‘ಮನ ಶುದ್ಧವಾದಾಗ ತನುವಿನ ಎಲ್ಲಾ ಕಾರ್ಯಗಳು ಶುದ್ಧ’

ಸುಪ್ರೀತ ಪತಂಗೆ
ಸುಪ್ರೀತ ಪತಂಗೆ

ಬೀದರ :

ತನುವಿನ ಒಡೆಯ ಮನ. ಮನದ ಒಡೆಯ ಭಾವ. ತನುವನ್ನು ಮನ ನಿಯಂತ್ರಿಸಿದರೆ, ಮನವನ್ನು ಭಾವ ನಿಯಂತ್ರಿಸುತ್ತದೆ. ಮನ  ಶುದ್ಧವಾದಾಗ ತನುವಿನ ಎಲ್ಲಾ ಕಾರ್ಯಗಳು ಶುದ್ಧವಾಗುತ್ತವೆ ಎಂದು ಡಾ. ಪ್ರಿಯಾ ಎಲಿ ನುಡಿದರು.

ಲಿಂಗಾಯತ ಮಹಾಮಠ ಗೋರ್ಟಾ ಗ್ರಾಮದಲ್ಲಿ ನಡೆದ ಮಾಸಿಕ ಶರಣ ಸಂಗಮ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಶರಣರ ವಚನಗಳಲ್ಲಿ ಆರೋಗ್ಯವಿದೆ. ಮಿತ ವಾಕ್, ಮಿತ ನಿದ್ರೆ ಮತ್ತು ಮಿತ ಭೋಜನ ಮಾಡಿದರೆ ಯೋಗ ಸಿದ್ಧಿಸುತ್ತದೆ. ಚಂಚಲ ಮನಸ್ಥಿತಿಗೆ ಕಾರಣ ಅಸ್ತವ್ಯಸ್ಥ ಜೀವನಶೈಲಿ. ಸರಿಯಾದ ನಿದ್ರೆ ಸರಿಯಾದ ಊಟ ಮಾಡದಿದ್ದಾಗ ಮನಸ್ಸು ಚಂಚಲಗೊಳ್ಳುತ್ತದೆ. ದೈಹಿಕ ಮತ್ತು ಮಾನಸಿಕ ಸ್ವಸ್ಥರಾದಾಗ ನಿಜವಾದ ಆರೋಗ್ಯವಂತರು ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹುಲೂಸೂರಿನ ತಹಸೀಲ್ದಾರರಾದ ಶಿವಾನಂದ ಮೆತ್ರೆ, ಬಸವಕಲ್ಯಾಣ ಅಂತರಾಷ್ಟ್ರೀಯ ಪ್ರವಾಸಿ ತಾಣವಾಗುತ್ತದೆ. ಶರಣರು ಪಾದವಿಟ್ಟ ನೆಲ ಅದು ಪಾವನಭೂಮಿ. ಇಲ್ಲಿರುವ ನಾವೇ ಪುಣ್ಯವಂತರು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ವಿಜಯಲಕ್ಷ್ಮಿ ಕೌಟಿಗೆ, ಬಸವಣ್ಣನವರ ಕ್ರಾಂತಿ ಸಮಾನತೆಯ ಕ್ರಾಂತಿ. ಜಾತಿ, ವರ್ಣ, ವರ್ಗರಹಿತ, ಸಮಾಜ ನಿರ್ಮಾಣ ಮಾಡಿದರು. ಹೆಣ್ಣು – ಗಂಡೆಂಬ ಭೇದ ಅಳಿಸಿ ಸರ್ವರು ಸಮಾನರು ಎಂಬ ತತ್ವ ತಿಳಿಸಿದರು. ಅವರ ತತ್ವವನ್ನು ಬಿತ್ತುತ್ತಾ ತಮ್ಮ ಜೀವನವನ್ನು ಮುಡುಪಾಗಿಟ್ಟು ನಮ್ಮಂತ ಅನೇಕ ಜನರಿಗೆ ಸ್ಪೂರ್ತಿದಾಯಕರಾದವರು ಪೂಜ್ಯಶ್ರೀ ಅಕ್ಕ ಅನ್ನಪೂರ್ಣತಾಯಿ. ಅಕ್ಕನವರ  ಕನಸಿನಂತೆ ಪೂಜ್ಯ ಪ್ರಭುದೇವ ಮಹಾಸ್ವಾಮೀಜಿಯವರು ಹಗಲಿರಲು ಶ್ರಮಿಸುತ್ತಿದ್ದಾರೆ ಎಂದು ನುಡಿದರು.

ಸಾನಿಧ್ಯ ವಹಿಸಿ ಮಾತನಾಡಿದ ಲಿಂಗಾಯತ ಮಹಾಮಠದ ಪೀಠಾಧಿಪತಿ ಪೂಜ್ಯ ಪ್ರಭುದೇವ ಮಹಾಸ್ವಾಮೀಜಿ, ಯಾವ ದೃಷ್ಟಿಯಿಂದ ನೋಡಿದರೂ ಬಸವಣ್ಣನವರು ಪರಿಪೂರ್ಣ. ಸಂಸಾರದಲ್ಲಿ ಇದ್ದುಕೊಂಡೆ ಸದ್ಗತಿ ಕಂಡವರು. ಕಾಯಕವೇ ಕೈಲಾಸ ಎಂಬ ಸೂತ್ರವಿಡಿದು, ಸರ್ವರೂ ದುಡಿದುಣ್ಣಬೇಕು. ದುಡಿಯದೇ ಉಣ್ಣುವ ಹಕ್ಕು ಯಾರಿಗೂ ಇಲ್ಲ ಎಂದಿದ್ದರಿಂದ ಕಲ್ಯಾಣದಲ್ಲಿ ನೀಡುವವರು ಉಂಟು ಬೇಡುವವರಿಲ್ಲದ ಸಮೃದ್ಧಿ ರಾಜ್ಯವಾಗಿತ್ತು. ಇಂದು ಆ ಆದರ್ಶ ಬೆಳೆಸಿಕೊಳ್ಳಬೇಕಾಗಿದೆ, ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸ್ವಪ್ನ ಸಂತೋಷ ಪತಂಗೆ ಅವರು ರಾಜ್ಯಮಟ್ಟದ ಆದರ್ಶ ಶಿಕ್ಷಕ ದಂಪತಿ ಪ್ರಶಸ್ತಿಗೆ ಭಾಜನರಾಗಿದ್ದರಿಂದ ವಿಶೇಷ ಅಭಿನಂದನೆ ಸಲ್ಲಿಸಲಾಯಿತು.

ಷಟಸ್ಥಲ ಧ್ವಜಾರೋಹಣವನ್ನು ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಯೋಗೇಶ ಹಿರೇಮಠ ನೆರವೇರಿಸಿದರು.

ಶ್ಯಾಮಲಾ ಅಶೋಕ ಎಲಿ ವಚನ ಗಾಯನ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರಬಸಪ್ಪ ಅಕ್ಕಣ್ಣ ವಹಿಸಿದರು. ಗುರು ಪೂಜೆ ಮಂದಾಕಿನಿ ರವೀಂದ್ರ ಕಾದೇಪೂರೆ, ಭಕ್ತಿ ದಾಸೋಹ ಚಂದ್ರಮ್ಮ ನಾಗಶೆಟ್ಟೆಪ್ಪ ಕಾದೇಪೂರೆ ಅವರು ನೆರವೇರಿಸಿದರು.

ಬಾಬುರಾವ ರಾಜೋಳೆ, ಸುಭಾಷ ಪತಂಗೆ, ಚಂದ್ರಕಾಂತ ಕಣಜೆ, ಶಿವರಾಜ ಕನಕಟ್ಟೆ, ಸೋಮನಾಥಪ್ಪ ರಾಜೇಶ್ವರೆ, ಈಶ್ವರ ಕಣಜೆ ಮುಂತಾದವರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *