ಮೈಸೂರಿನಲ್ಲಿ ಬಸವಾದಿ ಶರಣರ ಶಿವಯೋಗ ಚಿಂತನೆ, ಪ್ರಾತ್ಯಕ್ಷಿಕೆ ಕಾರ್ಯಕ್ರಮ

ಬಿ. ಚನ್ನಪ್ಪ
ಬಿ. ಚನ್ನಪ್ಪ

ಮೈಸೂರು:

ಇಲ್ಲಿನ ನಿವೇದಿತಾ ನಗರದ ನಿವಾಸಿ, ನೆಸ್ಲೆ ಕಂಪನಿಯ ಉದ್ಯೋಗಿ ಅರವಿಂದ ಮೂರ್ತಿ ದಂಪತಿಗಳ ಮನೆಯಲ್ಲಿ ರವಿವಾರ ಬೆಳಿಗ್ಗೆ 6:45 ರಿಂದ 8 ಘಂಟೆಯತನಕ ಬಸವಾದಿ ಶಿವಶರಣರ ಶಿವಯೋಗ ಚಿಂತನೆ ಹಾಗೂ ಪ್ರಾತ್ಯಕ್ಷಿಕೆ ನಡೆಯಿತು.

ಶಿವಯೋಗ ಕಾರ್ಯಕ್ರಮವನ್ನು ಮೈಸೂರಿನ ಶರಣೆ ಜಯಣ್ಣ ರತ್ನಮ್ಮ ಅವರು ನಡೆಸಿಕೊಟ್ಟರು. ಆರಂಭದಲ್ಲಿ ಷಟಸ್ಥಲ ಧ್ವಜಾರೋಹಣ ಮಾಡುವ ಮುಖಾಂತರ ಕಾರ್ಯಕ್ರಮ ಆರಂಭಿಸಲಾಯಿತು.

ಇಷ್ಟಲಿಂಗ ಯೋಗದಲ್ಲಿ ಪ್ರಾಮುಖ್ಯತೆ ಪಡೆದಿರುವ ವಿಭೂತಿ, ರುದ್ರಾಕ್ಷಿ, ಲಿಂಗಯೋಗಗಳ ಬಗ್ಗೆ ಸೇರಿದವರಿಗೆ ಮಾಹಿತಿಯನ್ನು ನೀಡಿ ಇಷ್ಟಲಿಂಗ ಯೋಗವನ್ನು ಮಾಡಿಸಲಾಯಿತು.

ನಂತರ ವಿಶ್ವದ ಕಲ್ಯಾಣಕ್ಕಾಗಿ ಬಸವಣ್ಣನವರು ನೀಡಿದ ತತ್ವ ಸಿದ್ಧಾಂತಗಳ ಬಗ್ಗೆ ವಚನಗಳ ಆಧಾರವಾಗಿ, ದೇಹ ಮತ್ತು ಮನಸ್ಸಿನ ಶುದ್ಧಿಗೆ ಬೇಕಾದಂತಹ ವಿಚಾರಗಳನ್ನು ನೀಡಿರುವ ವಿಷಯಗಳ ಬಗ್ಗೆ ಚಿಂತನೆ ನಡೆಸಲಾಯಿತು.

ನಂತರ ಪ್ರಸಾದ ದಾಸೋಹ ವ್ಯವಸ್ಥೆಯನ್ನು ಮಾಡಲಾಗಿತ್ತು.

ಕಾರ್ಯಕ್ರಮವನ್ನು ಮೂರು ತಿಂಗಳಿಂದ ನಡೆಸಲಾಗುತ್ತಿದ್ದು, ಹಲವು ಬಸವಭಕ್ತರ ಸಹಕಾರದೊಡನೆ ಯಶಸ್ವಿಯಾಗಿ ಮನೆಮನೆಗೆ ತಲುಪುತ್ತಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
1 Comment
  • ಉತ್ತಮ ಕಾರ್ಯಕ್ರಮ. ಇವರಂತೆ ಎಲ್ಲರ ಮನೆಯಲ್ಲೂ ಅರಿವು ಮೂಡಿಸುವ ಕೆಲಸ ಆಗಬೇಕಿದೆ

Leave a Reply

Your email address will not be published. Required fields are marked *

ಅಧ್ಯಕ್ಷರು, ಶ್ರೀಗುರುಬಸವೇಶ್ವರ ಸೇವಾ ಟ್ರಸ್ಟ್, ನಂಜನಗೂಡು