ಶಿಗ್ಗಾಂವ ಗ್ರಾಮ ವಚನ ವಾಚನ ಸ್ಪರ್ಧೆಯಲ್ಲಿ 250 ವಿದ್ಯಾರ್ಥಿಗಳು ಭಾಗಿ

ಗ್ರಾಮ ಸುಧಾರಣಾ ಸಮಿತಿ ಆಯೋಜಿಸಿದ್ದ ಮೂರು ದಿನಗಳ ಸ್ಪರ್ಧೆ

ಶಿಗ್ಗಾಂವ :

ತಾಲ್ಲೂಕಿನ ಹೋತನಹಳ್ಳಿ ಗ್ರಾಮ ಸಿಂದಗಿ ಶಾಂತವೀರೇಶ್ವರ ಸ್ವಾಮಿ ಜಾತ್ರೆ ಹಾಗೂ ಬಸವ ಜಯಂತಿ ಅಂಗವಾಗಿ ಸ್ಥಳೀಯ ಗ್ರಾಮ ಸುಧಾರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ‘ವಚನ ವಾಚನ ಸ್ಪರ್ಧೆ’ ಮೂರುದಿನಗಳ ಕಾಲ ನಡೆಯಿತು.

18 ರಿಂದ ಏಪ್ರಿಲ್ 20 ರವರೆಗೆ ನಡೆದ ಈ ಸಾಂಸ್ಕೃತಿಕ ಸ್ಪರ್ಧೆಯಲ್ಲಿ 250 ವಿದ್ಯಾರ್ಥಿಗಳು ಪಾಲ್ಗೊಂಡು, ಬಸವಣ್ಣನವರ ಕಾಯಕ ಮತ್ತು ಸಾಮಾಜಿಕ ಸಮಾನತೆಯ ಸಂದೇಶಗಳನ್ನು ಮರುಕಳಿಸುವಂತೆ ಮಾಡಿದರು.

ವಿದ್ಯಾರ್ಥಿಗಳ ವಯೋಮಾನಕ್ಕೆ ಅನುಗುಣವಾಗಿ ಮೂರು ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಯಿತು.

ಸ್ಪರ್ಧಾಳುಗಳ ವಾಚನ ಶೈಲಿ, ಉಚ್ಚಾರಣೆ ಮತ್ತು ವಚನಗಳ ಅರ್ಥ ವಿವರಣೆಯನ್ನು ಗಮನಿಸಿ ಜ್ಞಾನನಿಧಿ ನವೋದಯ ಕೋಚಿಂಗ್ ಸೆಂಟರ್‌ನ ಶಿಕ್ಷಕ ವೃಂದದವರು ತೀರ್ಪುಗಾರರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದರು.

ವಿಜೇತ ವಿದ್ಯಾರ್ಥಿಗಳು:

ಕಿರಿಯ ಪ್ರಾಥಮಿಕ 1 ರಿಂದ 4ನೇ ತರಗತಿ – ಪ್ರಥಮ ಕುಮಾರಿ ಅಮೃತ ಜಾಡಬಡಿಗೇರ, ಶಂಕ್ರಿಕೊಪ್ಪ ₹ 10,000, ದ್ವಿತೀಯ ಕುಮಾರ ಸಾತ್ವಿಕ್ ಪೂಜಾರ, ಬಮ್ಮನಹಳ್ಳಿ ₹ 7,500, ತೃತೀಯ ತನುಶ್ರೀ ಹೊನ್ನತ್ತಿ, ಕುಳೇನೂರ್ ₹ 5,000.

ಹಿರಿಯ ಪ್ರಾಥಮಿಕ 5 ರಿಂದ 7ನೇ ತರಗತಿ – ಪ್ರಥಮ ಕುಮಾರಿ ಅಮೃತ ಓಣಿಕೇರಿ, ಶಿವಪುರ ₹ 10,000, ದ್ವಿತೀಯ ಕುಮಾರಿ ಹರ್ಷಿತ ಪ್ಯಾಟಿ, ಹುಣಸಿಕಟ್ಟಿ ₹ 7,500, ತೃತೀಯ ಕುಮಾರಿ ಚೈತ್ರ ಹೆಗಡೆ, ಹುಲಿಕಟ್ಟಿ ₹ 5,000.

ಪ್ರೌಢಶಾಲೆ/ಕಾಲೇಜು 8 ರಿಂದ 12ನೇ ತರಗತಿ – ಪ್ರಥಮ ಕುಮಾರಿ ಸಾವಿತ್ರಿ ಎಂ ಕೋಟಿ, ಶಂಕ್ರಿಕೊಪ್ಪ ₹ 10,000, ದ್ವಿತೀಯ ಕುಮಾರಿ ಕೀರ್ತನ ಬಸವರಾಜ ಭಂಗಿ, ಹೋತನಹಳ್ಳಿ ₹ 7,500, ತೃತೀಯ ಕುಮಾರಿ ಮಂಗಳ ಕರಬಸಪ್ಪ ಬೈಲವಾಳ್, ಹೋತನಹಳ್ಳಿ ₹ 3,000, ತೃತೀಯ ಕುಮಾರಿ ಪೈಜಾ ಅಂಜುಮ, ಬಮ್ಮನಹಳ್ಳಿ ₹ 3,000. ಈ ರೀತಿ ನಗದು ಬಹುಮಾನ ವಿಜೇತರಾದರು.

ಸಮಾರೋಪ ಸಮಾರಂಭದಲ್ಲಿ ಗ್ರಾಮದ ಅನೇಕ ಗಣ್ಯರು ಭಾಗವಹಿಸಿ, ವಿಜೇತ ಮಕ್ಕಳಿಗೆ ಶಾಲು ಹೊದಿಸಿ, ಸ್ಮರಣಿಕೆ ಹಾಗೂ ನಗದು ಬಹುಮಾನ ನೀಡಿ ಗೌರವಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಮ ಸುಧಾರಣಾ ಸಮಿತಿಯ ಪದಾಧಿಕಾರಿಗಳು ಮಾತನಾಡಿ, “ವಚನ ಸಾಹಿತ್ಯ ಕೇವಲ ಪಠ್ಯವಲ್ಲ, ಅದು ಬದುಕಿನ ದಾರಿ. ಇಂದಿನ ಪೀಳಿಗೆಗೆ ಶರಣರ ವಿಚಾರಗಳನ್ನು ತಲುಪಿಸುವುದೇ ನಮ್ಮ ಉದ್ದೇಶ,” ಎಂದು ತಿಳಿಸಿದರು.

ಸಿಂದಗಿ ಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದು ಮಾತನಾಡಿದರು.

ಜ್ಞಾನನಿಧಿ ನವೋದಯ ಕೋಚಿಂಗ್ ಸೆಂಟರ್‌ನ ಶಿಕ್ಷಕರು ಸ್ಪರ್ಧೆಯ ಅಚ್ಚುಕಟ್ಟಾದ ನಿರ್ವಹಣೆಗೆ ಸಾಕ್ಷಿಯಾದರು. ಬಸವರಾಜ ವಡ್ಡರ್ ಅವರು ಸಮಾರಂಭವನ್ನು ಆಕರ್ಷಕವಾಗಿ ನಿರೂಪಿಸಿದರು. ಗ್ರಾಮ ಸುಧಾರಣಾ ಸಮಿತಿಯ ಸದಸ್ಯರು ಮತ್ತು ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.

ಬಸವ ಜಯಂತಿ ಪ್ರಯುಕ್ತ ಬಸವಣ್ಣನವರ ಭಾವಚಿತ್ರವನ್ನು ಹೋತನಹಳ್ಳಿ ಗ್ರಾಮದ ಎಲ್ಲ ಬೀದಿಗಳಲ್ಲಿ ಸಂಚರಿಸಿ ಮಕ್ಕಳಿಂದ ಪ್ರಭಾತ್ ಪೇರಿ ನಡೆಸಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *