ಮುಕ್ತಾಯಕ್ಕ ಅವರದು ವೈಚಾರಿಕತೆಯ ದಿಟ್ಟನಿಲುವಿನ ಜ್ಞಾನಮಾರ್ಗ

ಬಸವ ಮೀಡಿಯಾ
ಬಸವ ಮೀಡಿಯಾ

ಚಿಂಚೋಳಿ:

ಶರಣೆ ಅಕ್ಕಮಹಾದೇವಿ ತಾಯಿಯವರು ಭಕ್ತಿಮಾರ್ಗ, ತಾರ್ಕಿಕವಾದ ಜ್ಞಾನಮಾರ್ಗ ಹೊಂದಿದ್ದರೆ, ಶರಣೆ ಮುಕ್ತಾಯಕ್ಕ ಅವರು ವೈಚಾರಿಕತೆಯ ದಿಟ್ಟನಿಲುವಿನ ಜ್ಞಾನಮಾರ್ಗ ಹೊಂದಿದ್ದರು ಎಂದು ಮುಖ್ಯಗುರು ಶಶಿಕಲಾ ಎಂ.ಎಸ್. ಹೇಳಿದರು.

ಚಂದಾಪೂರದ ಬಸವ ಮಂಟಪದಲ್ಲಿ ಶರಣೆ ನೀಲಾಂಬಿಕಾ ಟ್ರಸ್ಟ್ ವತಿಯಿಂದ ನಡೆದ ಶ್ರಾವಣ ಸೋಮವಾರದ ಶರಣ ದರ್ಶನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ಮುಕ್ತಾಯಕ್ಕರನ್ನು ವಚನ ಸಾಹಿತ್ಯದ ಧೃವತಾರೆ ಎಂದು ಕರೆಯಲಾಗುತ್ತದೆ. ಇವರ ಸುಮಾರು ೩೭ ವಚನಗಳು ಈವರೆಗೆ ನಮಗೆ ಲಭ್ಯವಾಗಿವೆ. ಅವರ ವಚನಗಳ ಅಂಕಿತ ಅಜಗಣ್ಣತಂದೆ ಎಂಬುದಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಬಸವೇಶ ಪಾಟೀಲರು, ಬಸವಾದಿ ಶರಣರ ಚಿಂತನೆಗಳು ಅಜ್ಞಾನದಿಂದ ಜ್ಞಾನದೆಡೆಗೆ ಸಾಗುವಂತೆ ಮಾಡುತ್ತವೆ. ಮಹಿಳೆಯರು ಜಾಗೃತರಾದರೆ ಸಮಾಜದಲ್ಲಿ ಪರಿವರ್ತನೆ ಕಾಣಬಹುದು ಎಂದರು.

ಸಹಾಯಕ ಇಂಜನೀಯರ್ ಗಿರಿರಾಜ ಸಜ್ಜನ ಮಾತನಾಡಿದರು. ಜಗದೇವಿ ಹಕ್ಯಾಳ ಅಧ್ಯಕ್ಷತೆ ವಹಿಸಿದ್ದರು.

ಜ್ಯೋತಿ ಬೊಮ್ಮಾ, ಸುನಿತಾ ಪಾಲಾಮೂರ, ಸುಮಂಗಲಾ ಹುಣಜೆ, ರಮಾ ರಡ್ಡಿ, ಶಾರದಾ ಶೆಳ್ಳಿಗಿ, ಶರಣಮ್ಮ ಹಲಚೇರಿ, ವಚನ ಮೇಲಗೆರಿ, ದಾಕ್ಷಾಯಣಿ ಮುಸ್ತರಿ, ಲಕ್ಷ್ಮಿ ರಮೇಶ, ಶಂಭುಲಿಂಗ ಶಿವಪೂರಿ, ರಂಗಣ್ಣ ಪೂಜಾರಿ, ಲೋಕೇಶ ಶೆಳ್ಳಗಿ, ಸುರೇಶ ದೇಶಪಾಂಡೆ, ಸುರೇಶ ವಾಲಿಕಾರ ಮುಂತಾದವರಿದ್ದರು.

ಜ್ಯೋತಿ ಬೊಮ್ಮಾ ಸ್ವಾಗತಿಸಿದರು. ಮಲ್ಲಿಕಾರ್ಜುನ ಪಾಲಾಮೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಶೀನಾಥ ಹುಣಜೆ ನಿರೂಪಿಸಿದರು. ಉಪನ್ಯಾಸಕಿ ಸುನಿತಾ ಹಲ್ಮಡಗಿ ಶರಣು ಸಮರ್ಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *