ರಾಷ್ಟ್ರೀಯ ಬಸವ ಸೈನ್ಯದಿಂದ ಮೆಲುಹೊದಿಕೆಗಳ ವಿತರಣೆ

ಬಸವರಾಜ ನಂದಿಹಾಳ
ಬಸವರಾಜ ನಂದಿಹಾಳ

ಬಸವನಬಾಗೇವಾಡಿ :

ಕಳೆದ ಹನ್ನೆರಡು ವರ್ಷಗಳಿಂದ ಪಟ್ಟಣದಲ್ಲಿರುವ ನಿರ್ಗತಿಕರಿಗೆ ಪ್ರತಿ ಚಳಿಗಾಲದಲ್ಲಿ ಬೆಚ್ಚಗಿನ ಹೊದಿಕೆಗಳನ್ನು ರಾಷ್ಟ್ರೀಯ ಬಸವ ಸೈನ್ಯದಿಂದ ವಿತರಿಸಲಾಗುತ್ತಿದೆ.

ಇದರಿಂದ ಅವರು ಚಳಿಯಿಂದ ರಕ್ಷಣೆ ಪಡೆದು ನೆಮ್ಮದಿಯಿಂದ ನಿದ್ದೆ ಮಾಡುತ್ತಾರೆ ಎಂಬುದು ನಮ್ಮಗಳ ಆಶಯವಾಗಿದೆ ಎಂದು ರಾಷ್ಟ್ರೀಯ ಬಸವಸೈನ್ಯದ ರಾಷ್ಟ್ರೀಯ ಸಂಚಾಲಕ ಶ್ರೀಕಾಂತ ಕೊಟ್ರಶೆಟ್ಟಿ , ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.

ಪಟ್ಟಣದ ಬಸ್ ನಿಲ್ದಾಣ, ಬಸವೇಶ್ವರ ದೇವಸ್ಥಾನ, ಹನುಮಾನ್ ಮಂದಿರ ಹಾಗೂ ಜಾಮಿಯಾ ಮಸೀದಿ ಪಕ್ಕದಲ್ಲಿ ಮಲಗುವ ನಿರ್ಗತಿಕರಿಗೆ ಶನಿವಾರ ರಾತ್ರಿ ಬೆಚ್ಚಗಿನ ಕಂಬಳಿಗಳನ್ನು ವಿತರಿಸಿ
ಮಾತನಾಡಿದರು.

ನಮ್ಮ ಸಂಘಟನೆಯಿಂದ ಕೊರೊನಾ ಮಹಾಮಾರಿಯ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಾರ್ವಜನಿಕರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಗಿತ್ತು. ಇದುವರೆಗೂ ಅನೇಕ ಜನಪರ ಮತ್ತು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಸಂಘಟನೆ ನಿರಂತರವಾಗಿ ತೊಡಗಿಸಿಕೊಂಡಿದೆ. ಸಮಾಜದ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವುದೇ ನಮ್ಮ ಸಂಘಟನೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡ ಮನ್ನಾನ ಶಾಬಾದಿ, ವಕ್ತಾರ ಪ್ರಶಾಂತ ಮುಂಜಾನೆ, ಆನಂದ ವನರೊಟ್ಟಿ, ಸಂಗಮೇಶ ಜಾಲಗೇರಿ, ಜಟ್ಟಿಂಗರಾಯ ಮಾಲಗಾರ, ದಯಾನಂದ ಜಾಲಗೇರಿ, ಮಹಾಂತೇಶ ಹೆಬ್ಬಾಳ, ಮಲ್ಲು ಬನಾಸಿ, ಶಿವಾನಂದ ಲಮಾಣಿ, ಸೋಹಿಲ್ ಬೈರವಾಡಗಿ, ಮಾರುತಿ ಗಾಯಕವಾಡ ಮತ್ತಿತರರು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LKx5yQpivBVC6opWuKbovh

Share This Article
Leave a comment

Leave a Reply

Your email address will not be published. Required fields are marked *