‘ಪದಗಳ ಮೇಲೆ ಸರ್ವಾಧಿಕಾರ ನಡೆಸಿದ ಅಲ್ಲಮ, ಕಬೀರ್’

ಬಸವ ಮೀಡಿಯಾ
ಬಸವ ಮೀಡಿಯಾ

ಲೋಕಾರ್ಪಣೆಗೆ ಮುನ್ನವೇ ಎರಡನೇ ಮುದ್ರಣ ಕಂಡ ‘ಅನನ್ಯ ಅಲ್ಲಮ’

ಬೆಂಗಳೂರು

ಕಬೀರ್ ಪದಗಳ ಮೇಲೆ ಸರ್ವಾಧಿಕಾರ ನಡೆಸುತ್ತಾನೆ ಎಂದು ಸಂಪ್ರದಾಯಸ್ಥರು ದೂಷಿಸುತ್ತಿದ್ದರು. ಹಾಗೆಯೇ ಕನ್ನಡದಲ್ಲಿ ಪದಗಳ ಮೇಲೆ ಸರ್ವಾಧಿಕಾರ ನಡೆಸಿದವನು ಅಲ್ಲಮ. ಆ ಕಾರಣಕ್ಕಾಗಿ ಅಲ್ಲಮ ನನ್ನ ಮೆಚ್ಚಿನ ಕನ್ನಡ ಸಂತಕವಿ, ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಅಜಯ್ ಕುಮಾರ್ ಸಿಂಗ್ ಹೇಳಿದರು.

ನಗರದಲ್ಲಿ ರವಿವಾರ ನಡೆದ ‘ಅನನ್ಯ ಅಲ್ಲಮ’ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಿಂಗ್ ಅಲ್ಲಮ ಮತ್ತು ಕಬೀರರ ತೌಲನಿಕ ಅಧ್ಯಯನ ಮಾಡಿ ಡಾಕ್ಟರೇಟ್ ಪಡೆದಿದ್ದಾರೆ.

ಅಲ್ಲಮನ ವಚನ ಚಿಂತನೆಗಳು ಎಲ್ಲಾ ಕಾಲಕ್ಕೂ ಸಲ್ಲವಂತಾಗಿದ್ದು ಮತ್ತೆ ಮತ್ತೆ ಅವನ್ನು ಮರು ಓದಿಗೆ ಒಳಪಡಿಸಿ ಇಂದಿನ ಯುವ ಜನಾಂಗಕ್ಕೆ ತಲುಪಿಸುವ ಅಗತ್ಯವಿದೆ, ಎಂದ ಹೇಳಿದರು.

ಅಲ್ಲಮನನ್ನು ಅರ್ಥ ಮಾಡಿಕೊಳ್ಳುವಲ್ಲಿ ‘ಅನನ್ಯ ಅಲ್ಲಮ’ ಅತ್ಯಂತ ಪ್ರಾಕ್ಟಿಕಲ್ ಆದ ಕೃತಿ ಎಂದರು.

ಬೆಂಗಳೂರಿನ ಹರಿವು ಬುಕ್ಸ್ ಪ್ರಕಾಶನದ ಮುಖ್ಯಸ್ಥರಾದ ರತೀಶ್ ಮಾತನಾಡಿ ಪುಸ್ತಕ ಲೋಕಾರ್ಪಣೆಗೆ ಮುನ್ನವೇ ಎರಡನೇ ಮುದ್ರಣ ಕಂಡಿದೆ ಎಂದು ಸಂಭ್ರಮದಿಂದ ಓದುಗರನ್ನು ಸ್ವಾಗತಿಸಿದರು.

ಕನ್ನಡ ಕಥೆಗಾರ್ತಿ ಮತ್ತು ಪತ್ರಕರ್ತೆ ಕುಸುಮ ಆಯರಹಳ್ಳಿ ಸಂವಾದವನ್ನು ನಡೆಸಿಕೊಟ್ಟರು. ಪುಸ್ತಕದ ಲೇಖಕರಾದ ಹರಿಹರ ಶಿವಕುಮಾರ ಉಪಸ್ಥಿತರಿದ್ದರು.

“ಅನನ್ಯ ಅಲ್ಲಮ” ಪುಸ್ತಕ ಬೇಕಾದಲ್ಲಿ ಹರಿವು ಬುಕ್ಸ್ ಮೊಬೈಲ್ 8088822171 ಸಂಪರ್ಕಿಸಬಹುದು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *