ನಂಜನಗೂಡು
ದೇವೀರಮ್ಮನಹಳ್ಳಿಯ ಅನುರಾಗ ಮಕ್ಕಳಮನೆಯಲ್ಲಿ 79ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಬಸವಪ್ರಾರ್ಥನಾ ಮಂದಿರ ಉದ್ಘಾಟನೆಯಾಗಿದೆ.
ಜೊತೆಗೆ ಅನುರಾಗ್ ಮಕ್ಕಳ ಮನೆ ಹಿರಿಯ ವಿದ್ಯಾರ್ಥಿಗಳ ವೇದಿಕೆಯ ಉದ್ಘಾಟನೆ, ಶರಣ ಭಾರತ ದ್ವೖಮಾಸಿಕಪತ್ರಿಕೆ ವಾರ್ಷಿಕೋತ್ಸವ ಹಾಗೂ ಶಿವಬುದ್ಧಿ ಹಲ್ಲರೆಯವರ “ಗುರುಲಿಂಗಜಂಗಮಗೀತೆ” ಕೃತಿಯ ಲೋಕಾರ್ಪಣೆ ಕಾರ್ಯಕ್ರಮಗಳೂ ನಡೆದವು.
ಕಳೆದ ಭಾನುವಾರ ಬೆಳಿಗ್ಗೆ ನಡೆದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಸೋಮಹಳ್ಳಿ ಮಠದ ನಿಯೋಜಿತ ಪೂಜ್ಯರಾದ ಬಸವಯೋಗಿಪ್ರಭು ಸ್ವಾಮೀಜಿ ಮಾತನಾಡಿದರು.

“ನಾಡಿನ ಅನೇಕ ಭಾಗಗಳಿಂದ ಶರಣರು ಬಂದು ಈ ಭಾಗದಲ್ಲಿ ಒಂದು ದೊಡ್ಡ ಕ್ರಾಂತಿಯನ್ನೇ ಮಾಡಿ ಸಮಾಜವನ್ನು ಸುಧಾರಿಸಿದ್ದಾರೆ.
ಗುರುಮಲ್ಲೇಶ್ವರರು ಈ ಭಾಗದಲ್ಲಿ ಪಾದವನ್ನಿಟ್ಟು ಪಾವನವನ್ನಾಗಿ ಮಾಡಿದುದರ ಸಲುವಾಗಿ ಅನುರಾಗ್ ಸೇವಾ ಟ್ರಸ್ಟ್ ನಂತಹ ಸಂಸ್ಥೆಗಳು ಹುಟ್ಟಿಕೊಂಡಿವೆ. ಇಂತಹ ಸಮಾಜ ಸೇವೆ ಮಾಡುವ ಸೋಮಶೇಖರ್ ರಂತಹ ಮಹನೀಯರು ದೇಶಕ್ಕೆ ಅತ್ಯವಶ್ಯ,” ಎಂದು ಅಭಿಪ್ರಾಯ ಪಟ್ಟರು.
ಹಲ್ಲರೆಮಠದ ಪೂಜ್ಯ ಬಸವಣ್ಣಸ್ವಾಮಿಗಳು ಸಮ್ಮುಖವನ್ನು, ಮೈಸೂರು ವಿಶ್ವವಿದ್ಯಾನಿಲಯದ ಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಡಿ. ಎಸ್. ಗುರು ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಕೂಡಲಸಂಗಮ ಬಸವಧರ್ಮಪೀಠದ ಸಂಚಾಲಕರಾಗಿರುವ ಮೈಸೂರಿನ ಶರಣೆ ರತ್ನಮ್ಮ ಜಯಣ್ಣ ಕಾರ್ಯಕ್ರಮ ಉದ್ಘಾಟಿಸಿದರು.

ಶರಣ ದೇವರಾಜ್ ಪಿ. ಚಿಕ್ಕಹಳ್ಳಿ ಗುರುಲಿಂಗಜಂಗಮ ಕೃತಿ ಬಿಡುಗಡೆಮಾಡಿ ಕೃತಿಯನ್ನು ಪರಿಚಯಿಸಿದರು. ಧಾರವಾಡದ ಸದ್ಗುರು ಹೆರಿಟೇಜ್ ಫೌಂಡೇಶನ್ ಸ್ಥಾಪಕ ಶಿವಪುತ್ರಪ್ಪ ಸಾಹುಕಾರ್ ಶರಣಭಾರತ ಪತ್ರಿಕೆ ಬಿಡುಗಡೆ ಮಾಡಿದರು.
ಮುಖ್ಯ ಅತಿಥಿಗಳಾಗಿ ಮೖಸೂರಿನ ಸ್ಮೖಲಿಂಗ್ ಹೋಮ್ಸ್ ಬಿ. ಶಶಿಧರರೆಡ್ಡಿಯವರು ಹಾಗೂ ಮೈಸೂರಿನ ಅಗಾಮಿನ್ ಇನ್ನೋವೇಷನ್ಸ್ ಸಿ.ಇ.ಓ ಷಡಾಕ್ಷರಿಸ್ವಾಮಿಯವರು ಭಾಗವಹಿಸಿದ್ದರು.
ಅನುರಾಗ್ ಸೇವಾ ಟ್ರಸ್ಟಿನ ಸ್ಥಾಪಕ ಡಿ. ಜಿ. ಸೋಮಶೇಖರಮೂರ್ತಿ, ಗುರುಲಿಂಗಜಂಗಮ ಕೃತಿಯ ಲೇಖಕರಾದ ಶಿವಬುದ್ಧಿ ಹಲ್ಲರೆ, ಕಾಯಕ ಕ್ರಿಯೇಶನ್ಸ್ ನ ಪೂರಿಗಾಲಿ ಮರಡೇಶ ಮೂರ್ತಿಯವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನೈಸರ್ಗಿಕ ಕೃಷಿಕರಾದ ಪ್ರಭುಸ್ವಾಮಿ ಹೊಸಕೋಟೆ, ಪತಂಜಲಿ ಯೋಗ ಶಿಕ್ಷಣ ಕೇಂದ್ರದ ಶ್ರೀ ಉಡಿಗಾಲ ಪ್ರಕಾಶ್, ಶರಣತತ್ವ ಚಿಂತಕರಾದ ಶ್ರೀ ಬಸವಣ್ಣ ಬೊಮ್ಮಲಾಪುರ, ಶರಣೆ ರೂಪ ಮಂಜುನಾಥ್ ಇವರುಗಳನ್ನು ಸನ್ಮಾನಿಸಲಾಯಿತು.

ಶಿವಬುದ್ಧಿ ಹಲ್ಲರೆ. ಬಸವಣ್ಣ ಹಲ್ಲರೆ. ಮಾದಪ್ಪ ಕಮರಹಳ್ಳಿ. ಕೆ, ಆನಂದ್ ಕುಮಾರ್ ಕಂಬಳಿಹಾಳ್. ಎಚ್. ಬಿ. ವೀರಭದ್ರಸ್ವಾಮಿ ಹಗಿನವಾಳು ವಚನಗಾಯನ ನಡೆಸಿಕೊಟ್ಟರು.
ಉಪನ್ಯಾಸಕಿ ಯೋಗೇಶ್ವರಿ ಪರಮೇಶ್ ನಿರೂಪಣೆ ಮಾಡಿದರು. ಹಿರಿಯ ವಿದ್ಯಾರ್ಥಿ ವೃಷಭೇಂದ್ರ ವಂದನಾರ್ಪಣೆ ನಡೆಸಿಕೊಟ್ಟರು.
ಮಕ್ಕಳ ಮನೆಯ ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳ ಸಹಕಾರ ಹಾಗು ನಂಜನಗೂಡು, ಮೈಸೂರು, ಚಾಮರಾಜನಗರ, ಗಂಡ್ಲುಪೇಟೆ, ಎಚ್. ಡಿ. ಕೋಟೆ, ಬಳ್ಳಾರಿ, ಹೊಸಪೇಟೆ, ಹಾಗೂ ನೆರೆಹೊರೆಯ ಗ್ರಾಮಗಳಿಂದ ಬಂದಿದ್ದ ಎಲ್ಲಾ ಸಹೃದಯರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಬಸವ ಪ್ರಭೆ ಎಲ್ಲೆಡೆ ಅರಳುತ್ತಿದೆ. ಪೂಜ್ಯ ಬಸವಯೋಗಿಪ್ರಭುಸ್ವಾಮಿಗಳಿಗೆ ಅನಂತ ಶರಣು ಶರಣಾರ್ಥಿ ಅನುರಾಗ ಮಕ್ಕಳ ಮನೆ ಡಿ. ಜಿ. ಸೋಮಶೇಖರ್ ಮೂರ್ತಿ ಹಾಗೂ ಹಲ್ಲರೆ ಶಿವಬುದ್ದಿ ಯವರಿಗೂ ಮತ್ತು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ಶರಣು