ಬಸವಕಲ್ಯಾಣ
ಭಾಲ್ಕಿ ಶ್ರೀಮಠದ ಪೀಠಾದ್ಯಕ್ಷರಾದ ಪೂಜ್ಯ ಗುರುಬಸವ ಪಟ್ಟದ್ದೇವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದವರು ಸ್ವಾಮೀಜಿಯವರ ಕ್ಷಮೆ ಕೇಳದಿದ್ದಲ್ಲಿ ಉಗ್ರಹೋರಾಟ ಮಾಡಲಾಗುವದು ಎಂದು ರಾಷ್ಟ್ರೀಯ ಬಸವದಳ ತಾಲೂಕಾ ಅಧ್ಯಕ್ಷ ರವೀಂದ್ರ ಕೋಳಕುರ ಎಚ್ಚರಿಕೆ ಕೊಟ್ಟಿದ್ದಾರೆ.
ಕನ್ನಡ ಉಳಿಸಿದ ಮಠ, ಸಾಮರಸ್ಯದ ಕೇಂದ್ರವಾಗಿರುವ ಮಠದ ಸ್ವಾಮೀಜಿಯವರು ಅನ್ಯಧರ್ಮದ ಜಾತ್ರೆಗೆ ಆಹ್ವಾನ ನೀಡಿರುವ ವಿಡಿಯೋ ಮುಂದಿಟ್ಟುಕೊಂಡು ಅವರ ಬಗ್ಗೆ ಮನಬಂದಂತೆ ಮಾತನಾಡಿರುವುದು ಲಿಂಗಾಯತ ಧರ್ಮೀಯರಿಗೆ ನೋವನ್ನುಂಟು ಮಾಡಿದೆ.
ಸ್ವಾಮೀಜಿಯವರು ಮಾಡುತ್ತಿರುವ ಸಾಮಾಜಿಕ ಕಾರ್ಯ, ವಿವಿಧ ಸಮುದಾಯದ ಬಡಮಕ್ಕಳಿಗೆ, ಅನಾಥ ನಿರ್ಗತಿಕ ಮಕ್ಕಳಿಗೆ ನೀಡುತ್ತಿರುವ ಉಚಿತ ವಸತಿ ಮತ್ತು ಶಿಕ್ಷಣದಿಂದ ಶ್ರೀಮಠದ ಬಗ್ಗೆ ಜನಸಾಮಾನ್ಯರಲ್ಲಿ ಅಪಾರ ಗೌರವ ಹೆಚ್ಚುತ್ತಿದೆ.
ಈ ಗೌರವ ಸಹಿಸದ ಕೆಲವರು ಮಠದ ಸ್ವಾಮೀಜಿಯವರ ಬಗ್ಗೆ ಅಪಪ್ರಚಾರ ಮಾಡುವುದರ ಹಿಂದೆ ಬಹಳ ದೊಡ್ಡ ಷಡ್ಯಂತರ ನಡೆಯುತ್ತಿದ್ದು ಆ ಬಗ್ಗೆ ಸೂಕ್ತ ತನಿಖೆ ನಡೆಸಲು ಒತ್ತಾಯಿಸಿದ್ದಾರೆ.
ಸ್ವತಂತ್ರ ಲಿಂಗಾಯತ ಧರ್ಮದ ಮಾನ್ಯತೆ ಹೋರಾಟ, ಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಘೋಷಣೆ ಮತ್ತು ಬಸವ ಸಂಸ್ಕೃತಿ ಅಭಿಯಾನ ಯಶಸ್ವಿಯಾಗಿ ನಡೆಯಲು ಸ್ವಾಮೀಜಿಯವರ ಮಹತ್ವದ ಕೊಡುಗೆಯಿದೆ.
ಇದನ್ನು ಸಹಿಸದೆ ಇವರ ಗೌರವ ಮತ್ತು ಬಸವ ಭಕ್ತರ ಮನೋಬಲ ಕಡಿಮೆ ಮಾಡುವ ಉದ್ದೇಶದಿಂದ ಈ ಟೀಕೆಗಳು ನಡೆಯುತ್ತಿದ್ದು ಇದರ ಎಲ್ಲಾ ಲಿಂಗಾಯತರು ಜಾಗೃತರಾಗಿ ಒಗ್ಗಟ್ಟಿನಿಂದ ಖಂಡಿಸಬೇಕು ಎಂದು ಕೋಳಕುರ ವಿನಂತಿಸಿದ್ದಾರೆ.

Arivugedigalaada linga kattida nammavare namage shatrugalagiddaare. Ella sharanara bagge odade, tilidukollade kesari habbisuva suddigale ivarige vedavakya. Avaryaru munde iruvadilla adannadaru ivarige kaanabekalla.
Adaru lingayatavannu alisuva yaava gandu uttilla innu.
Jai Basavesha
ಒಳ್ಳೆಯ ಹೆಜ್ಜೆ ಇಟ್ಟಿರುವ ನಿಮಗೆ ಧನ್ಯವಾದಗಳು
ಬಸವ ವಿರೋಧಿ ಹಿಂದೂ ಹೆಸರಲ್ಲಿ ನಡೆಯುವ ಹಿಂದೂ ಲಿಂಗಾಯತ ಸೋಗಿನ ಜನ ಅವರ ಮುಖವಾಡ ಕಳಚಿ ಹಾಕಿರಿ 👏🏻ಶರಣು 🙏🏻🙏🏻