ಚಿತ್ತಾಪುರ
ಪಂಚಗೃಹ ಹಿರೇಮಠದ ಸಿದ್ಧವೀರ ಶಿವಾಚಾರ್ಯರು ಶಿವಲಿಂಗದ ಮೇಲೆ ಪಾದ ಇರಿಸಿ ಪೂಜೆ ಮಾಡಿದ ಘಟನೆಯಿಂದ ಶಿವಭಕ್ತರ ಭಾವನೆಗೆ ಧಕ್ಕೆಯಾಗಿದೆ ಎಂದು ಕಂಬಳೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಸೋಮಶೇಖರ ಶಿವಾಚಾರ್ಯರು ಹೇಳಿದರು.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂಪ್ರದಾಯ ಎಂದು ಶಿವಲಿಂಗದ ಮೇಲೆ ಪಾದ ಇಡಬಾರದು. “ಪ್ರತಿಷ್ಠಾಪನೆಗೆ ಮುಂಚೆ ಶಿವಲಿಂಗದ ಶುದ್ಧೀಕರಣ ಹಸ್ತಗಳಿಂದ ಮಾಡಬೇಕೆ ಹೊರತು ಪಾದಗಳಿಂದಲ್ಲ. ಶಿವಲಿಂಗ ಪರಮಾತ್ಮನ ಸ್ವರೂಪ,” ಎಂದರು.
‘ದೇವರು ಮತ್ತು ಶಿವಲಿಂಗಕ್ಕಿಂತ ದೊಡ್ಡವರು ಯಾರೂ ಇಲ್ಲ. ಅಂತಹ ಲಿಂಗದ ಮೇಲೆ ಜಗದ್ಗುರುಗಳು ಪಾದ ಇಟ್ಟರೂ ತಪ್ಪೇ ಆಗುತ್ತದೆ,” ಎಂದರು.
‘ಶಿವಲಿಂಗದ ಮೇಲೆ ಪಾದ ಇಟ್ಟು ಪೂಜೆ ಮಾಡಿಸಿಕೊಂಡಿರುವ ವಿಡಿಯೊ ವೈರಲ್ ಆದ ಮೇಲೆ ರಾಜ್ಯದ ವಿವಿಧ ಭಾಗಗಳಿಂದ ಶಿವಭಕ್ತರು ನಮಗೆ ದೂರವಾಣಿ ಕರೆ ಮಾಡಿ ಬಹಳ ಕೋಪ ವ್ಯಕ್ತ ಪಡಿಸುತ್ತಿದ್ದಾರೆ’ ಎಂದು ಅವರು ಹೇಳಿದರು.