ಬೆಂಗಳೂರು
ವಿಶ್ವವಾಣಿ ಅಂಕಣಕಾರ ರವಿ ಹಂಜ್ ಅವರನ್ನು ಕೇರಳದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಶನಿವಾರ ಬೆಳಗ್ಗೆ ವಶಕ್ಕೆ ತೆಗೆದುಕೊಂಡಿದ್ದಾರೆ.
ಬಸವ ನಿಂದನೆ ಮಾಡಿರುವ ರವಿ ಹಂಜ್ ಅವರ ವಿರುದ್ಧ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಂತರ ತನಿಖೆಗೆ ಸಂಬಂಧಿಸಿದಂತೆ ಮಾರ್ಕೆಟ್ ಠಾಣೆಯ ಪೊಲೀಸರು ಹಂಜ್ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದರು.
ಈ ಹಿನ್ನೆಲೆಯಲ್ಲಿ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ರವಿ ಹಂಜ್ ಅವರನ್ನು ತಡೆದು ವಶಕ್ಕೆ ಪಡೆದ ಏರ್‌ಪೋರ್ಟ್ ಭದ್ರತಾ ಸಿಬ್ಬಂದಿ, ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದರು, ಎಂದು ಬೆಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬಸವ ಮೀಡಿಯಾಗೆ ತಿಳಿಸಿದರು.
ಸದ್ಯಕ್ಕೆ ಬೆಳಗಾವಿ ಪೊಲೀಸರು ರವಿ ಹಂಜ್ ಅವರನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಪ್ರಕ್ರಿಯೆ ನಡೆಸುತ್ತಿದ್ದಾರೆ.
ಸುಳ್ಳು ಹೇಳಿದ್ದ ಹಂಜ್
ವಿವಾದ ಭುಗಿಲೆದ್ದು ಬಸವ ಅನುಯಾಯಿಗಳಿಂದ ಪೊಲೀಸ್ ದೂರು ದಾಖಲಾಗುತ್ತಿದ್ದಂತೆಯೇ ಅಮೇರಿಕಾದ ಪ್ರಜೆಯಾದ ಹಂಜ್ ಚಿಕಾಗೋ ನಗರಕ್ಕೆ ಮರಳಿರುವೆ ಎಂದು ಮಂಗಳವಾರ ಫೇಸ್ಬುಕ್ ನಲ್ಲಿ ಹಾಕಿಕೊಂಡಿದ್ದರು.
ಪೊಲೀಸರನ್ನು ದಾರಿ ತಪ್ಪಿಸಲು ಹಂಜ್ ಆಡಿದ ನಾಟಕವಾಗಿ ಅದೀಗ ಕಾಣುತ್ತಿದೆ.
ಇಷ್ಟೊಂದೆಲ್ಲಾ ಪ್ರತಿಭಟನೆ ಆಗುತ್ತದೆ ಎಂದು ಗೊತ್ತಿದ್ದರೆ ಭಾರತದಲ್ಲೇ ಉಳಿಯುತ್ತಿದೆ ಎಂದು ಹಂಜ್ ಫೇಸ್ಬುಕ್ ನಲ್ಲಿ ಬಸವ ಸಂಘಟನೆಗಳಿಗೆ ಸವಾಲು ಹಾಕಿದ್ದರು.
ಬುಧವಾರ ಅವರ ಫೇಸ್ಬುಕ್ ಖಾತೆಯನ್ನು ಭಾರತದಿಂದ ಕೇಂದ್ರ ಸರಕಾರ ನಿಷೇದಿಸಿತು. ನಂತರ ಭೀತಿಯಿಂದ ಹಂಜ್ ತಾವೇ ತಮ್ಮ ಖಾತೆಯನ್ನು ಡಿಲೀಟ್ ಮಾಡಿಕೊಂಡರು.

ಪೊಲೀಸ್ ಇಲಾಖೆಗೆ ಧನ್ಯವಾದಗಳು 🙏
He should be jailed for life to teach as lession to the others wjo indulged in alteration of actual past events.
ಪೊಲೀಸ್ ಇಲಾಖೆಗೆ ಮತ್ತು ,…………… ಇಲಾಖೆಗೆ ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು
ರವಿ ಹಂಜ ಬಂಧಿಸಿದು ನಿಜವಾಗಿದ್ದರೆ ಪೋಲಿಸ ಇಲಾಖೆಗೆ ಧನ್ಯವಾದಗಳು