ಅಕ್ಟೋಬರ್ ೧೩ರಿಂದ ೨೧ರವರೆಗೆ ಶರಣಸಂಸ್ಕೃತಿ ಉತ್ಸವ
ಚಿತ್ರದುರ್ಗ
ನಗರದಲ್ಲಿ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಪ್ರತಿವರ್ಷ ನಡೆಯುವ ಶರಣಸಂಸ್ಕೃತಿವನ್ನು ಈ ಬಾರಿ ಅಕ್ಟೋಬರ್ ೧೩ ರಿಂದ ೨೧ರವರೆಗೆ ಆಚರಿಸಲು ಶ್ರೀಮಠದಲ್ಲಿಂದು ನಡೆದ ಶರಣಸಂಸ್ಕೃತಿ ಉತ್ಸವ ಪೂರ್ವಸಿದ್ಧತಾ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಮಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅವರು ಉತ್ಸವದಲ್ಲಿ ೧೦ ಸಾವಿರ ಜನರಿಂದ ವಚನ ಝೇಂಕಾರ ನಡೆಯಲಿದೆ ಎಂದು ಹೇಳಿದರು.

ಜೊತೆಗೆ ಕ್ರೀಡೆ, ಕೃಷಿ, ಮಹಿಳಾ, ಮಕ್ಕಳ ಗೋಷ್ಠಿಗಳು, ಜಯದೇವ ಜಂಗೀಕುಸ್ತಿ, ಯುವಜನರಲ್ಲಿ ಅರಿವು ಮೂಡಿಸಲು ನಶೆಮುಕ್ತ ಭಾರತ ಜಾಥಾ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಜಯವಿಭವ ಜಗದ್ಗುರುಗಳವರ ಕುರಿತು ಚಿನ್ಮೂಲಾದ್ರಿ ಚಿದ್ರೂಪ, ಶಾಂತವೀರ ಜಗದ್ಗುರುಗಳ ಕುರಿತ ಬೃಹತ್ ಗ್ರಂಥ, ಜಯದೇವ ಜಗದ್ಗುರುಗಳ ಕುರಿತು ಕಾದಂಬರಿ ಬಿಡುಗಡೆ ಮಾಡಲಾಗುವುದು.

ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮಿಗಳು ಮಾತನಾಡಿ, ಚಿಕ್ಕದಾಗಿ ಪ್ರಾರಂಭವಾದ ಈ ಉತ್ಸವವು ಈಗ ದೊಡ್ಡದಾಗಿ ನಡೆಯುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜ್ಞಾನದಾಸೋಹ, ಅನ್ನದಾಸೋಹ ಕಾರ್ಯಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದರು.
ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು ಮಾತನಾಡಿ, ಮಠದ ಪರಂಪರೆಯಂತೆ ಶರಣಸಂಸ್ಕೃತಿ ಉತ್ಸವವು ನಿರಂತರವಾಗಿ ನಡೆದುಕೊಂಡು ಬಂದಿದೆ. ಉತ್ಸವದ ಯಶಸ್ಸಿಗಾಗಿ ಶ್ರೀಮಠವು ವಹಿಸುವ ಜವಾಬ್ದಾರಿಯನ್ನು ನಿರ್ವಹಿಸಲಾಗುವುದು ಎಂದು ಹೇಳಿದರು.
ಹೊಸದುರ್ಗದ ಕೆ.ಎಸ್. ಕಲ್ಮಠ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಕುರಿತು ಜನಪ್ರತಿನಿಧಿಗಳು ಅಧಿಕಾರಿಗಳ ಗೋಷ್ಠಿ, ಮಾನವೀಯ ಸಂಬಂಧಗಳು ಕಡಿಮೆಯಾಗಿ ಸಂಘರ್ಷಕ್ಕೆ ಕಾರಣವಾಗಿರುವ ಅಂಶಗಳ ಬಗ್ಗೆ, ಯುವಸಮೂಹವು ಮೊಬೈಲ್‌ಗಳು ಮತ್ತು ಮಾದಕ ವ್ಯಸನಿಗಳಾಗುತ್ತಿದ್ದು, ನಶೆಮುಕ್ತ ಭಾರತ ಕಾರ್ಯಕ್ರಮವನ್ನು ರೂಪಕದೊಂದಿಗೆ ಉತ್ಸವದ ವೇದಿಕೆಯಲ್ಲಿ ಆಯೋಜಿಸಲು ಅವಕಾಶ ಮಾಡಿಕೊಡುವಂತೆ ಕೋರಿದರು.

ಎಸ್.ಜೆ.ಎಂ. ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಸಿ. ಗುಡಸಿ, ಕೆಇಬಿ ಷಣ್ಮುಖಪ್ಪ, ಕಾಂಗ್ರೆಸ್ ಮುಖಂಡ ಎಂ.ಕೆ. ತಾಜಪೀರ್, ಪಟೇಲ್ ಶಿವಕುಮಾರ್, ಸೈಟ್ ಬಾಬಣ್ಣ, ಕೆ.ಟಿ. ನಂದೀಶ್, ಮಾಜಿ ನಗರಸಭಾಧ್ಯಕ್ಷೆ ಶ್ರೀಮತಿ ದೇವಿಕುಮಾರಿ ವಿಶ್ವನಾಥ್, ಬಾಪೂಜಿ ವಿದ್ಯಾಸಂಸ್ಥೆಯ ಕೆ.ಎಂ.ವೀರೇಶ್, ಕಮ್ಮಾರ ಸಮಾಜದ ಸಿ. ಹನುಮಂತಪ್ಪ, ರಡ್ಡಿ ಸಮಾಜದ ಡಾ. ಪಾಲಾಕ್ಷಪ್ಪ, ವೀರಶೈವ ಸಮಾಜದ ಕರ‍್ಯದರ್ಶಿ ಪಿ.ವೀರೇಂದ್ರಕುಮಾರ್, ಯುವಮುಖಂಡ ತುಮಕೂರಿನ ಶಶಿ ಹುಲಿಕುಂಟೆ, ಟಿಪ್ಪು ಸುಲ್ತಾನ್ ವೇದಿಕೆಯ ಖಾಸಿಂ ಅಲಿ, ಬಂಜಾರ ಸಮಾಜದ ರಾಜಾನಾಯ್ಕ್, ಕಣಿವೆಮಾರಮ್ಮ ತಿಪ್ಪೇಸ್ವಾಮಿ, ಹಿರಿಯೂರಿನ ಜೆಡಿಎಸ್ ಮುಖಂಡ ಜಯರಾಮ್ ಮೊದಲಾದವರು ಮಾತನಾಡಿ, ಈ ಬಾರಿಯ ಉತ್ಸವದ ಕಾರ್ಯಕ್ರಮಗಳಿಗೆ ನಮ್ಮೆಲ್ಲರ ಸಂಪೂರ್ಣ ಸಹಕಾರವಿದ್ದು ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಕ್ರಮ, ಎಸ್.ನಿಜಲಿಂಗಪ್ಪನವರ ಸ್ಮಾರಕದ ಬಳಿ ಒಂದು ಗೋಷ್ಠಿ ಸೇರಿದಂತೆ ಉತ್ಸವದ ಸಂದರ್ಭದಲ್ಲಿ ಸಮಾಜಮುಖಿ, ಸಂಸ್ಕಾರ ನೀಡುವ ಜನಪರ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸಲಹೆಗಳನ್ನು ನೀಡಿದರು.

ಬಸವಹರಳಯ್ಯ ಸ್ವಾಮೀಜಿ, ಮೇದಾರ ಕೇತೇಶ್ವರ ಸ್ವಾಮಿಗಳು, ತಿಪ್ಪೇರುದ್ರ ಸ್ವಾಮಿಗಳು, ಎಸ್.ಜೆ.ಎಂ. ವಿಶ್ವವಿದ್ಯಾಲಯದ ಕುಲಸಚಿವ ಗಣಾಚಾರಿ, ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ರಾಜೇಶ್, ಹಡಪದ ನಾಗರಾಜ್, ಶ್ರೀಮತಿ ಗಾಯತ್ರಿ ಶಿವರಾಂ, ಮಂಜಣ್ಣ, ಶ್ರೀಮತಿ ಇಂದಿರಾ ಜಯದೇವಮೂರ್ತಿ ವೇದಿಕೆಯಲ್ಲಿದ್ದರು.
ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು, ಚಿತ್ರದುರ್ಗ ನಗರದ ವಿವಿಧ ಸಮಾಜ, ಸಂಘ-ಸಂಸ್ಥೆಗಳ ಮುಖಂಡರು, ಎಸ್.ಜೆ.ಎಂ. ವಿದ್ಯಾಪೀಠದ ಶಾಲಾಕಾಲೇಜುಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ಕೆ.ಎಂ. ವೀರೇಶ್ ಸ್ವಾಗಸಿದರು. ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿದರು.

ಶ್ರೀಗುರುಬಸವಲಿಂಗಾಯನಮಃ
ವಿಶ್ವಬಸವಧರ್ಮ ವಿಶ್ವಕಾಯಕ ಸತ್ಯ ಶುದ್ಧ ಪ್ರಮಾಣಿಕ ಮಾರ್ಗದರ್ಶನ ಜಂಗಮ ಸುಕ್ಷೇತ್ರ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಅಸೂಟಿಶ್ರೀಫಲಹಾರ ಶಿವಯೋಗಿಗಳವರ ತಪೋಭೂಮಿಹೊಸಕೇರಿಬಸವನಗರ ಅಂಚೆ.ಮು.ತಿಮ್ಮಾಪೂರ ತಾ.ರಾಮದುರ್ಗ ಜಿ. ಬೆಳಗಾವಿ. ವಿಶ್ವಬಸವಧರ್ಮ ವಿಶ್ವದರ್ಶನ ಕನ್ನಡ ದಿನಪತ್ರಿಕೆ ಸಂಪಾದಕರಾದ. ಡಾ ಎಸ್ ಎಸ್ ಪಾಟೀಲ ಹುಬ್ಬಳ್ಳಿ ಹೊಸಕೇರಿಬಸವನಗರ ಶ್ರೀ ಮ.ನಿ.ಪ್ರ.ಸ್ವ.ಜ.ಮುರುಘರಾಜೇಂದ್ರ ಕೋರಣೇಶ್ವರ ಮಹಾಸ್ವಾಮಿಗಳು ಅಸೂಟಿಶ್ರೀಫಲಹಾರ ಶಿವಯೋಗಿಗಳವರ ತಪೋಭೂಮಿಹೊಸಕೇರಿಬಸವನಗರಗೌರವ ಸಂಪಾದಕರು ಆಧ್ಯಾತ್ಮ ವಿಭಾಗದ ಮುಖ್ಯಸ್ಥರು
ಹುಟ್ಟು ಹೊಂದೆಂಬುದಿಲ್ಲದ ದೇವಾ, ನಿಮ್ಮಿಂದ ನೀವೆ
ಶೂನ್ಯದಲ್ಲಿ ನಿಂದು ಸ್ವಯಂಭುವಾದಿರಲ್ಲ.
ಬೀಜ ವೃಕ್ಷದಂತೆ ಸಾಕಾರ ನಿರಾಕಾರವು ನೀವೆಯಾದಿರಲ್ಲ.
ಸಕಲವೆಲ್ಲಕ್ಕೆ ಮೂಲಿಗರಾದಿರೆಲ್ಲ.
ನಿಮ್ಮ ನಿಜವ ನೀವೇ ಅರಿವುತ್ತಿರ್ದಿರಲ್ಲ.
ನಿಮ್ಮ ಮಹಿಮೆಯ ನೀವೇ ಬಲ್ಲಿರಿ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.
ಆವ ಮಡಕೆಯಾಗಲಿ ಸ್ವಾದ
ಸಾಕಾರದಲ್ಲಿ ಭೇದವಿಲ್ಲ.
ಮಣ್ಣ ಮಡಕೆ ಒಕ್ಕಲಿಗನಲ್ಲಿ,
ಚಿನ್ನದ ಮಡಕೆ ಅರಮನೆಯಲ್ಲಿ.
ಅರಮನೆ ಗುರುಮನೆ ಹಿರಿದಾದ ಕಾರಣ-
ಹಾದರ ಸಲ್ಲದು ಕಾಣಾ, ತ್ರಿಪುರಾಂತಕಲಿಂಗವೆ
ಡಾ.ಎಸ್ ಎಸ್ ಪಾಟೀಲ ಸಂಪಾದಕರು ವಿಶ್ವದರ್ಶನ ಕನ್ನಡ ದಿನ ಪತ್ರಿಕೆಯ ಗೌರವ ಆಧುನಿಕ ತಂತ್ರಜ್ಞಾನ ಕ್ಷೇತ್ರದ ಆಧ್ಯಾತ್ಮ ವಿಭಾಗದ ಮುಖ್ಯಸ್ಥರು ಶ್ರೀ ಮ.ನಿ.ಪ್ರ.ಸ್ವ.ಜ ಮುರುಘರಾಜೇಂದ್ರ ಕೋರಣೇಶ್ವರ ಮಹಾಸ್ವಾಮಿಗಳು ಅಸೂಟಿಶ್ರೀಫಲಹಾರ ಶಿವಯೋಗಿಗಳವರ ತಪೋಭೂಮಿಹೊಸಕೇರಿಬಸವನಗರ ಅಂಚೆ.ಮು.ತಿಮ್ಮಾಪೂರ ತಾ.ರಾಮದುರ್ಗ ಜಿ.ಬೆಳಗಾವಿ