(ಬಸವಶಕ್ತಿ ಗೂಗಲ್ ಮೀಟ್ ಸರಣಿ ಉಪನ್ಯಾಸದ ವಿಡಿಯೋ)
ಗಂಗಾವತಿ
ಲಿಂಗಾಯತ ಧರ್ಮ ಮಾನ್ಯತೆಯ ಹೋರಾಟಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಿದ್ದ ಸಿದ್ದರಾಮಯ್ಯ ರಾಜಿನಾಮೆ ನೀಡಿದ್ದಾರೆ.
ಅವರ ನಿರ್ಗಮನದಿಂದ ಬದಲಾಗುತ್ತಿರುವ ರಾಜಕೀಯ ಚಿತ್ರಣದ ಬಗ್ಗೆ ಬಸವ ಸಂಘಟನೆಗಳು, ಕಾರ್ಯಕರ್ತರು ಜಾಗೃತರಾಗುವ ಅನಿವಾರ್ಯತೆಯಿದೆ.
ಈ ಬೆಳವಣಿಗೆಗಳನ್ನು ವಿಶ್ಲೇಷಿಸಲು ಬಸವ ರೇಡಿಯೋ ಹೆಸರಾಂತ ಚಿಂತಕರನ್ನು ಆಹ್ವಾನಿಸಿ ಐದು ದಿನಗಳ ಚರ್ಚೆ ನಡೆಸಿತು.
ಗಂಗಾವತಿಯ ಶರಣತತ್ವ ಚಿಂತಕ ಡಾ. ರಾಜಶೇಖರ ನಾರನಾಳ ಈ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು.
‘ಯಾವುದೇ ರಾಜಕಾರಣಿಯ ಆಗಮನ, ನಿರ್ಗಮನದ ಬಗ್ಗೆ ತಲೆ ಕೆಡಸಿಕೊಳ್ಳಬಾರದು. ಪಾರ್ಲಿಮೆಂಟ್ ಮುಂದೆ ಬಸವಣ್ಣನವರ ಪ್ರತಿಮೆ ನಿರ್ಮಿಸಿದ್ದು, ಕಚೇರಿಗಳಲ್ಲಿ ಫೋಟೋ ಇಡಿಸಿದ್ದು ಎಲ್ಲಾ ನಮ್ಮ ಮೂಗಿಗೆ ತುಪ್ಪ ಸವರುವ ಕೆಲಸ.
ನಮ್ಮ ಮೂಲ ಹೋರಾಟವಾದ ಲಿಂಗಾಯತ ಧರ್ಮ ಮಾನ್ಯತೆಗೆ ಯಾವ ರಾಜಕಾರಣಿಯೂ ಸ್ಪಂದಿಸಿಲ್ಲ.
ನಮ್ಮ ವಿಚಾರಗಳು ಸರಕಾರವನ್ನು ಮುಟ್ಟುತ್ತಿಲ್ಲ. ಲಿಂಗಾಯತ ಹೋರಾಟ ಜನ ಚಳುವಳಿಯಾಗಿ ರೂಪಿಸದಿದ್ದರೆ ಧರ್ಮ ಮಾನ್ಯತೆ ಸಿಗುವ ಸಾಧ್ಯತೆಯೇ ಇಲ್ಲ.
ನಾವು ಹಿಂದೂಗಳಲ್ಲ, ಅವೈದಿಕರು ಎಂದು ಹೇಳಲು ಜನ ಚಳುವಳಿ ಕಟ್ಟಬೇಕಿದೆ. ಕರ್ನಾಟಕದ ನೆಲ ಬಂಡಾಯದ ನೆಲ. ಬಸವಾದಿ ಶರಣರ ಸಿದ್ದಾಂತದ ಆಧಾರದ ಮೇಲೆ ಸಂಘಟಿತರಾಗಬೇಕು.
ಕೃಷಿ ಕಾಯ್ದೆ ವಿರುದ್ಧ ದೆಹಲಿಯಲ್ಲಿ ನಡೆದ ರೈತ ಹೋರಾಟ, ಕರ್ನಾಟಕದಲ್ಲಿ ನಡೆದ ಒಳ ಮೀಸಲಾತಿಯ ನಮಗೆ ಸ್ಫೂರ್ತಿಯಾಗಲಿ.
ಇದು ಸಂಘರ್ಷದ ಕಾಲಘಟ್ಟ. ಇಂದು ಕನ್ನೇರಿ ಸ್ವಾಮಿಯ ಸಮಾವೇಶಗಳಿಂದ ನಮ್ಮ ಅಸ್ಮಿತೆಗೆ ದಕ್ಕೆ ಬರುತ್ತಿದೆ. ತಳಮಟ್ಟದಿಂದ ನಿರಂತರ ಹೋರಾಟದ ಚಳುವಳಿ ಕಟ್ಟುವುದು ಅನಿವಾರ್ಯ, ಎಂದು ಹೇಳಿದರು.
