ಚನ್ನಬಸವಾಶ್ರಮದಲ್ಲಿ ಕುಂಬಾರ ಗುಂಡಯ್ಯ, ಕುರುಬ ಗೊಲ್ಲಾಳ ಶರಣರ ಜಯಂತಿ

ಬಸವ ಮೀಡಿಯಾ
ಬಸವ ಮೀಡಿಯಾ

ಭಾಲ್ಕಿ:

ಚನ್ನಬಸವಾಶ್ರಮದಲ್ಲಿ ಕುಂಬಾರ ಗುಂಡಯ್ಯ ಮತ್ತು ಕುರುಬ ಗೊಲ್ಲಾಳ ಶರಣರ ಜಯಂತಿ ಹಾಗೂ 324ನೆಯ ಶರಣ ಸಂಗಮ ಕಾರ್ಯಕ್ರಮ ಜರುಗಿತು.

ಸಾನಿಧ್ಯ ವಹಿಸಿ ಪೂಜ್ಯ ಗುರುಬಸವ ಪಟ್ಟದ್ದೇವರು ಆಶೀರ್ವಚನ ನೀಡುತ್ತಾ, ಕುಂಬಾರ ಗುಂಡಯ್ಯ ಮತ್ತು ಕುರುಬ ಗೊಲ್ಲಾಳ ಉಭಯ ಶರಣರು ಕಾಯಕದ ಮೂಲಕ ಕೈಲಾಸವೇ ಧರೆಗೆ ತಂದ ಮಹಾನ್ ಶರಣರು. ಉಭಯ ಶರಣರ ಚಿಂತನೆಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿವೆ.

ಶರಣರು ಅಂತರಂಗ ಮತ್ತು ಬಹಿರಂಗ ಶುದ್ಧಿಯ ಮಾರ್ಗ ತೋರಿಸಿದರು. ಹಣ, ಅಧಿಕಾರ, ಸಂಪತ್ತು ಇವುಗಳಿಂದ ನಿಜವಾದ ಸಮಾಧಾನ ದೊರೆಯಲು ಸಾಧ್ಯವಿಲ್ಲ. ಆದರೆ ಶರಣರ ಸಂಗದಿಂದ, ಅವರ ವಚನಗಳ ಅಧ್ಯಯನ ಮಾಡಿ, ಬದುಕಿನಲ್ಲಿ ಅಳವಡಿಸಿಕೊಳ್ಳುವುದರಿಂದ ಸಮಾಧಾನ ದೊರೆಯಲು ಸಾಧ್ಯವಿದೆ ಎಂದರು.

ಕುಂಬಾರ ಗುಂಡಯ್ಯ ಹಾಗೂ ಕುರುಬ ಗೊಲ್ಲಾಳೇಶ್ವರ 12ನೆಯ ಶತಮಾನದ ಮಹಾನ್ ಶರಣರು. ಅವರ ಜೀವನ ಸಂದೇಶ ಬೆಳಕಿನ ಕಿರಣಗಳು. ಶರೀರದ ಗಾಯಕ್ಕೆ ಔಷಧ ಇದ್ದಂತೆ. ಮನಸ್ಸಿನ ಗಾಯಕ್ಕೆ ಶರಣರ ವಚನಗಳೇ ದಿವ್ಯ ಔಷಧಿಯಾಗಿವೆ.

ಗುಂಡಯ್ಯ ಜನಿಸಿದ್ದು ಭಾಲ್ಕಿಯಲ್ಲಿ. ಗುಂಡಯ್ಯ ಹಾಗೂ ಧರ್ಮಪತ್ನಿ ಕೇತಲದೇವಿ ಗಡುಗೆ ತಯಾರಿಸುವ ಕುಂಬಾರಿಕೆ ಕಾಯಕ ಮಾಡುತ್ತಿದ್ದರು. ತಮ್ಮ ಕಾಯಕದಿಂದ ಶಿವನ ಒಲುಮೆ ಪಡೆದ ಮಹಾನುಭಾವರು. ಕಾಯಕ ಆದಾಯಕ್ಕೆ ಸೀಮಿತವಾಗಿರದೇ ಆನಂದಕ್ಕಾಗಿ ಮಾಡುತ್ತಿದ್ದರು ಎಂದರು.

ಕುರುಬ ಗೊಲ್ಲಾಳ ಅವರು ವಿಜಯಪುರ ಜಿಲ್ಲೆಯಲ್ಲಿ ಜನಿಸಿ, ಕಲ್ಯಾಣಕ್ಕೆ ಆಗಮಿಸಿ, ಶರಣ ಸಂಕುಲದಲ್ಲಿ ಭಾಗಿಯಾದರು. ಅವರು 10 ವಚನಗಳು ಬರೆಯುವ ಮೂಲಕ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ್ದಾರೆ ಎಂದು ಪ್ರೊ. ಶಂಭುಲಿಂಗ ಕಾಮಣ್ಣ ತಮ್ಮ ಅನುಭಾವವನ್ನು ಹಂಚಿಕೊಂಡರು.

ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಶೈಲಜಾ ತಳವಾಡೆ ಅವರು ವಹಿಸಿ, ರೋಟರಿ ಕ್ಲಬ್ ಅಂತರ್‌ರಾಷ್ಟ್ರೀಯ ಸಂಸ್ಥೆ. 125 ವರ್ಷಗಳಿಂದ ಕಾರ್ಯ ಮಾಡುತ್ತಿದೆ. ಇದು ಕೇವಲ ಸೇವಾ ಸಂಸ್ಥೆಯಾಗದೆ, ಶಿಕ್ಷಣ, ಸಮಾಜ, ಆರೋಗ್ಯ ಸೇವೆಗೆ ಆದ್ಯತೆ ನೀಡುತ್ತದೆ. ಅಂತಹ ಸಂಸ್ಥೆಯ ಭಾಲ್ಕಿ ತಾಲೂಕಿನ ಅಧ್ಯಕ್ಷರಾಗಿ ನನಗೆ ಅವಕಾಶ ದೊರೆತಿರುವುದು ನನ್ನ ಪುಣ್ಯ ಎಂದು ನುಡಿದರು.

ಭಾಲ್ಕಿ ತಾಲೂಕು ರೋಟರಿ ಕ್ಲಬ್‌ ಅಧ್ಯಕ್ಷರಾದ ಡಾ. ಶೈಲಜಾ ಡಾ. ಅನೀಲಕುಮಾರ ತಳವಾಡೆ, ಪ್ರಥಮ ಶೈಕ್ಷಣಿಕ ಸಾಹಿತ್ಯ ಸಮ್ಮೇಳದ ಸರ್ವಾಧ್ಯಕ್ಷರಾದ ವಿಜಯಕುಮಾರ ಪಾಟೀಲ ಯರನಳ್ಳಿ, ಜಿಲ್ಲಾ ಕನ್ನಡ ಮಹಿಳಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಮಲ್ಲಮ್ಮ ಆರ್. ಪಾಟೀಲ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಜೈರಾಜ ಪಾತ್ರೆ, ರೋಟರಿ ಕ್ಲಬ್ ಕಾರ್ಯದರ್ಶಿ ಪ್ರೊ. ಅಶೋಕ ರಾಜೋಳೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ ಬಿ.ಜಿ. ಪಾಟೀಲ, ರೋಟರಿ ಕ್ಲಬ್ ಖಜಾಂಜಿ ಅವಿನಾಶ ಮತ್ತೆ ಅವರಿಗೆ ಪೂಜ್ಯರಿಂದ ಆಶೀರ್ವದಿಸಿ ಸನ್ಮಾನಿಸಲಾಯಿತು.

ಜೈಪ್ರಕಾಶ ಕುಂಬಾರ ಮುಖ್ಯ ಅತಿಥಿಗಳಾಗಿ ಆಗಮಿಸಿದರು. ರಾಜು ಜುಬರೆ ವಚನ ಪ್ರಾರ್ಥನೆ ಮಾಡಿದರು. ದೀಪಕ ಠಮಕೆ ನಿರೂಪಿಸಿದರು. ಶ್ರೀದೇವಿ ಶಾಂತಯ್ಯಸ್ವಾಮಿ ಅವರಿಂದ ವಚನ ಗಾಯನ ನಡೆಯಿತು. ಕವನ ಶಾಂತಯ್ಯಸ್ವಾಮಿ ಅವರ ಹುಟ್ಟುಹಬ್ಬ ನಿಮಿತ್ಯ ಪೂಜ್ಯರು ಆಶೀರ್ವದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *