ರಾಘವೇಂದ್ರ ಸ್ವಾಮಿಗಳ ರಥೋತ್ಸವದಲ್ಲಿ ವಚನಾನಂದ ಶ್ರೀಗಳು

ಬಸವ ಮೀಡಿಯಾ
ಬಸವ ಮೀಡಿಯಾ

ಹರಿಹರ

ನಗರದಲ್ಲಿ ಶ್ರೀಗುರು ರಾಘವೇಂದ್ರ ಸ್ವಾಮಿಗಳವರ ಮಹಾರಥೋತ್ಸವಕ್ಕೆ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಸಾಮೀಜಿ ಗುರುವಾರ ಚಾಲನೆ ನೀಡಿದರು.

ವಿವಾದ ಹುಟ್ಟುಹಾಕಿರುವ ವಚನ ದರ್ಶನ ಪುಸ್ತಕವನ್ನು ಬೆಂಬಲಿಸುತ್ತಾ ವಚನಾನಂದ ಶ್ರೀಗಳು ಕಳೆದ ಕೆಲವು ವಾರಗಳಿಂದ ಲಿಂಗಾಯತರು ಹಿಂದೂಗಳೇ ಎಂದು ಹೇಳುತ್ತಿದ್ದಾರೆ. ಇತ್ತೀಚೆಗೆ ನಾನು ಮೊದಲು ಹಿಂದೂ ನಂತರ ಲಿಂಗಾಯತ ಎಂತಲೂ ಹೇಳಿದ್ದಾರೆ.

ಈ ಹಿನ್ನಲೆಯಲ್ಲಿ ರಾಘವೇಂದ್ರ ಸ್ವಾಮಿಗಳವರ 353 ನೇ ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಿದರ ಬಗ್ಗೆ ವಿವರ, ಫೋಟೋಗಳನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದಕ್ಕೆ ಅನೇಕ ಬಸವ ಕಾರ್ಯಕರ್ತರು ವಚನಗಳೊಂದಿಗೆ ಪತ್ರಿಕ್ರಿಯೆ ನೀಡುತ್ತಿದ್ದಾರೆ. ವಾಟ್ಸ್ ಆಪ್ ನಲ್ಲಿ ಹರಿದಾಡುತ್ತಿರುವ ಒಂದು ವಚನ ಹೀಗಿದೆ:

ಉಡಿಯಲಿಂಗವ ಬಿಟ್ಟು, ಗುಡಿಯಲಿಂಗದ ಮುಂದೆ ನಿಂದು
ನುಡಿಗಳ ಗಡಣವ ಮಾಡುವ
ತುಡುಗುಣಿ ಕಳ್ಳುಗುಡಿ ಕಳ್ಳ ಹಾದರ ಮುಖವ ನೋಡಲಾಗದು
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ

Share This Article
1 Comment
  • ಉಡಿಯಲಿಂಗವ ಬಿಟ್ಟು, ಗುಡಿಯಲಿಂಗದ ಮುಂದೆ ನಿಂದು
    ನುಡಿಗಳ ಗಡಣವ ಮಾಡುವ
    ತುಡುಗುಣಿ ಕಳ್ಳುಗುಡಿ ಕಳ್ಳ ಹಾದರ ಮುಖವ ನೋಡಲಾಗದು
    ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ

Leave a Reply

Your email address will not be published. Required fields are marked *