ಮೊಳಕಾಲ್ಮುರು
ತಾಲೂಕಿನ ಹಲವಾರು ಸಂಘಟನೆಗಳು ವಿಜಯ ಮಹಾಂತೇಶ್ವರ ಶಾಖಾಮಠದ ಸಹಯೋಗದಲ್ಲಿ ಬಿ.ಜಿ.ಕೆರೆ, ಬೊಮ್ಮಗೊಂಡಕೆರೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬಸವ ಜಯಂತಿ ಆಚರಿಸುತ್ತಿವೆ.
ತಾಲ್ಲೂಕಿನ ಬಿ.ಜಿ.ಕೆರೆಯಲ್ಲಿ ಸೋಮವಾರ ಸಿದ್ದಯ್ಯನಕೋಟೆ ಮಠದ ಬಸವಲಿಂಗ ಸ್ವಾಮೀಜಿ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ವಚನ ಸಾಹಿತ್ಯದ ಮೂಲಕ ಸಮಾಜ ತಿದ್ದುವ ಕಾರ್ಯವನ್ನು ಬಸವಣ್ಣ ಕೈಗೆತ್ತುಕೊಂಡರು. ಬಸವಣ್ಣ ಹಾಗೂ ಅಂಬೇಡ್ಕರ್ ಅವರ ಚಿಂತನೆಗಳು ಬಹುಮುಖ್ಯವಾಗಿ ಸಮ ಸಮಾಜ ನಿರ್ಮಾಣ ಮಾಡುವ ಮುಖ್ಯ ಆಶಯ ಹೊಂದಿವೆ,’ ಎಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಬಸವಣ್ಣನ ಭಾವಚಿತ್ರವನ್ನು ಗ್ರಾಮದ ಮುಖ್ಯಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಕಾರ್ಯಕ್ರಮವನ್ನು ವಿಜಯ ಮಹಾಂತೇಶ್ವರ ಶಾಖಾಮಠ, ಬಸವ, ಅಂಬೇಡ್ಕರ್ ಜನಕಲ್ಯಾಣ ಸಂಸ್ಥೆ, ಬಸವ ಕೇಂದ್ರ, ಚಿತ್ತರಗಿ ಚಿತ್ಥ್ಯೋತಿ ಸಾಂಸ್ಕೃತಿಕ ಕಲಾ ವೇದಿಕೆ ಸಂಯುಕ್ತವಾಗಿ ಹಮ್ಮಿಕೊಳ್ಳಲಾಗಿತ್ತು.
