ಬೆಳಗಾವಿ
ಕೃತಕ ಬುದ್ಧಿಮತ್ತೆ (AI) ಮೂಲಕ ಬಸವಣ್ಣನವರ 432 ವಚನಗಳಿಗೆ ಸಂಗೀತ ಸಂಯೋಜನೆ ಮಾಡಿರುವ ಫಕೀರಗೌಡ ಎಂ. ಹಾದಿಮನಿ ಅವರಿಗೆ ಈಗ ‘ಏಷ್ಯಾ ಬುಕ್ ಆಫ್ ರೆಕಾರ್ಡ್ಸ್’ ಮನ್ನಣೆ ದೊರೆತಿದೆ.
ಇದೇ ಸಾಧನೆಗೆ ಹಿರೇಬಾಗೇವಾಡಿ ಗ್ರಾಮದ ಹಾದಿಮನಿ ಅವರಿಗೆ ಕಳೆದ ತಿಂಗಳು ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಿಂದ ಕೂಡ ಮಾನ್ಯತೆ ದೊರೆತಿತ್ತು.
‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ರಾಷ್ಟ್ರೀಯ ಮಟ್ಟದ ದಾಖಲೆಯನ್ನು ಗುರುತಿಸಿದರೆ ‘ಏಷ್ಯಾ ಬುಕ್ ಆಫ್ ರೆಕಾರ್ಡ್ಸ್’ ಅಂತರರಾಷ್ಟ್ರೀಯ ಮಟ್ಟದ ಸಾಧನೆಗಳಿಗೆ ಮಾನ್ಯತೆ ನೀಡುತ್ತದೆ.
ವಿಶ್ವಗುರು ಬಸವಣ್ಣನವರ 432 ವಚನಗಳಿಗೆ ಎಐ (AI) ಬಳಸಿ ಸಂಗೀತ ನೀಡಿದ್ದ ಹಾದಿಮನಿ, ಆ ಪೈಕಿ 409 ವಚನಗಳನ್ನು ಅತ್ಯಂತ ಕಲಾತ್ಮಕವಾಗಿ ಪ್ರಸ್ತುತಪಡಿಸಿದ್ದಾರೆ.
ಹಾದಿಮನಿ ಕೊಡುಗೆಯನ್ನು ಅಸಾಧಾರಣವೆಂದು ಪರಿಗಣಿಸಿ ‘ಏಷ್ಯಾ ಬುಕ್ ಆಫ್ ರೆಕಾರ್ಡ್ಸ್’ ಸಂಸ್ಥೆಯು ಇವರಿಗೆ ಅಧಿಕೃತ ದಾಖಲೆಯ ಮಾನ್ಯತೆಯ ಜೊತೆಗೆ ಅತ್ಯಂತ ಪ್ರತಿಷ್ಠಿತವಾದ “ಗ್ರ್ಯಾಂಡ್ ಮಾಸ್ಟರ್” (Grand Master) ಪ್ರಮಾಣಪತ್ರ ನೀಡಿ ಗೌರವಿಸಿದೆ.
