ನಾಳೆ ಕನ್ನೇರಿ ಸ್ವಾಮಿ ಹಿಂದೂ ಸಮಾವೇಶ ವಿರುದ್ಧ ಕಲಬುರಗಿ ಚಲೋ

ಆರ್‌ಎಸ್‌ಎಸ್‌ ಬಹುತ್ವ ಭಾರತಕ್ಕೆ ಅಂಟಿದ ಕ್ಯಾನ್ಸರ್‌ನಂತಿದೆ: ಮೀನಾಕ್ಷಿ ಬಾಳಿ

ಜೇವರ್ಗಿ:

ಕಲಬುರಗಿ ನಗರದಲ್ಲಿ 27ರಂದು ಆಯೋಜಿಸಿರುವ ಬಸವಾದಿ ಶಿವಶರಣರ ಹಿಂದೂ ಸಮಾವೇಶವನ್ನು ವಿರೋಧಿಸಿ ಇದೇ 25ರಂದು ನಗರದಲ್ಲಿ ಪ್ರತಿಭಟನಾ ರ್ಯಾಲಿ ಹಾಗೂ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಬಸವತತ್ವ ಹಾಗೂ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿಯ ಪ್ರಮುಖರಾದ ಮೀನಾಕ್ಷಿ ಬಾಳಿ ತಿಳಿಸಿದರು.

ಪಟ್ಟಣದ ಜೆಟಿವಿಪಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆದ ಪ್ರಗತಿಪರ ಸಂಘಟನೆಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11 ಗಂಟೆಗೆ ಕನ್ನಡ ಭವನದಿಂದ ಜಗತ್ ವೃತ್ತದವರೆಗೆ ರ್ಯಾಲಿ ನಡೆಸಿ, ಜಗತ್‌ನಲ್ಲಿ ವಿಚಾರ ಸಂಕಿರಣ ನಡೆಸಲಾಗುವುದು ಎಂದರು.

ಜನವಿರೋಧಿ ವೈದಿಕರ ತತ್ವ, ವರ್ಣಾಶ್ರಮ ಪದ್ಧತಿಯನ್ನು ವಿರೋಧ ಮಾಡಿದ 12ನೇ ಶತಮಾನದ ವಚನಗಳನ್ನು, ಬಸವಣ್ಣನವರ ವಿಚಾರಗಳನ್ನು ತಿರುಚುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಬಹುತ್ವ ಭಾರತಕ್ಕೆ ಅಂಟಿದ ಆರ್‌ಎಸ್‌ಎಸ್‌ ಕ್ಯಾನ್ಸರ್‌ನಂತಿದೆ.

ಅದು ಲಿಂಗಾಯತ ಮಠಾಧೀಶ ಕನ್ಹೇರಿ ಸ್ವಾಮೀಜಿಯನ್ನು ಮುಂದೆ ಮಾಡಿಕೊಂಡು ಕಲಬುರಗಿಗೆ ಕಾಲಿಡುತ್ತಿದೆ. ಹಿಂದೂ ಸಮಾವೇಶದ ಹೆಸರಿನಲ್ಲಿ ಕೆಲವರು ಬಿಜೆಪಿ ಚುನಾವಣಾ ಕುತಂತ್ರದ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ಜನ ತಾವೆಲ್ಲ ಆಗಮಿಸಬೇಕೆಂದು ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕು ಅಧ್ಯಕ್ಷ ನೀಲಕಂಠ ಅವಂಟಿ, ಸಮಿತಿ ಮುಖಂಡರಾದ ಆರ್.ಜಿ. ಶೆಟಗಾರ ವಿನಂತಿಸಿ ಮಾತನಾಡಿದರು.

ಪ್ರಮುಖರಾದ ರವೀಂದ್ರ ಶಾಬಾದಿ, ಅರ್ಜುನ ಭದ್ರೆ, ಮರೆಪ್ಪ ಹಳ್ಳಿ, ಪುಂಡಲೀಕ ಗಾಯಕವಾಡ, ಶಿವನಗೌಡ ಹಂಗರಗಿ, ಷಣ್ಮುಖಪ್ಪ ಹಿರೇಗೌಡ, ನೀಲಕಂಠ ಅವಂಟಿ, ಚಂದ್ರಶೇಖರ ಹರನಾಳ, ಭೀಮರಾಯ ನಗನೂರ, ಮಲ್ಕನಗೌಡ ಮಲ್ಲಣ್ಣ ಕೊಡಚಿ ಹೆಗ್ಗಿನಾಳ, ಬಿ.ಎನ್.ಪಾಟೀಲ ಹರನೂರ, ನಿಂಗಣ್ಣ ಹಳಿಮನಿ, ಈರಣ್ಣ ಭೂತಪೂರ, ಶ್ರೀಹರಿ ಕರಕಿಹಳ್ಳಿ, ಸಿದ್ರಾಮ ಕಟ್ಟಿ, ರವಿ ಕುರಳಗೇರಾ, ಯಶವಂತ ಮಂದೇವಾಲ, ಬಂಡೆಪ್ಪ ಹಾಗರಗಿ, ಈರಣ್ಣಗೌಡ ಗುಲ್ಯಾಳ, ಮಹಾನಂದ ಹುಗ್ಗಿ, ಶಿವಕುಮಾರ ಹುಗ್ಗಿ ಸೇರಿದಂತೆ ಜಾಗತಿಕ ಲಿಂಗಾಯತ, ಪ್ರಗತಿಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
2 Comments
  • ಒಳ್ಳೆಯ ಸಂದೇಶ ರವಾನಿಸಿದ್ದಾರೆ ಜೈ ಬಸವ

  • ತನ್ನ ಮುನಿಸದವರಿಗೆ ತಾನೇಕೆ ಮುನಿಯಬೇಕು?ತನ್ನ ದೋಷವ ಮುನಿಸು ಹೊರಗಣ ದೋಷವೇಕೆ?ತನ್ನ ಕಾಯದ ಕಳವಳಕ್ಕೆ ತಾನೆ ನೊೊಂದಡೆ,ಮುನಿಸು ದೇವರೆಡೆಗೆ ಹೋಹುದೆ ಚೆನ್ನಮಲ್ಲಿಕಾರ್ಜುನ.

Leave a Reply

Your email address will not be published. Required fields are marked *