ ಆಚರಿಸಲಾಯಿತು. ಡಾ. ಯಮುನಾ ಅವರು ವಚನ ಹಾಡಿದರು.

ಇಷ್ಟಲಿಂಗ ಪೂಜಾ ಶಿವಯೋಗ ಕಾರ್ಯಕ್ರಮವನ್ನು ಗಣಾಚಾರಿ ಶರಣ ಚೌಹಳ್ಳಿ ಲಿಂಗರಾಜಪ್ಪ ಅವರು ನಡೆಸಿಕೊಟ್ಟರು.

ಶರಣತತ್ವ ಚಿಂತಕರು, ಸಾಹಿತಿಗಳು ಹಾಗೂ ಭಜನಾ ಕಲಾವಿದರಾದ ಹಲ್ಲರೆ ಶಿವಬುದ್ದಿ ಅವರು ಇಷ್ಟಲಿಂಗ ಪೂಜೆ ಮತ್ತು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಅನುಭಾವ ನೀಡಿದರು.

ಲಿಂಗಾಯತ ಧರ್ಮದ ಇಷ್ಟಲಿಂಗ ಪೂಜಾ ವಿಧಾನದಲ್ಲಿ ಪೂಜಾರಿ ಎಂಬ ದಲ್ಲಾಳಿ ಇರುವುದಿಲ್ಲ. ಪೂಜ್ಯರು ಮತ್ತು ಪೂಜಕರು ನಾವೇ ಆಗಿರುತ್ತೇವೆ ಎಂದರು.

ವಿಶ್ವಗುರು ಬಸವಣ್ಣನವರಿಂದ ಸಂಸ್ಥಾಪಿತವಾದ ಲಿಂಗಾಯತ ಧರ್ಮವು ಸಕಲರನ್ನು ಒಳಗೊಂಡ ಜಗತ್ತಿನ ವಿಶೇಷ ಧರ್ಮವಾಗಿದೆ ಎಂದು ತಿಳಿಸಿದರು.

ಕಲ್ಯಾಣಕ್ಕೆ ಹೊರರಾಷ್ಟ್ರ ಮತ್ತು ಹೊರರಾಜ್ಯಗಳಿಂದ ಬಂದು, ಶರಣರು ಬಸವಣ್ಣನವರ ಅನುಭವ ಮಂಟಪದಲ್ಲಿ ಆತ್ಮೋದ್ಧಾರ ಮತ್ತು ವಿಶ್ವದ ಸಕಲ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಯುತ್ತಿದ್ದುದನ್ನು ಸ್ಮರಿಸಿದರು.

ಕಾರ್ಯಕ್ರಮದ ಆಯೋಜಕರಾಗಿದ್ದ ರತ್ನಮ್ಮ ಅವರು ಮಾತನಾಡಿ, ಈ ಇಷ್ಟಲಿಂಗ ಶಿವಯೋಗ ಕಾರ್ಯಕ್ರಮವು ಪ್ರತಿ ಮನೆಯಲ್ಲೂ ನಡೆಯುವಂತಾಗಬೇಕೆಂದು ಆಶಿಸಿದರು.

ಲಿಂಗಾಂಗ ಯೋಗವು ಪರಮಾತ್ಮನನ್ನು ಕೂಡಲು ಇರುವ ಏಕೈಕ ಮಾರ್ಗವಾಗಿದೆ. ಶರಣರು ಇದನ್ನು  ಶಿವಯೋಗ ಸುಖವೆಂದು ವಚನಗಳಲ್ಲಿ ತಿಳಿಸಿರುತ್ತಾರೆ. ಆದ್ದರಿಂದ ಇಷ್ಟಲಿಂಗ ಶಿವಯೋಗದ ಮುಖಾಂತರ ಪ್ರತಿಯೊಬ್ಬರು ಕೂಡಾ ಪರಮಾತ್ಮನನ್ನು ಕೂಡುವಕಡೆ ಗಮನ ಕೊಡಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಲವು ಸಾಧಕರಿಗೆ ಸನ್ಮಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಮುಂಬರುವ ಜಾತಿಗಣತಿಯಲ್ಲಿ ಲಿಂಗಾಯತ ಧರ್ಮವೆಂದು ಬರೆಸುವ ಬಗ್ಗೆ ಜಾಗೃತಿ, ಅರಿವು ಮೂಡಿಸಬೇಕೆಂದು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮಹಾದೇವಪ್ಪ ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬಸವ ಭಾರತ ಪತ್ರಿಕೆಯ ಸಂಪಾದಕರಾದ ಶಿವರುದ್ರಪ್ಪ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ಹಲವು ಪದಾಧಿಕಾರಿಗಳು ಮತ್ತು ರಾಷ್ಟ್ರೀಯ ಬಸವದಳ ಹಾಗೂ ಹಲವು ಗ್ರಾಮಗಳಿಂದ ಬಸವಪರ ಸಂಘಟನೆಗಳ ಮುಖ್ಯಸ್ಥರು, ನೂರಾರು ಬಸವಭಕ್ತರು ಭಾಗವಹಿಸಿ ಯಶಸ್ವಿಗೊಳಿಸಿ ಸಂತೋಷಗೊಂಡರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
2 Comments
  • ಒಳ್ಳೆಯ ಕಾರ್ಯಕ್ರಮವಾಗಿದೆ ಒಳ್ಳೆಯ ಸಂದೇಶ ರವಾನಿಸಿದ್ದಿರಿ ಜೈ ಬಸವ ಶರಣು ಶರಣಾರ್ಥಿ

Leave a Reply

Your email address will not be published. Required fields are marked *

ಅಧ್ಯಕ್ಷರು, ಶ್ರೀಗುರುಬಸವೇಶ್ವರ ಸೇವಾ ಟ್ರಸ್ಟ್, ನಂಜನಗೂಡು