ಅಂಬಿಗ ಚೌಡಯ್ಯ ಶರಣೋತ್ಸವ, ಗಣಾಚಾರ ಪ್ರಶಸ್ತಿ ಪ್ರದಾನ

ಬಸವ ಮೀಡಿಯಾ
ಬಸವ ಮೀಡಿಯಾ

ಇಲಕಲ್ಲ:

ಗದಗ-ಬೆಟಗೇರಿಯ ಶ್ರೀ ಅಂಬಿಗ ಚೌಡಯ್ಯ ಪ್ರತಿಷ್ಠಾನವು ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದಲ್ಲಿ ಶ್ರೀ ಅಂಬಿಗ ಚೌಡಯ್ಯ ಜಯಂತ್ಯುತ್ಸವ, ಶ್ರೀ ಅಂಬಿಗ ಕುಮಾರ ಚೌಡಯ್ಯನವರ ಶರಣೋತ್ಸವ ಹಾಗೂ ಶ್ರೀ ಅಂಬಿಗ ಚೌಡಯ್ಯ ಮತ್ತು ಶ್ರೀ ಅಂಬಿಗ ಕುಮಾರ ಚೌಡಯ್ಯ ಶರಣರ ಗಣಾಚಾರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಈಚೆಗೆ ಏರ್ಪಡಿಸಿತ್ತು.

ಪೂಜ್ಯ ಗುರುಮಹಾಂತ ಸ್ವಾಮಿಗಳ ಸಾನಿಧ್ಯ ವಹಿಸಿದ್ದರು. ಶ್ರೀ ಅಂಬಿಗ ಚೌಡಯ್ಯ ಗಣಾಚಾರ ಪ್ರಶಸ್ತಿಯನ್ನು ಪೂಜ್ಯ ಡಾ. ಬಸವಲಿಂಗ ಸ್ವಾಮಿಗಳು, ಯೋಗ ನಿಸಗ೯ ಚಿಕಿತ್ಸಾ ಕೇಂದ್ರ ಶ್ರೀ ವಿಜಯ ಮಹಾಂತೇಶ ತೀಥ೯, ಶಿರೂರು ಇವರಿಗೆ ಪ್ರದಾನ ಮಾಡಿ ಗೌರವ ಸತ್ಕಾರ ಮಾಡಲಾಯಿತು.

ಶ್ರೀ ಅಂಬಿಗ ಕುಮಾರ ಚೌಡಯ್ಯ ಗಣಾಚಾರ ಪ್ರಶಸ್ತಿಯನ್ನು ಶರಣ ನಾಗಣ್ಣ ಕತ್ತಿ, ಶರಣ ಸಾಹಿತಿಗಳು ಇವರಿಗೆ ಪ್ರಧಾನ ಮಾಡಿ ಗೌರವ ಸತ್ಕಾರಿಸಲಾಯಿತು.

ಪೂಜ್ಯ ಸಿದ್ದರಾಮ ಶರಣರು ಬೆಲ್ದಾಳ, ಪೂಜ್ಯ ಸತ್ಯಕ್ಕ ತಾಯಿಯವರು, ಸಂತೆಕಡೂರಿನ ಪೂಜ್ಯ ನವಲಿಂಗ ಶರಣರು, ಲ.ರು. ಗೊಳಸಂಗಿ ಶರಣರು, ಜೀವಯ್ಯ ಶರಣರು, ಉಪಸ್ಥಿತರಿದ್ದರು.

ಪ್ರೊ. ಸಿದ್ದಣ್ಣ ಲಂಗೋಟಿ ಗೌರವ ಸಂಪಾದಕರು, ಬಸವ ಬೆಳಗು ಪತ್ರಿಕೆ, ರಾಮದುರ್ಗ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಗನಬಸವನಶ್ರೀಪಾದ ಹಾದಿಮನಿ ಶರಣರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗಮೇಶ ಹಾದಿಮನಿ ಅವರು ಶರಣು ಸಮಪ೯ಣೆ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *