25ನೇ ಕಲ್ಯಾಣ ಪರ್ವ ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ

ಸಂಗಮೇಶ ಜವಾದಿ
ಸಂಗಮೇಶ ಜವಾದಿ

ಬಸವಕಲ್ಯಾಣ:

25ನೇ ಕಲ್ಯಾಣ ಪರ್ವ ಉತ್ಸವ, ಬೆಳ್ಳಿಹಬ್ಬ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಹಾಗೂ ಅಚ್ಚುಕಟ್ಟಾಗಿ ಆಚರಣೆ ಮಾಡೋಣ ಎಂದು ಪೂಜ್ಯ ಸಿದ್ದರಾಮೇಶ್ವರ ಸ್ವಾಮೀಜಿ ಕರೆ ನೀಡಿದರು.

ನಗರದ ಬಸವ ಮಹಾಮನೆ ಮಹಾಮಠದಲ್ಲಿ ಕಲ್ಯಾಣ ಪರ್ವ 25ನೇ ಉತ್ಸವದ ಅಂಗವಾಗಿ ಈಚೆಗೆ ಆಯೋಜಿಸಿದ್ದ ಪೂರ್ವಸಿದ್ಧತಾ ಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

“ಕಳೆದ 24 ವರ್ಷಗಳಿಂದಲೂ ಅತ್ಯಂತ ಅರ್ಥಪೂರ್ಣವಾಗಿ ಕಲ್ಯಾಣ ಪರ್ವಗಳನ್ನು ಆಚರಿಸಿಕೊಂಡು ಬರಲಾಗಿದೆ. ಈ ಬಾರಿಯ ಬೆಳ್ಳಿಹಬ್ಬವನ್ನೂ ಅಷ್ಟೇ ವಿಶಿಷ್ಟವಾಗಿ, ವೈಚಾರಿಕ ನೆಲೆಯಲ್ಲಿ ಹಾಗೂ ಶಿಸ್ತುಬದ್ಧವಾಗಿ ಆಚರಿಸಿ, ಜಾಗತಿಕ ಲೋಕಕ್ಕೆ ಬಸವತತ್ವ ಸಂದೇಶ ಮುಟ್ಟಿಸುವ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಸರ್ವರ ಸಹಕಾರ, ಸಹಮತ ಅಗತ್ಯ” ಎಂದು ಶ್ರೀಗಳು ನುಡಿದರು.

ಸಭೆಯಲ್ಲಿ ಅನೇಕ ಗಣ್ಯರು ಮಾತನಾಡಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ, ಬೆಳ್ಳಿಹಬ್ಬ ಯಶಸ್ವಿಗೊಳಿಸಲು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪೂಜ್ಯ ಲಾವಣ್ಯದೇವಿ ಮಾತಾಜಿ, ಬಸವಕುಮಾರ ಸ್ವಾಮೀಜಿ, ಜ್ಞಾನೇಶ್ವರಿ ಮಾತಾಜಿ, ಬಸವಯೋಗಿ ಸ್ವಾಮೀಜಿ, ಅನಿಮಿಷಾನಂದ ಸ್ವಾಮೀಜಿ, ವಿಜಯಾಂಬಿಕೆ ಮಾತಾಜಿ ದಿವ್ಯ ಉಪಸ್ಥಿತರಿದ್ದರು.

ಪ್ರಮುಖರಾದ ಬಸವರಾಜ ಬುಳ್ಳಾ, ಸೋಮಶೇಖರ ಪಾಟೀಲ ಗಾದಗಿ, ಶಂಕ್ರಪ್ಪ ವೀರೇಶ, ಚಂದ್ರಮೌಳಿ, ರಾಜೇಂದ್ರ ಜೊನ್ನಕೇರಿ, ಸುರೇಶ ಸ್ವಾಮಿ, ರವೀಂದ್ರ ಕೊಳಕೋರ, ಸಂಗಮೇಶ ಜವಾದಿ, ಆಕಾಶ ಖಂಡಾಳೆ ಸೇರಿದಂತೆ ಹೈದರಾಬಾದ, ಬಳ್ಳಾರಿ, ಕಲಬುರಗಿ, ಬೀದರ ಜಿಲ್ಲೆಗಳಿಂದ ಆಗಮಿಸಿದ ನೂರಾರು ಬಸವಾಭಿಮಾನಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಸೋಮವಾರ ‘ಕಲ್ಯಾಣ ಪರ್ವ’ ಉತ್ಸವದ ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
Leave a comment

Leave a Reply

Your email address will not be published. Required fields are marked *