ಇಂದಿನಿಂದ ನಮ್ಮೂರಿನಲ್ಲಿ ಶ್ರಾವಣ ಸಂಭ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ಶ್ರಾವಣ ಪ್ರವಚನ ಸಾರ-2

ಭಾಲ್ಕಿ:

ಇಲ್ಲಿನ ಹಿರೇಮಠ ಸಂಸ್ಥಾನದ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರ ದಿವ್ಯ ಮಾರ್ಗದರ್ಶನದಲ್ಲಿ ನಾಡಿನ ಖ್ಯಾತ ಪ್ರವಚನಕಾರರು, ಅನುಭಾವಿಗಳಿಂದ ಅನೇಕ ಕಡೆ ಶ್ರಾವಣ ಮಾಸದ ನಿಮಿತ್ಯ ಪ್ರವಚನ ಏರ್ಪಡಿಸುವ ಮೂಲಕ ಬಸವತತ್ವ ಪ್ರಸಾರ ಕಾರ್ಯ ಮಾಡಲಾಗಿದೆ.

ಪೂಜ್ಯರ ಮಾರ್ಗದರ್ಶನದಲ್ಲಿಯೇ ಪೂಜ್ಯ ಗುರುಬಸವ ಪಟ್ಟದ್ದೇವರು ಅವರಿಂದ ಸುಮಾರು 30 ಹಳ್ಳಿಗಳಲ್ಲಿ ಬಸವತತ್ವ ಪ್ರಸಾರ ಜೊತೆಗೆ ವ್ಯಸನಮುಕ್ತ ಸಮಾಜದ ನಿರ್ಮಾಣ, ಕೌಟುಂಬಿಕ ಮೌಲ್ಯಗಳ ಅಭಿವೃದ್ಧಿ, ಹಾಗೂ ರಾಷ್ಟ್ರಭಕ್ತಿ ಬಿತ್ತುವ ಸದುದ್ದೇಶದಿಂದ ಆಗಸ್ಟ್ 16 ರಿಂದ ಸೆಪ್ಟಂಬರ್ 13 ರವರೆಗೆ ಪ್ರತಿದಿನ ಸಾಯಂಕಾಲ 6 ರಿಂದ 8 ಗಂಟೆವರೆಗೆ ವೈಶಿಷ್ಟ್ಯಪೂರ್ಣ ಶ್ರಾವಣ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

16ರಂದು ಸಾಯಂಕಾಲ ತರನಳ್ಳಿ ಗ್ರಾಮದಿಂದ ಪ್ರಾರಂಭವಾಗುವ ಈ ಶ್ರಾವಣ ಸಂಭ್ರಮ ಅನುಕ್ರಮವಾಗಿ ಹರನಾಳ, ಕುರುಬಖೇಳಗಿ, ದಾಡಗಿ, ಕರಡ್ಯಾಳ, ಏಣಕೂರು, ಸಿದ್ಧಾಪೂರವಾಡಿ, ಲಂಜವಾಡ, ತಳವಾಡ(ಕೆ), ಆನಂದವಾಡಿ, ಕದಲಾಬಾದ, ಕೋನಮೇಳಕುಂದಾ, ತೇಗಂಪೂರ, ಶೇಮಷಾಪುರವಾಡಿ, ಹುಣಜಿ(ಕೆ), ಸಿದ್ಧೇಶ್ವರ, ಭಾಗ್ಯನಗರ, ಕೋಟಗ್ಯಾಳ, ಬಾಜೋಳಗಾ, ಬೀರಿ(ಕೆ), ಗೊರನಾಳ, ಡೊಂಗರಗಿ, ಜೈನಾಪೂರ, ಚೀರಿ(ಕೆ), ಹಲಸಿ(ಎಲ್)ಯಲ್ಲಿ ಮುಕ್ತಾಯಗೊಳ್ಳಲಿದೆ.

ಪ್ರತಿನಿತ್ಯ ಪೂಜ್ಯರು ಈ ಗ್ರಾಮಗಳಿಗೆ ಆಗಮಿಸಿ, ಭಕ್ತರ ಮನೆಯಲ್ಲಿ ಪೂಜೆ, ಶಿವಯೋಗ ನಡೆಸಿಕೊಟ್ಟು, ವಚನ ಭಜನೆಯ ಮೂಲಕ ಸಭೆಗೆ ಆಗಮಿಸಿ, ಪ್ರಾರ್ಥನೆ, ಗುರುಬಸವ ಪೂಜೆ ನೆರವೇರುತ್ತದೆ. ಪೂಜ್ಯರಿಂದ ಪ್ರವಚನ ನಡೆಯುತ್ತದೆ.

ಪ್ರವಚನ ನಂತರ ಶ್ರೀಮಠದ ಪ್ರಸಾದ ನಿಲಯದ ವಿದ್ಯಾರ್ಥಿಗಳಿಂದ ‘ಬಸವ ಆಸ್ತಿ’ ಎಂಬ ಕಿರು ರೂಪಕ ಪ್ರದರ್ಶನ ನಡೆಯುತ್ತದೆ. ಎಲ್ಲ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ‘ನಮ್ಮೂರಿನಲ್ಲಿ ಶ್ರಾವಣ ಸಂಭ್ರಮ’ ಯಶಸ್ವಿಗೊಳಿಸಲು ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *