ಶಿವಯೋಗದ ರಹಸ್ಯ ವಿವರಿಸುವ ಷಣ್ಮುಖ ಶಿವಯೋಗಿಗಳ ವಚನಗಳು

ಪ್ರೇಮಕ್ಕ ಅಂಗಡಿ
ಪ್ರೇಮಕ್ಕ ಅಂಗಡಿ

ಷಣ್ಮುಖ ಶಿವಯೋಗಿಗಳ ಪ್ರವಚನ ಮಂಗಲ

ಬೈಲಹೊಂಗಲ :

ಯೋಗದ ಸಾರ್ಥಕತೆ ಶಿವಯೋಗದಲ್ಲಿ ಅಡಗಿದೆ. ಶರಣರ ಶಿವಯೋಗವು ವ್ಯಷ್ಟಿ ಸಮಷ್ಟಿಯ ಸಮನ್ವಯ ಸಾಧಿಸಿ ಸದೃಢ ಸಮಾಜ ನಿರ್ಮಾಣದ ಗುರಿ ಹೊಂದಿದೆ ಎಂದು ಹಿಮಾಲಯದ ಯೋಗ ಗುರು ನಿರಂಜನ ಶ್ರೀಗಳು ಹೇಳಿದರು.

ತಿಪ್ಪೇರುದ್ರಸ್ವಾಮಿಗಳು ಬರೆದ ಜಡದಲ್ಲಿ ಜಂಗಮ ಕೃತಿ ನನ್ನನ್ನು ಸ್ವಾಮಿಯನ್ನಾಗಿಸಿದೆ. ಷಣ್ಮುಖರ ವಚನಗಳಲ್ಲಿ ಯೋಗ, ಶಿವಯೋಗದ ರಹಸ್ಯ ಅಡಗಿದೆ ಯುವ ಯತಿಗಳ ಸಾಧನೆಗೆ ಈ ಕೃತಿ ಸಾಧನವಾಗಿದೆ ಅದನ್ನು ಅರಿತು ಆಚರಿಸಬೇಕೆಂದರು.

ಸ್ಥಳೀಯ ಪತ್ರಿ ಬಸವೇಶ್ವರ ಅನುಭವ ಮಂಟಪದಲ್ಲಿ ಶ್ರಾವಣ ಮಾಸದ ಪರಿಯಂತ ಸಾಗಿ ಬಂದ ಜೇವರಗಿ ಷಣ್ಮುಖ ಶಿವಯೋಗಿಗಳ ಪ್ರವಚನ ಮಂಗಲೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ನೇತೃತ್ವ ವಹಿಸಿದ ಶಿವಬಸವ ದೇವರು ಮಹಾತ್ಮರ ಜೀವನ ದರ್ಶನ ಪ್ರವಚನಗಳು ಮನದ ಮಲಿನತೆ ಕಳೆದು ಮಾಹಾದೇವನನ್ನಾಗಿಸುತ್ತವೆ. ನಿರಂತರ ಶ್ರವಣದಿಂದ ಸಾಧ್ಯವಾಗುವುದೆಂದರು.

ತಿಂಗಳ ಪರಿಯಂತ ಪ್ರವಚನ ನಡೆಸಿಕೊಟ್ಟ ಸಂಘದ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ ಮಂಗಲ ನುಡಿಗಳನಾಡುತ್ತಾ, ಅಚ್ಚುಕಟ್ಟಾಗಿ ಸಾಗಿ ಬಂದ ವಚನ ಚಿಂತನೆ, ವಚನ ಪಠಣ ದಾಸೋಹಿಗಳ ಸಹಾಯ, ಭಕ್ತರ ಭಕ್ತಿಯ ಪರಾಕಾಷ್ಟೆ ಯಶಸ್ವಿಗೆ ಕಾರಣವಾಗಿದೆ. ಜಾತಿ, ವರ್ಣ, ವರ್ಗ, ಲಿಂಗ, ಗ್ರಹಸ್ಥ ವಿರಕ್ತರ ಭೇದವಿಲ್ಲದ ಲಿಂಗಾಯತ ಧರ್ಮೀಯರ ಕೌಟುಂಬಿಕ ಎಲ್ಲ ಕಾರ್ಯಕ್ರಮಗಳು ನಿಜಾಚಾರಣೆಯಲ್ಲಿ ನಡೆಯಬೇಕೆಂದರು.

ಪತ್ರಯ್ಯ ಕುಲಕರ್ಣಿ ವಚನ ಚಿಂತನೆ ನಡೆಸಿ ಕೊಟ್ಜರು.

ಇದೇ ಸಂದರ್ಭದಲ್ಲಿ ಮಂಟಪದ ಸಧ್ಭಕ್ತರಾದ ಹಾಲಭಾಂವಿ ಮನೆತನದ  ದಾನೇಶ್ವರಿಯ ಗರ್ಭಲಿಂಗದಾರಣೆ (ಸೀಮಂತ) ಕಾರ್ಯಕ್ರಮವನ್ನು ಮುಕ್ತಾಯಕ್ಕ ಬಳಗದವರು ನಿಜಾಚರಣೆಯಲ್ಲಿ ನಡೆಸಿಕೊಟ್ಟರು.

ತಾಲೂಕ ಅತ್ಯುತ್ತಮ ಪ್ರಶಸ್ತಿ ಪುರಸ್ಕೃತೆ ವಿದ್ಯಾ ನೀಲಪ್ಪನವರ, ದಾಸೋಹಿಗಳಾದ ಸಂಗೀತಾ ಪ್ರಭು ರೇಶ್ಮಿ ಪ್ರೇಮಕ್ಕ ಗಂಗಣ್ಣ ಅಂಗಡಿ ದಂಪತಿಗಳನ್ನು ಸನ್ಮಾನಿಸಲಾಯಿತು.

ಸೇವೆಗೈದ ಕಮಲವ್ವ ಕಾಡನ್ನವರ, ಹನುಮಂತಪ್ಪ ಮಸ್ತನ್ನವರ, ಗಂಗಯ್ಯ ಮನವಳ್ಳಿಮಠ ಅವರನ್ನು ಶ್ರೀಗಳು ಸತ್ಕರಿಸಿದರು.

ಮೋಹನ ಬಸನಗೌಡ ಪಾಟೀಲ, ಅನ್ನಪೂರ್ಣ ಕನೋಜ, ದುಂಡಯ್ಯ ಕುಲಕರ್ಣಿ, ಪುಂಡಲೀಕ ಕಡಕೋಳ, ವೀರಪ್ಪ ಬೆಳಗಾವಿ, ಸದಾನಂದ ಹನಮಸೇಟ್, ವೀರಭದ್ರ ಕಾಪಸೆ, ಅಶೋಕ ಸಾಲಿ, ನಾಗನಗೌಡ ಪಾಟೀಲ, ಸದಾನಂದ ಚಾಪಗಾವಿ, ಮಹಾದೇವ ಕರಡಿಗುದ್ದಿ, ಗಂಗಪ್ಪ ಅಂಗಡಿ, ಶಿವಲೀಲಾ ಹುಲಿಕಟ್ಟಿ, ಮಂಗಲಾ ಅಕ್ಕಿ, ಗೌರಮ್ಮ ಕರ್ಕಿ, ಸಾವಿತ್ರಿ ಹೊತ್ತಿಗಿಮಠ, ದಾಕ್ಷಾಯಿಣಿ ಹುಬ್ಬಳ್ಳಿ, ಗೀತಾ ಅರಳಿಕಟ್ಟಿ, ಪ್ರಭಾ ಆನಂದ ಸೊಗಲದ ಉಪಸ್ಥಿತರಿದ್ದರು.

ರಾಜೇಶ್ವರಿ ದ್ಯಾಮನಗೌಡರ ಸ್ವಾಗತಿಸಿದರು. ಸುವರ್ಣ ಬಿಜಗುಪ್ಪಿ ವಂದಿಸಿದರು. ಮುಕ್ತಾಯಕ್ಕ ಅಜಗಣ್ಣ ಬಳಗ ಪ್ರಾರ್ಥಿಸಿತು. ಕಾಡಪ್ಪ ರಾಮಗುಂಡಿ ನಿರೂಪಿಸಿದರು. ಬಸವಭಕ್ತರು ಸೇರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
Leave a comment

Leave a Reply

Your email address will not be published. Required fields are marked *